ರೈಡ್ ದೆ ಹಿಮಾಲಯದಲ್ಲಿ ಪೊಲರಿಸ್ ಚಾಲೆಂಜ್

By Nagaraja

ಈ ಬಾರಿಯ 'ರೈ ದೆ ಹಿಮಾಲಯ' (Raid De Himalaya) ಸವಾಲು ಸ್ವೀಕರಿಸಲು ಪೊಲರಿಸ್ ಆಫ್ ರೋಡ್ ವಾಹನಗಳು ಸಿದ್ಧವಾಗಿದೆ. ಹೌದು, ಪೊಲರಿಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾಗಿರುವ ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 16ನೇ ಆವೃತ್ತಿಯ ರೈಡ್ ದೆ ಹಿಮಾಲಯ ಪರ್ವತ ಶ್ರೇಣಿಯ rallyಯಲ್ಲಿ ಭಾಗವಹಿಸಲಿದೆ.

ಈ ಬಾರಿಯ ರೈಡ್ ದೆ ಹಿಮಾಲಯ ರಾಲಿಯು ಅಕ್ಟೋಬರ್ 3ರಿಂದ ಆರಂಭವಾಗಿ 11ರ ವರೆಗೆ ಸಾಗಲಿದೆ. ಇದು ವಾಹನ ಪ್ರೇಮಿಗಳಿಗೆ ಅತ್ಯಂತ ರೋಚಕ ಅನುಭವ ನೀಡಲಿದೆ.

raid de himalaya

ಇದು ಮೂರನೇ ಬಾರಿಗೆ ರೈಡ್ ದೆ ಹಿಮಾಲಯ ರಾಲಿಯಲ್ಲಿ ಪೊಲರಿಸ್ ಇಂಡಿಯಾ ಸಂಸ್ಥೆಯು ಭಾಗವಹಿಸುತ್ತಿದೆ. ಈ ವೇಳೆ ರಾಲಿ ಚಾಲಕ ರಾಜ್ ಸಿಂಗ್ ರಾಠೋಡ್ ಅವರು ಆರ್‌ಝಡ್ಆರ್ ಎಕ್ಸ್‌ಪಿ 900 ವಾಹನದೊಂದಿಗೆ ಸವಾಲನ್ನು ಸ್ವೀಕರಿಸಲಿದೆ. ರಾಠೋಡ್ ಅವರು 2012ರಲ್ಲಿ ಮೊಟೊ ಕ್ವಾಡ್ ವಿಭಾಗದಲ್ಲಿ ವಿಜಯಶಾಲಿಯಾಗಿದ್ದರು.

ಜಗತ್ತಿನ ಅತ್ಯಂತ ರೋಚಕ ರಾಲಿಗಳಲ್ಲಿ ರೈಡ್ ದೆ ಹಿಮಾಲಯ ಕೂಡಾ ಒಂದಾಗಿದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ.

Most Read Articles

Kannada
English summary
Polaris India Pvt. Ltd., a wholly owned subsidiary of Polaris Industries, one of the biggest off-road and All-Terrain vehicle manufacturers, is participating in the 16th edition of one of the toughest and the world's highest mountain rallies - Raid de Himalaya, which started on the 3rd of October, 2014. The rally will go on till the 11th of October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X