ಜಮ್ಮು ಕಾಶ್ಮೀರ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪೊಲರಿಸ್ ನೆರವು

By Nagaraja

ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿರುವ ಮೇಘಸ್ಫೋಟಕ್ಕೆ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಸಾವಿರಾರು ಮಂದಿ ಸಂತ್ರಸ್ತಕ್ಕೀಡಾಗಿದ್ದರು. ಈ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ಕು ಆಫ್ ರೋಡ್ ವಾಹನಗಳನ್ನು ಅತ್ತ ರವಾನಿಸಲು ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ಧರಿಸಿದೆ.

ಪ್ರತಿ ಬಾರಿಯೂ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗಾಗಿ ವಾಹನೋದ್ಯಮ ಸಹ ಕೈಜೋಡಿಸಿಕೊಳ್ಳುವುದು ಸ್ವಾಗತಾರ್ಹ ವಿಚಾರವಾಗಿದೆ. ಇದರಂತೆ ಪರ್ವತ ಶ್ರೇಣಿಗಳನ್ನು ಹೊಂದಿರುವ ಜಮ್ಮು ಕಾಶ್ಮೀರಕ್ಕೆ ಪೊಲರಿಸ್ ತನ್ನ ನೆರವಿನ ಹಸ್ತವನ್ನು ಚಾಚಿದೆ.

polaris

ಆಫ್ ರೋಡ್ ವಾಹನಗಳಿಗೆ ಪ್ರಖ್ಯಾತಿ ಪಡೆದಿರುವ ಪೊಲರಿಸ್, ಎಂತಹುದೇ ಒರಟಾದ ಭೂಪ್ರದೇಶದಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಇದೀಗ ಪೊಲರಿಸ್ ವಾಹನಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಬೆಂಬಲಕ್ಕೆ ನಿಲ್ಲಲಿದೆ.

ಪೊಲರಿಸ್‌ನ ರೇಂಜರ್ 6x6 800, ರೇಂಜರ್ ಕ್ರ್ಯೂ 800, ಆರ್‌ಝಡ್‌ಆರ್ ಎಕ್ಸ್‌ಪಿ 4 900 ಮತ್ತು ಸ್ಪೋರ್ಟ್ಸ್‌ಮ್ಯಾನ್ ಎಂವಿ 700 ವಾಹನಗಳನ್ನು ಸಂತ್ರಸ್ತ ಪೀಡಿತರ ನೆರವಿಗೆ ಧಾವಿಸಲಿದೆ.

Most Read Articles

Kannada
English summary
Polaris India Pvt. Ltd, a wholly owned subsidiary of Polaris Industries Inc., the world leader in off-road and All-Terrain vehicles has volunteered four demo Off-Road Vehicles (ORVs) to NDRF (National Disaster Response Force), to assist in relief efforts after the state was hit by floods recently.
Story first published: Thursday, September 18, 2014, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X