ಭಾರತದ ವೊಕೇಶನಲ್ ತರಬೇತಿಯಲ್ಲಿ ಉತ್ಕೃಷ್ಟತೆಯ ಕೇಂದ್ರ

By Nagaraja

ಜರ್ಮನಿ ಫೆಡರಲ್‍ನ ಅಧ್ಯಕ್ಷರಾದ ಜೋಚಿಮ್ ಗಾವ್ಕ್, ಇವರು ಭಾರತದ ಬೆಂಗಳೂರಿನ ಬಾಷ್ ವೊಕೇಶನಲ್ ಸೆಂಟರ್‍‌ಗೆ ಭೇಟಿ ನೀಡಿದರು. ಬಾಷ್ ತಾಂತ್ರಿಕತೆ ಮತ್ತು ಸೇವೆಗಳ ಕಂಪನಿಯಲ್ಲಿ ಬಾಷ್ ಲಿಮಿಟೆಡ್ ಮುಂಚೂಣಿಯಲ್ಲಿದ್ದು ಅಲ್ಲಿ ನೀಡುತ್ತಿರುವ ಕೌಶಲ್ಯ ವಿಕಸನಗಳ ಬಗ್ಗೆ ಸರ್ವೇಕ್ಷಣೆ ನಡೆಸಿದರು. ರಾಜಕೀಯ, ವ್ಯಾವಹಾರಿಕ ಮತ್ತು ಮಾಧ್ಯಮ ಪ್ರತಿನಿಧಿಗಳು ಗಾವ್ಕ್ ಜೊತೆಗಿದ್ದರು. ಈ ತಂಡವನ್ನು ರಾಬರ್ಟ್ ಬಾಷ್ ಜಿ.ಎಮ್.ಬಿ.ಎಚ್‌ನ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಸದಸ್ಯರೂ, ಏಷಿಯಾ ಪೆಸಿಫಿಕ್‍ನ ಪ್ರತಿನಿಧಿಯೂ ಆದ ಪೀಟರ್ ಟೀರೊಲ್ಲರ್ ಮತ್ತು ಬಾಷ್ ಲಿಮಿಟೆಡ್‍ನ ಆಡಳಿತ ವ್ಯವಸ್ಥಾಪಕರು ಮತ್ತು ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷರೂ ಆದ ಡಾ. ಸ್ಟೀಫನ್ ಬನ್ರ್ಸ್ ಸ್ವಾಗತಿಸಿದರು.

'ನಾವು ಆಡಳಿತ ನೀತಿಜ್ಞಾನದ ಅವಶ್ಯಕ ಅಂಗವಾಗಿ ಅಪ್ರೆಂಟಿಸ್‍ಶಿಪ್ ತರಬೇತಿಯನ್ನು ನೀಡುವುದುನ್ನು ಅವಶ್ಯಕ ಎಂದು ಭಾವಿಸಿದ್ದೇವೆ. ಇದರಿಂದಾಗಿ ಅನೇಕ ಯುವ ಜನತೆಯನ್ನು ಅವರ ವೃತ್ತಿ ಜೀವನಕ್ಕೆ ಅಣುಗೊಳಿಸುತ್ತಿದ್ದೇವೆ,' ಎಂದರು ಟೀರೋಲ್ಲರ್. 'ಐವತ್ತು ವರ್ಷಗಳಿಂದಲೂ ಅಧಿಕವಾಗಿ ಭಾರತದ ಬಾಷ್ ವೃತ್ತಿ ಸಂಬಂಧಿತ ತರಬೇತಿಗೆ ಸಹಾಯ ಮಾಡಲು ಅನುಭವಿ ತರಬೇತುದಾರರನ್ನು ಬೆಳೆಸಿದೆ. ಇದು ಗರಿಷ್ಠ ಗುಣಮಟ್ಟದ ಉತ್ಪನ್ನಗಳನ್ನು ಈ ಸ್ಪರ್ಧಾತ್ಮಕ ಕಾಲದಲ್ಲಿಯೂ ನೀಡಲು ನಮಗೆ ಸಹಾಯ ಮಾಡಿದೆ,' ಎಂದು ಅವರು ಮುಂದುವರಿಸಿ ಹೇಳಿದರು.


