ಮಹೀಂದ್ರಗೂ ತಟ್ಟಿದ ಕಾರ್ಮಿಕ ಮುಷ್ಕರ ಬಿಸಿ

By Nagaraja

ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಹಾಗೂ ಬಜಾಜ್ ಆಟೋ ಬೆನ್ನಲ್ಲೇ ಮಹೀಂದ್ರ ಆಂಡ್ ಮಹೀಂದ್ರದಲ್ಲೂ ಕಾರ್ಮಿಕ ಸಮಸ್ಯೆ ಭುಗಿಲೆದ್ದಿದೆ. ಬಲ್ಲ ಮೂಲಗಳ ಪ್ರಕಾರ ದೇಶದಲ್ಲಿ ಅತ್ಯಂತ ಹೆಚ್ಚು ಟ್ರಾಕ್ಟರ್ ಉತ್ಪಾದನೆಯನ್ನು ಹೊಂದಿರುವ ಮಹೀಂದ್ರದ ಘಟಕದಲ್ಲಿ ಕಾರ್ಮಿಕ ಮುಷ್ಕರದ ಬಿಸಿ ತಟ್ಟಿದೆ.

ಪಂಜಾಬ್‌ನ ಮೊಹಲಿಯಲ್ಲಿ ಸ್ಥಿತಗೊಂಡಿರುವ ಟ್ರಾಕ್ಟರ್ ತಯಾರಿಕ ಘಟಕದಲ್ಲಿ ಕೆಲವು ಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂಬ ಮಾಹಿತಿಯಿದೆ. ಹಾಗಿದ್ದರೂ ಇದು ಪೂರ್ಣ ಪ್ರಮಾಣದ ಕಾರ್ಮಿಕ ಸಂಘಟನೆಯ ಮುಷ್ಕರವಲ್ಲ.

Mahindra

ಹಾಗಾಗಿ ಈ ಹಾಜರಾತಿ ಸಮಸ್ಯೆಯ ಹಿಂದಿರುವ ಉದ್ದೇಶವಾದರೂ ಏನು? ಅವರ ಬೇಡಿಕೆಗಳು ಯಾವುವು? ಎಂಬುದು ತಿಳಿದು ಬಂದಿಲ್ಲ. ಪ್ರಸ್ತುತ ಪ್ರಶ್ನೆ ಇತ್ಯರ್ಥಕ್ಕೆ ಮಹೀಂದ್ರ, ಲೇಬರ್ ಕಮೀಷನರ್ ಬಾಗಿಲಿಗೆ ಪ್ರವೇಶಿಸಿದೆ.

ಒಟ್ಟಿನಲ್ಲಿ ಬೇಕಾದಷ್ಟು ಕೆಲಸಗಾರರು ಕಾರ್ಯನಿರತರಾಗಿರುವುದರಿಂದ ಮಹೀಂದ್ರ ಟ್ರಾಕ್ಟರ್ ಉತ್ಪಾದನೆಯಲ್ಲಿ ಮಾತ್ರ ಇದುವರೆಗೆ ಯಾವುದೇ ತೊಂದರೆಗಳು ಉಂಟಾಗಿಲ್ಲ. ಈ ಮೂಲಕ ದೈನಂದಿನ ನಿರ್ಮಾಣ ಗುರಿಯನ್ನು ತಲುಪುವಲ್ಲಿ ಯಶ ಕಂಡಿದೆ.

Most Read Articles

Kannada
English summary
After Toyota Kirloskar and Bajaj Auto the latest auto manufacturer to face labour issue at its manufacturing facility is Mahindra & Mahindra.
Story first published: Tuesday, April 29, 2014, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X