ದೇಶದತ್ತ ಮುಖ ಮಾಡಿದ ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್

By Nagaraja

ದೇಶದ ಮುಂಚೂಣಿಯ ವಾಣಿಜ್ಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಅಶೋಕ್ ಲೇಲ್ಯಾಂಡ್, ಆಟೋಮೊಬೈಲ್ ತಯಾರಕರ ಒಕ್ಕೂಟ (ಸಿಯಾಮ್) ಆಯೋಜಿಸಿರುವ ಬಸ್ ಹಾಗೂ ವಿಶೇಷ ವಾಹನಗಳ ಪ್ರದರ್ಶನ ಮೇಳದಲ್ಲಿ ಹೊಸತಾದ ವೆರ್ಸಾ ವಿದ್ಯುತ್ ಚಾಲಿತ ಬಸ್ಸನ್ನು ಅನಾವರಣಗೊಳಿಸಿದೆ.

ಹಿಂದೂಜಾ ಗ್ರೂಪ್‌ನ ಫ್ಲ್ಯಾಗ್‌ಶಿಪ್ ಮಾದರಿಯಾಗಿರುವ ಅಶೋಕ್ ಲೇಲ್ಯಾಂಡ್‌ನ ಬ್ರಿಟನ್ ಪಾಲುದಾರಿಕಾ ಸಂಸ್ಥೆಯ ಓಪ್ಟರ್ ಪಿಎಲ್‌ಸಿ ಸಹಭಾಗಿತ್ವದಲ್ಲಿ ಹೊಸತಾದ ಶೂನ್ಯ ಮಾಲಿನ್ಯದ ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಲಾಗಿದೆ.

ashok leyland versa

ಗ್ರೇಟರ್ ನೋಯ್ಡಾದಲ್ಲಿ ಪ್ರದರ್ಶನಕ್ಕಿಟ್ಟಿರುವ ಈ ನಗರದೊಳಗೆ ಸಂಚರಿಸುವ ಎಲೆಕ್ಟ್ರಿಕ್ ಬಸ್ 44 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ.

ಮುಖ್ಯಾಂಶಗಳು

  • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಏರ್ ಸಸ್ಪೆಷನ್,
  • ಸೀಟು ಸಂಪರ್ಕಿತ ಕಂಬಗಳು,
  • ಪ್ರತ್ಯುತ್ಪಾದಕ ಬ್ರೇಕಿಂಗ್,
  • ಸಂಯೋಜಿತ ಚಾರ್ಜಿಂಗ್ ಪಾಯಿಂಟ್,
  • 9.7 ಮೀ. 10.4 ಮೀ. 11.1 ಮೀ ಮತ್ತು 11.8 ಮೀ. ಉದ್ದಗಳಲ್ಲಿ ಲಭ್ಯ,
  • ವಿಶಾಲವಾದ ಡೋರ್, ಸಿಂಗಲ್ ಸ್ಟೆಪ್ ಎಂಟ್ರಿ,
  • ವೀಲ್ ಚೇರ್ ಸೌಲಭ್ಯ,
  • ಒಂದೇ ಚಾರ್ಜ್‌ನಲ್ಲಿ 90 ಮೈಲ್ ಚಾರ್ಜ್

ಸ್ಟೈಲಿಷ್ ಬಾಡಿ, ಹೆಚ್ಚು ಸ್ಥಳಾವಕಾಶಯುಕ್ತ ಕ್ಯಾಬಿನ್ ಹಾಗೂ ಆನ್ ಬೋರ್ಡ್ ವೈಫೈ ಸೌಲಭ್ಯಗಳು ಈ ಎಲೆಕ್ಟ್ರಿಕ್ ಬಸ್ಸನ್ನು ಇನ್ನಷ್ಟು ಆಕರ್ಷಿಕವಾಗಿಸಲಿದೆ. ಅಂದ ಹಾಗೆ ಈ ವಿದ್ಯುತ್ ಚಾಲಿತ ಬಸ್ 2017ರ ವೇಳೆ ಭಾರತ ಪ್ರವೇಶಿಸಲಿದೆ.

Most Read Articles

Kannada
English summary
Ashok Leyland has unveiled its new fully-electric bus at the Bus & Special Vehicles Show organised by SIAM (Society of Indian Automobile Manufacturers). Called the Versa, the new bus was developed by Ashok Leyland's UK arm, Optare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X