'ಫೆಡೆರಲ್ ಪ್ರೆಸಿಡೆಂಟರನ್ನು ಇಲ್ಲಿಯ ನಮ್ಮ ವೊಕೇಶನಲ್ ಟ್ರೈನಿಂಗ್ ಕೇಂದ್ರಕ್ಕೆ ಸ್ವಾಗತಿಸುವುದು ನಮಗೆ ಗೌರವ ತಂದಿದೆ. ಅವರ ಸಂದರ್ಶನವು ಆಂತಾರಾಷ್ಟ್ರೀಯ ಮಟ್ಟದಲ್ಲಿ ಕೌಶಲ್ಯ ವಿಕಸನಕ್ಕೆ ನಮ್ಮ ನಿರಂತರ ಶ್ರಮಕ್ಕೆ ನಮ್ಮನ್ನು ತೊಡಗಿಸಿಕೊಂಡಿದ್ದಕ್ಕೆ ದೃಢೀಕರಣವನ್ನು ನೀಡಿದೆ,' ಎಂದು ಡಾ. ಬನ್ರ್ಸ್ ಹೇಳಿದರು. 'ಇದು ಈ ವಿಭಾಗದಲ್ಲಿ ನಾವು ನಮ್ಮ ಶ್ರಮವನ್ನು ಗಟ್ಟಿಯಾಗಿ ಮುಂದುವರಿಸಲು ನಮಗೆಲ್ಲಾ ಪ್ರೇರಣೆಯಾಗಿದೆ.'

ಆಧುನಿಕ ಕೌಶಲ್ಯ ವಿಕಸನಕ್ಕೆ ಫೆಡರೆಲ್ ಪ್ರೆಸಿಡೆಂಟರನ್ನು ಪರಿಚಯಿಸಿದ್ದು: ಬಿ.ವಿ.ಸಿ.ಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಗಾವ್ಕ್‌ರವರನ್ನು ಕಾರ್ಯಾಗಾರದ ಸುತ್ತ ಕರೆದುಕೊಂಡು ಹೋಗಲಾಯಿತು. ಅವುಗಳಲ್ಲಿ ಮೆಕಾಟ್ರೋನಿಕ್ಸ್ ಲ್ಯಾಬ್‍ನಲ್ಲಿ ಅವರು ಅಲ್ಲಿನ ಅಪ್ರೆಂಟಿಸರೊಡನೆ ಮಾತುಕತೆ ನಡೆಸಿದರು ಮತ್ತು ವೊಕೇಶನಲ್ ಟ್ರೈನಿಂಗ್‍ನ ಸಾಮಾನ್ಯ ಮಾದರಿಯೊಂದರ ಅನುಭವವನ್ನು ಹೊಂದಿದರು.

ಫೆಡರೆಲ್ ಪ್ರೆಸಿಡೆಂಟರು ವೊಕೇಶನಲ್ ಟ್ರೈನಿಂಗನ್ನು ಪ್ರಶಂಸಿಸಿದರು. ಅವರು....1961ರಿಂದ ಯಶಸ್ಸಿನ ಮಾರ್ಗದಲ್ಲಿ ಜರ್ಮನಿಯ ಮಾದರಿಯ ವೊಕೇಶನಲ್ ಟ್ರೈನಿಂಗ್ ಆಧರಿಸಿ, ಬೆಂಗಳೂರಿನ ಬಿ.ವಿ.ಸಿ.ಯು ಬಹು ಕೌಶಲ್ಯದ ಮತ್ತು ಹಸ್ತಕೌಶಲ್ಯದ ಅನುಸಂಧಾನವನ್ನು ಅನುಸರಿಸುತ್ತಿದೆ. ಅವಧಿಯ ಶೇಕಡಾ 20ರಷ್ಟು ಸಮಯವನ್ನು ಥಿಯರೋಟಿಕಲ್ ಜ್ಞಾನವ್ಕಾಗಿ ಮೀಸಲಿಟ್ಟರೆ ಶೇಕಡಾ 30 ಸಮಯವನ್ನು ಬಿ.ವಿ.ಸಿ.ಯ ವಿವಿಧ ಲ್ಯಾಬ್‍ಗಳಲ್ಲಿ ತರಬೇತಿಗಾಗಿ ವಿನಿಯೋಗಿಸಲಾಗುತ್ತಿದೆ. ಉಳಿದ ಶೇಕಡಾ 50 ಸಮಯವನ್ನು ನಿಜ ಜೀವನದ ಉತ್ಪಾದನಾ ಪರಿಸದಲ್ಲಿ ಉತ್ಪಾದನಾ ಘಟಕಗಳಲ್ಲಿ ಬಳಸಲಾಗುತ್ತಿದೆ.

