ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಿ

By Nagaraja

ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅತ್ತ ವಾಹನ ಪ್ರೇಮಿಗಳಂತೂ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇದರಂತೆ ಮಹಾನಗರದಲ್ಲಿ ಸ್ಕೂಟರ್ ಸ್ಪರ್ಧಿಗಳು ನಿರತ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಅಂದ ಹಾಗೆ ನವಿ ಮುಂಬೈನಲ್ಲಿ ಸಾಗಲಿರುವ 25ನೇ ಗಲ್ಫ್ ಮಾನ್ಸೂನ್ ಸ್ಕೂಟರ್ rally ಸ್ಪರ್ಧೆಯು ಜುಲೈ 6ರಂದು ನಡೆಯಲಿದೆ.

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

ದ್ವಿಚಕ್ರ ಸವಾರರ ಪಾಲಿಗೆ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಅತ್ಯಂತ ಸವಾಲಿನಿಂದ ಕೂಡಿರಲಿದೆ. ನವಿ ಮುಂಬೈನ ಬೆಲಪೂರ್ ಗಣಿಗಾರಿಕೆ ಪ್ರದೇಶದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಚಿತ್ರದಲ್ಲಿ: ಕಠಿಣ ಅಭ್ಯಾಸದಲ್ಲಿ ನಿರತವಾಗಿರುವ ಸ್ಪರ್ಧಿಗಳು (ಪಿಟಿಐ)

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

ತಜ್ಞರ ಪ್ರಕಾರ ಐದು ನಿಮಿಷಗಳಷ್ಟು ಮಳೆ ಸುರಿದರೂ rally ತುಂಬಾನೇ ಪ್ರಯಾಸದಾಯಕವಾಗಲಿದೆ ಎಂದಿದ್ದಾರೆ.

ಚಿತ್ರದಲ್ಲಿ: ಥಾಣೆಯಲ್ಲಿ ಧಾರಾಕಾರ ಮಳೆ - ವಾಹನ ಸವಾರರ ಪರದಾಟ (ಪಿಟಿಐ)

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

2012ನೇ ಸಾಲಿನಲ್ಲಿ ಪಾದಾರ್ಪಣೆ ಮಾಡಿಕೊಂಡಿದ್ದ ಮುಜಾಫರ್ ಅಲಿ ತಮ್ಮ ಎರಡನೇ ಪ್ರಯತ್ನದಲ್ಲಿ ಕಳೆದ ವರ್ಷ ವಿಜಯ ಪತಾಕೆ ಹಾರಿಸಿದ್ದರು. ಅಲ್ಲದೆ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

ಚಿತ್ರದಲ್ಲಿ: ಮುಂಬೈ ಧಾರಾಕಳೆ ಮಳೆ (ಪಿಟಿಐ)

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

ಎರಡು ವಿಭಾಗಗಳಲ್ಲಾಗಿ rally ವಿಂಗಡಿಸಲಾಗಿದೆ. ಮೊದಲನೆಯದ್ದು ಕೇಂದ್ರ ಮುಂಬೈನಿಂದ ನವಿ ಮುಂಬೈ ತನಕ 40 ಕೀ.ಮೀ. ಅಂತೆಯೇ ದ್ವಿತಿಯಾರ್ಧ ಬೆಲಪೂರದಲ್ಲಿ 6.8 ಕೀ.ಮೀ. ದೂರವನ್ನು ಕ್ರಮಿಸಬೇಕಾಗಿದೆ.

ಚಿತ್ರದಲ್ಲಿ: ಮುಂಬೈ ಧಾರಾಕಾರ ಮಳೆಗೆ ಸಿಕ್ಕಿ ಹಾಕಿಕೊಂಡಿರುವ ವಾಹನವನ್ನು ತಳ್ಳುತ್ತಿರುವ ಸಾರ್ವಜನಿಕರು (ಪಿಟಿಐ)

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

ಗಲ್ಫ್ ಮಾನ್ಸೂನ್ ಸ್ಕೂಟರ್ rally ಮುಂಬೈ ನಡೆಯುತ್ತಿರುವ ಅತ್ಯಂತ ಕಠಿಣ ಮೋಟಾರು ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಒಂದೆನಿಸಿಕೊಂಡಿದೆ.

ಚಿತ್ರದಲ್ಲಿ: ಮುಂಬೈ ಮಳೆಗೆ ಮೆಟ್ರೋ ಪಯಣ ಅಸ್ತವ್ಯಸ್ಥ (ಪಿಟಿಐ)

ಮುಂಬೈಗರೇ ಗಲ್ಫ್ ಮಾನ್ಸೂನ್ ಸ್ಕೂಟರ್ Rally ಬರಮಾಡಿಕೊಳ್ಳಲು ಸಜ್ಜಾಗಿರಿ

ಒಟ್ಟಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿರುವಂತೆಯೇ ಗಲ್ಫ್ ಮಾನ್ಸೂನ್ ಸ್ಕೂಟರ್ rally ಗೆ ಸರಿಯಾದ ವೇದಿಕೆ ಒದಗಿಸಿದೆ.

ಚಿತ್ರದಲ್ಲಿ: ಮುಂಗಾರು ಮಳೆ ಆನಂದಿಸುತ್ತಿರುವ ಕಾಲೇಜು ಕನ್ಯೆಯರು (ಪಿಟಿಐ)

Most Read Articles

Kannada
Story first published: Friday, July 4, 2014, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X