ರೈತರಿಗಾಗಿ ಸಣ್ಣ ವಾಣಿಜ್ಯ ವಾಹನ ನಿರ್ಮಿಸಲಿರುವ ಪೊಲರಿಸ್

By Nagaraja

ಆಫ್ ರೋಡ್ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಪೊಲರಿಸ್ ನಿಧಾನವಾಗಿ ತನ್ನ ಚಿತ್ತವನ್ನು ಕೃಷಿಯತ್ತವೂ ಹಾಯಿಸಿದೆ. ಕೃಷಿಕರು ದೇಶದ ಬೆನ್ನಲುಬು ಆಗಿದ್ದಾರೆ. ಇದನ್ನು ಮನಗಂಡಿರುವ ಪೊಲರಿಸ್ ಇಂಡಸ್ಟ್ರೀಸ್ ಹಾಗೂ ಐಚರ್ ಮೋಟಾರ್ಸ್ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಣ್ಣ ವಾಹನಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ.

ವಿಶೇಷವೆಂದರೆ ಸಂಸ್ಥೆಯು ಈ ಮಹತ್ತರ ಯೋಜನೆಗಾಗಿ 250 ಕೋಟಿ ರು.ಗಳನ್ನು ಹೂಡಿಕೆ ಮಾಡಲಿದೆ. ಸಣ್ಣ 600ಸಿಸಿ ಎಂಜಿನ್ ಸಾಮರ್ಥ್ಯದ ಡೀಸೆಲ್ ಗಾಡಿಗಳನ್ನು ನಿರ್ಮಿಸುವುದು ಸಂಸ್ಥೆಯ ಉದ್ದೇಶವಾಗಿದೆ.

polaris

ಹಾಗಿದ್ದರೂ ಈ ಬಹುನಿರೀಕ್ಷಿತ ವಾಣಿಜ್ಯ ವಾಹನಗಳಿಗೆ ಇನ್ನಷ್ಟೇ ಅನುಮೋದನೆ ದೊರಕಬೇಕಾಗಿದೆ. ಇದು ಕ್ಯಾಬಿನ್ ಪಿಕಪ್ ಹಾಗೂ ಬಹು ಬಳಕೆಯ ವ್ಯಾನ್‌ಗಳೆಂಬ ಎರಡು ರೂಪದಲ್ಲಿ ಕಾಣಿಸಿಕೊಳ್ಳಲಿದೆ.

ಇನ್ನು ಅಂದಾಜು ವೆಚ್ಚ ತಗುಲಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ನಿಸ್ಸಂಶಯವಾಗಿಯೂ ಎಂಟ್ರಿ ಲೆವೆಲ್ ವಿಭಾಗವನ್ನು ಗುರಿಯಾಗಿರಸಲಿದೆ.

ಆರಂಭದಲ್ಲಿ 10ರಿಂದ 12,000 ಯುನಿಟ್‌ಗಳನ್ನು ನಿರ್ಮಿಸುವುದು ಸಂಸ್ಥೆಯ ಇರಾದೆಯಾಗಿದ್ದು, ಬಳಿಕ ಬೇಡಿಕೆಗೆ ಅನುಸಾರವಾಗಿ ನಿರ್ಮಾಣ ಸಾಮರ್ಥ್ಯವನ್ನು ಒಂದು ಲಕ್ಷ ಯುನಿಟ್‌ಗಳಿಗೆ ಏರಿಸಲಿದೆ. ಇದು ಜೈಪುರ ಘಟಕದಲ್ಲಿ ನಿರ್ಮಾಣವಾಗಲಿದೆ.

Most Read Articles

Kannada
English summary
Eicher Motors and Polaris Industries are building a small vehicle, targeting farmers and the bottom end of the market, which has the capacity to carry a decent load as well as carry people. The companies have already committed INR 250 crores for this project.
Story first published: Saturday, January 3, 2015, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X