ಭಾರತ ಮಾರುಕಟ್ಟೆಗೆ ರಿ ಎಂಟ್ರಿ ಕೊಡಲಿರುವ ಪ್ಯೂಜೊ

By Nagaraja

ಬಹಳ ವರ್ಷಗಳ ಹಿಂದೆ ಭಾರತದಲ್ಲಿ 309 ಮಾದರಿಯ ಮೂಲಕ ಪ್ಯೂಜೊ ತನ್ನ ಸಾನಿಧ್ಯವನ್ನು ತೋರಿಸಿತ್ತು. ಈ ಕಾರಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದರೂ ಕ್ರಮೇಣ ವಿನ್ಯಾಸ ಹಳೆಯದಾಗಿದ್ದರಿಂದ ಹಿನ್ನಡೆ ಅನುಭವಿಸಿತ್ತು. ಪ್ರಸ್ತುತ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಪ್ಯೂಜೊ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಇದು ಪ್ಯೂಜೊ ಪಾಲಿಗೆ ಮೂರನೇ ಎಂಟ್ರಿ ಆಗಿರಲಿದೆ. ಈ ಬಾರಿಯಾದರೂ ತನ್ನ ಯೋಜನೆಯಲ್ಲಿ ಯಶಸ್ಸು ದಕ್ಕಿತೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಹಿಂದೆ 2001 ಹಾಗೂ 2011ರಲ್ಲಿ ಭಾರತದಲ್ಲಿ ಬೃಹತ್ ಹೂಡಿಕೆಯೊಂದಿಗೆ ಪ್ಯೂಜೊ ಮುಂದಕ್ಕೆ ಬಂದಿತ್ತು. 2011ನೇ ಸಾಲಿನಲ್ಲೇ ಗುಜರಾತ್‌ನ ಸನಂದ್ ಘಟಕದಲ್ಲಿ 4,000 ಕೋಟಿ ರು.ಗಳನ್ನು ಹೂಡಿಕೆ ಮಾಡುವ ಮಹತ್ತರ ಯೋಜನೆ ಹೊಂದಿದ್ದ ಪ್ಯೂಜೊ, ಆರ್ಥಿಕ ಹಿಂಜರಿತದ ಹಿನ್ನಯಲೆಯಲ್ಲಿ ಯೋಜನೆ ಕೈಬಿಟ್ಟಿತ್ತು.

Peugeot

ಅತ್ತ ಯುರೋಪ್ ಆರ್ಥಿಕತೆಯು ನಿಧಾನವಾಗಿ ಸುಧಾರಿಸುತ್ತಿದೆ. ಇದರ ಬೆನ್ನಲ್ಲೇ ಭಾರತದತ್ತ ತನ್ನ ಪ್ರತಿನಿಧಿ ತಂಡವೊಂದನ್ನು ರವಾನಿಸಿರುವ ಪ್ಯೂಜೊ ಸುದೀರ್ಘ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ.

ಗಮನಾರ್ಹ ಬೆಳವಣಿಗೆಯೆಂದರೆ ಪ್ಯೂಜೊ ಈ ಬಾರಿ ಭಾರತದಲ್ಲಿ ತನ್ನದೇ ಆದ ಘಟಕ ತೆರೆಯಲು ಮುಂದಾಗುವುದಿಲ್ಲ. ಇದರ ಬದಲಾಗಿ ಜನರಲ್ ಮೋಟಾರ್ಸ್ ಜೊತೆ ಒಪ್ಪಂದ ಮಾಡಿಕೊಂಡು ಅದರ ಘಟಕದಲ್ಲಿ ಕಾರು ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಅದೇ ಹೊತ್ತಿಗೆ ಚೀನಾದ ಡಾಂಗ್‌ಫೆಂಗ್ (Donfeng) ಜೊತೆ ಪಾಲುದಾರಿಕೆ ಹೊಂದುವ ಯೋಜನೆಯು ಪ್ಯೂಜೊ ಬಳಿಯಿದೆ. ಇವೆಲ್ಲದರ ಪ್ರಮುಖ ಉದ್ದೇಶ ಹೂಡಿಕೆ ಮೊತ್ತವನ್ನು ಇಳಿಕೆ ಮಾಡುವುದಾಗಿದೆ.

ಜನರಲ್ ಮೋಟಾರ್ಸ್‌ನ ತಲೆಗಾಂವ್ ಘಟಕದಲ್ಲಿ ಪ್ಯೂಜೊ ಕಾರುಗಳು ಉತ್ಪನ್ನವಾಗುವ ಸಾಧ್ಯತೆಯಿದೆ. ಇಲ್ಲಿ ವಾರ್ಷಿಕವಾಗಿ 1.7 ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ಜನರಲ್ ಮೋಟಾರ್ಸ್ ಜೊತೆ ಪಾಲುದಾರಿಕೆ ಯಶಸ್ಸು ಕಂಡರೆ ಇನ್ನಷ್ಟು ಉತ್ತಮ ರೀತಿಯಲ್ಲಿ ಘಟಕದ ಬಳಕೆ ಮಾಡಲು ನೆರವಾಗಲಿದೆ.

ಇನ್ನೊಂದೆಡೆ ಚೀನಾದ ಡಾಂಗ್‌ಫೆಂಗ್ ಜೊತೆ ಸಹಭಾಗಿತ್ವ ಹೊಂದಿದ್ದರೆ ಮಹಾರಾಷ್ಟ್ರ ಅಥವಾ ತಮಿಳುನಾಡಿನಲ್ಲಿ ಹೊಸ ಘಟಕ ತೆರೆಯುವ ಸಾಧ್ಯತೆಯಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯಲು ನಿಸ್ಸಾನ್ ಮಾಜಿ ಅಧಿಕಾರಿ ಇಮ್ಯಾನುವೆಲ್ ಡಿಲೇ ಅವರಿಗೆ ಪ್ಯೂಜೊ ಜವಾಬ್ದಾರಿ ವಹಿಸಿಕೊಟ್ಟಿದೆ.

Most Read Articles

Kannada
English summary
Peugeot was present in India a long time ago with its 309 model. The car was appreciated, however, the design grew old soon among Indian buyers. Now the French manufacturer is planning a comeback to India with an all new line-up of vehicles.
Story first published: Monday, July 7, 2014, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X