 Joachim Gauck

ವೊಕೇಶನಲ್ ಟ್ರೈನಿಂಗ್‍ಗೆ ಮಾದರಿ ಕೇಂದ್ರ: 1961ನೆಯ ಇಸವಿಯ ಆರಂಭದಲ್ಲಿ ಶುರುವಾಗಿದ್ದ ಬಿ.ವಿ.ಸಿ.ಯಲ್ಲಿ ಈತನಕ 2,400ಕ್ಕೂ ಹೆಚ್ಚು ಜನರು ತರಬೇತಿ ಹೊಂದಿದ್ದಾರೆ. ಅವರಲ್ಲಿ 211 ಜನ ಕಾರ್ಮಿಕ ಸಚಿವಾಲಯದ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯ್‍ಮೆಂಟ್ ಅಂಡ್ ಟ್ರೈನಿಂಗ್, ಇವರು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ಬಿ.ವಿ.ಸಿ.ಯು ಅತ್ಯುತ್ತಮ ತರಬೇತಿ ಕೇಂದ್ರವೆಂದು ಈತನಕ 46 ಬಾರಿ ಪರಿಗಣಿಸಲ್ಪಟ್ಟು ಭಾರತದ ರಾಷ್ಟ್ರಾಧ್ಯಕ್ಷರಿಂದ ಬಹುಮಾನ ಪಡೆದಿದೆ. ದೇಶದಲ್ಲಿ ಇನ್ನಾವುದೇ ಕಂಪನಿಯೂ ಈ ಗೌರವಕ್ಕೆ ಪಾತ್ರವಾಗಿಲ್ಲ. ಬಿ.ವಿ.ಸಿ. ಮಾದರಿಯನ್ನೇ ಮೂಲವಾಗಿಟ್ಟುಕೊಂಡು ಭಾರತ ಸರಕಾರವು ಅಪ್ರೆಂಟಿಸ್ ಆಕ್ಟ್ ಅನ್ನು 1961ರಲ್ಲಿಯೇ ಶಾಸನ ಮಾಡಿದೆ.

ನುರಿತ ಕಾರ್ಯಪಡೆಯನ್ನು ಒದಗಿಸುವ ದಿಶೆಯಲ್ಲಿ ಬಿ.ವಿ.ಸಿ.ಯು ದೇಶದ ಬೆಳವಣಿಗೆಗೂ ಕೊಡುಗೆ ನೀಡುತ್ತಿದೆ. ಹೇಗೆಂದರೆ ಈ ಪ್ರಶಿಕ್ಷುಗಳು (ಅಪ್ರೆಂಟಿಸರು) ಅತ್ಯುನ್ನತ ಮಟ್ಟದ ಆಂತಾರಾಷ್ಟ್ರೀಯ ಮಟ್ಟದ ತರಬೇತಿಯನ್ನು ಪಡೆಯುವುದರಿಂದ ಅವರು ದೇಶದಲ್ಲಿ ಅಂತೆಯೇ ವಿದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. 600ಕ್ಕೂ ಹೆಚ್ಚಿನ ಬಾಷ್ ಅಪ್ರೆಂಟಿಸರು ವಿದೇಶಗಳಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ - ಅವುಗಳಲ್ಲಿ ಮುಖ್ಯವಾಗಿ ಆಸ್ಟ್ರೇಲಿಯಾದಲ್ಲಿ.

