ಈಚರ್-ಪೊಲರಿಸ್ ಮೊದಲ ವೈಯಕ್ತಿಕ ವಾಹನ 'ಮಲ್ಟಿಕ್ಸ್' ಬಿಡುಗಡೆ

By Nagaraja

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಗದೊಂದು ಜನುಮದ ಜೋಡಿಯ ಉಗಮನವಾಗಿದೆ. ಹೌದು, ಎರಡು ಮುಂಚೂಣಿಯ ಸಂಸ್ಥೆಗಳು ಒಂದಾಗಿ ಮುಂದೆ ಬಂದು ಹೊಸತೊಂದು ವಾಹನವೊಂದನ್ನು ಪರಿಚಯಿಸಿದೆ.

ಅದುವೇ ಇಚರ್-ಪೊಲರಿಸ್ ಜತೆಗಾರಿಕೆಯಲ್ಲಿ ರೂಪುಗೊಂಡಿರುವ ಮೊದಲ ವೈಯಕ್ತಿಕ ಸರ್ವೋಪಯೋಗಿ ವಾಹನ 'ಮಲ್ಟಿಕ್ಸ್' (Multilx).

ಬೆಲೆ ಮಾಹಿತಿ: 2.32 ಲಕ್ಷ ರು.ಗಳಿಂದ 2.72 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಈಚರ್-ಪೊಲರಿಸ್ ಮಲ್ಟಿಕ್ಸ್

ಪ್ರಮುಖವಾಗಿಯೂ ಸಣ್ಣ ಉದ್ಯಮಿಗಳನ್ನು ಈಚರ್-ಪೊಲರಿಸ್ ವಾಹನವು ಗುರಿಯಾಗಿರಿಸಿಕೊಂಡಿದೆ. ಎರಡು ವೆರಿಯಂಟ್ ಗಳಲ್ಲಿ ಲಭ್ಯವಿರುವ ಪ್ರಸ್ತುತ ವಾಹನವು ಪ್ರತಿ ಲೀಟರ್‌ ಡೀಸೆಲ್‌ಗೆ 28.45 ಕೀ.ಮೀ. ಮೈಲೇಜ್ ನೀಡಲಿದೆ.

ಐದು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗ ಮಲ್ಟಿಕ್ಸ್ ವಾಹನದಲ್ಲಿ 1918 ಲೀಟರ್ ಡಿಕ್ಕಿ ಜಾಗವಿರುತ್ತದೆ. 3 ಕೆಡಬ್ಲುಯ ವಿದ್ಯುತ್ ಪ್ರತ್ಯುತ್ಪಾದನೆ ಮಾಡಬಲ್ಲ ಈ ವಾಹನದಿಂದ ಮನೆಯ ಅಗತ್ಯಗಳಿಗೆ ಬೆಳಕಿನ ಸೇವೆಯನ್ನು ಪಡೆಯಬಹುದಾಗಿದೆ.

510 ಸಿಸಿ ಎಂಜಿನ್ ಸಾಮರ್ಥ್ಯದ ಈ ಡೀಸೆಲ್ ವಾಹನವನ್ನು ಅಂಬುಲೆನ್ಸ್ ರೀತಿಯಲ್ಲೂ ಬಳಕೆ ಮಾಡಬಹುದಾಗಿದೆ. ಪ್ರಸ್ತುತ ವಾಹನವು ದೇಶದ 5.8 ಕೋಟಿ ವೈತಿಗತ ಉದ್ಯಮಿಗಳನ್ನು ಗುರಿ ಮಾಡುತ್ತಿರುವುದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದರಂತೆ ಘಟಕ ನಿರ್ಮಾಣ ಹಾಗೂ ಉತ್ಪನ್ನ ಅಭಿವೃದ್ಧಿಗಾಗಿ ಈಚರ್ ಮೋಟಾರ್ಸ್ ಹಾಗೂ ಪೊಲರಿಸ್ ಬರೋಬ್ಬರಿ 350 ಕೋಟಿ ರು. ಹೂಡಿಕೆ ಮಾಡಿದ್ದು, ವಾರ್ಷಿಕವಾಗಿ 1.20 ಲಕ್ಷ ಯುನಿಟ್ ಗಳ ನಿರ್ಮಾಣ ಸಾಮರ್ಥ್ಯವನ್ನು ಗುರಿಯಿರಿಸಿದೆ. ಪ್ರಸ್ತುತ 60,000 ಯುನಿಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಲ್ಟಿಕ್ಸ್ ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಮಹೀಂದ್ರ ಮ್ಯಾಕ್ಸಿಮೊಗೆ ಸೆಡ್ಡು ಹೊಡೆಯಲಿದೆ.

Most Read Articles

Kannada
English summary
Eicher Polaris has launched India's very first personal utility vehicle. The manufacturer has christened this model as the ‘Multix'.
Story first published: Thursday, June 18, 2015, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X