ಸಿಯಾಮ್ ಉಚಿತ ಪಿಯುಸಿ ಚೆಕಪ್ ಟಾಟಾ ಕಾರುಗಳಿಗೆ ಮಾತ್ರವೇ?

By Nagaraja

ಕಳೆದ ದಿನ ನಮಗೆ ಬಂದ ಪತ್ರಿಕಾ ಪ್ರಕಟಣೆಯಂತೆಯೇ ವಾರ್ತಾ ವರದಿಯೊಂದನ್ನು ಪ್ರಕಟಿಸಿದ್ದೆವು. ಇದರಂತೆ ಭಾರತೀಯ ವಾಹನೋದ್ಯಮ ಒಕ್ಕೂಟ (SIAM) ನೇತೃತ್ವದಲ್ಲಿ ವಿಶ್ವ ಪರಿಸರ ದಿನವಾದ ಜೂನ್ 5 ಗುರುವಾರದಂದು (ಇಂದು) ಬೆಂಗಳೂರಿನ ಕ್ರೈಸ್ಟ್ ಕಾಲೇಜು ಮುಂಭಾಗದಲ್ಲಿ ಉಚಿತ ವಾಹನ ಮಾಲಿನ್ಯ ಚೆಕಪ್ (PUC) ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಲಾಗಿತ್ತು.

ಇದರಂತೆ ಉತ್ಸಾಹದೊಂದಿಗೆ ಅಲ್ಲಿಗೆ ತೆರಳಿದ್ದ ನಮ್ಮ ಪತ್ರಕರ್ತರ ತಂಡಕ್ಕೆ ಬೇಸರ ಕಾದಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ಎಲ್ಲ ಕಾರಿಗಳಿಗೂ ಉಚಿತ ಮಾಲಿನ್ಯ ತಪಾಸಣಾ ಶಿಬಿರ ಹಾಗೂ ಪರೀಶೀಲನೆಯ ಬಳಿಕ ಪಿಯುಸಿ ಸರ್ಟಿಫಿಕೇಟ್ ನೀಡುವುದಾಗಿ ಸ್ಪಷ್ಟವಾಗಿ ತಿಳಿಸಲಾಗಿತ್ತಾದರೂ ಇಂತಹ ಯಾವುದೇ ಸೇವೆ ಅಲ್ಲಿ ಕಂಡುಬಂದಿಲ್ಲ.

SIAM

ಕ್ರೈಸ್ಟ್ ಕಾಲೇಜು ಮುಂಭಾಗದಲ್ಲಿರುವ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ನಲ್ಲಿ ಕೇವಲ ಟಾಟಾ ಕಾರುಗಳಿಗೆ ಮಾತ್ರ ಉಚಿತ ಚೆಕಪ್ ಪರಿಶೀಲನೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಮಾರುತಿ ಆಲ್ಟೊ ಕಾರಿನೊಂದಿಗೆ ತೆರಳಿದ್ದ ನಮ್ಮ ಪ್ರತಿನಿಧಿಗಳಿಗೆ ನಿರಾಸೆ ಕಾದಿತ್ತು.

ಬಳಿಕ ಈ ಬಗ್ಗೆ ವಿಚಾರಿಸಿ ನೋಡಿದಾಗ, ಸಿಯಾಮ್ ನೇತೃತ್ವದಲ್ಲಿ ಟಾಟಾ, ಫಿಯೆಟ್ ಹಾಗೂ ಸ್ಕೋಡಾ ಕಾರುಗಳಿಗೆ ಉಚಿತ ಪಿಯುಸಿ ಚೆಕಪ್ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇವೆಲ್ಲವೂ ಮೇಲೆ ತಿಳಿಸಲಾದ ನಿರ್ದಿಷ್ಟ ಡೀಲರ್‌ಶಿಪ್ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಹಾಗಾಗಿ ನಿನ್ನೆ ಪ್ರಕಟಿಸಲಾದ ತಪ್ಪದಾ ಪ್ರತಿಕಾ ಪ್ರಕಟಣೆಗಾಗಿ ಓದುಗರಲ್ಲಿ ನಾವು ಖೇದ ವ್ಯಕ್ತಪಡಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
Story first published: Thursday, June 5, 2014, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X