ಇದಲ್ಲದೇ ಸಾಮಾಜಿಕ ಜವಾಬ್ದಾರಿಯಾಗಿ, ಬಿ.ವಿ.ಸಿ.ಯು ನಿರಂತರವಾಗಿ ಉದ್ಯೋಗಾಧಾರಿತ ತರಬೇತಿ ಶಿಬಿರಗಳನ್ನು ನ್ಯಾಶನಲ್ ಸೆಂಟರ್ ಆಫ್ ವೊಕೇಶನಲ್ ಟ್ರೈನಿಂಗ್ ಜೊತೆ ನಡೆಸುತ್ತಿದ್ದು, ಯುವ ಜನತೆಯು ಅವರ ಜೀವನಾಧಾರಿತ ಕಸುಬನ್ನು ಕಲಿಯಲು ಅವಕಾಶ ದೊರಕಿಸುತ್ತದೆ.

ಜರ್ಮನ್ ವೊಕೇಶನಲ್ ಟ್ರೈನಿಂಗ್‍ನ ಅಂತಾರಾಷ್ಟ್ರೀಯ ವಿಸ್ತರಣೆ ಬಾಷ್ ಗ್ರೂಪ್ ಯಶಸ್ವಿಯಾಗಿ ಜರ್ಮನ್ ಮಾದರಿಯ ವೊಕೇಶನಲ್ ಟ್ರೈನಿಂಗ್ ಅನ್ನು ವಿಶ್ವದಾದ್ಯಂತ ವಿಸ್ತರಿಸಿದ್ದು, ಅದು ತರಬೇತಿಯ ಎಲ್ಲಾ ಹಂತಗಳಲ್ಲಿ ಜಾಗತಿಕ ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಬಿ.ವಿ.ಸಿ. ಬೆಂಗಳೂರು ಈ ಸಂಪ್ರದಾಯವನ್ನು ಮುಂದುವರಿಸುತ್ತಿದೆ ಮತ್ತು ಅದು ಯುವಕರನ್ನು ಇಂದಿನ ಕೈಗಾರಿಕೆಗಳ ಅವಶ್ಯಕತೆಗಳಿಗನುಗುಣವಾಗಿ ಸಿದ್ಧಪಡಿಸುತ್ತಿರುವುದಕ್ಕೆ ಸಾರ್ವತ್ರಿಕವಾಗಿ ಪರಿಗಣಿಸಲ್ಪಟ್ಟಿದೆ. ಅಂತಾರಾಷ್ಟ್ರೀಯವಾಗಿ 20ಕ್ಕೂ ಹೆಚ್ಚು ಬಾಷ್ ಸ್ಥಾವರಗಳು ಇವೆ. ಅವುಗಳಲ್ಲಿ ಚೀನಾ, ಭಾರತ, ಬ್ರೆಜಿಲ್ ಮತ್ತು ಟರ್ಕಿ ದೇಶಗಳು ಬಾಷ್‍ದ ಪ್ರಮಾಣಿತ ತರಬೇತಿ ಕೇಂದ್ರಗಳನ್ನು ಹೊಂದಿವೆ. ವಿಯಟ್ನಾಮ್ ಮತ್ತು ಥಾಯ್‍ಲ್ಯಾಂಡ್‍ನಂತಹ ಹೊಸ ಸ್ಥಳಗಳಲ್ಲಿಯೂ ಇದೇ ಮಾದರಿಯನ್ನು ಅನುಸರಿಸುವ ಕಾರ್ಯ ನಡೆಯುತ್ತಿದೆ. ಇಂದು ವಿಶ್ವದಾದ್ಯಂತ ಇರುವ 6,100ಕ್ಕೂ ಹೆಚ್ಚು ಯುವ ಅಪ್ರೆಂಟಿಸರು ಬಾಷ್‍ನಲ್ಲಿ ಅಕ್ಯುಪೇಶನಲ್ ಟ್ರೈನಿಂಗ್ ಕಾರ್ಯಕ್ರಮದವರಾಗಿದ್ದಾರೆ. ಅವರಲ್ಲಿ ಸುಮಋಉ 4,300 ಜನ ಜರ್ಮನಿಯಲ್ಲಿದ್ಧಾರೆ.

Most Read Articles

Kannada
English summary
German Federal President Joachim Gauck visits Bosch Vocational Center, Bangalore.
Story first published: Saturday, February 8, 2014, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X