ಒಂದು ವರೆ ಲಕ್ಷಕ್ಕೂ ಹೆಚ್ಚು ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಜನರಲ್ ಮೋಟಾರ್ಸ್

'ರಿಮೋಟ್ ಕೀಲೆಸ್ ಎಂಟ್ರಿ ಸಿಸ್ಟಂ'ನಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಬರೋಬ್ಬರಿ ಒಂದು ವರೆ ಲಕ್ಷಕ್ಕೂ ಹೆಚ್ಚು ಷೆವರ್ಲೆ ಮಾದರಿಗಳಿಗೆ ಅಮೆರಿಕದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಜನರಲ್ ಮೋಟಾರ್ಸ್ ಹಿಂದಕ್ಕೆ ಕರೆ ನೀಡಿದೆ.

ದೋಷಪೂರಿತ ಮಾದರಿಗಳು

  • ಷೆವರ್ಲೆ ಸ್ಪಾರ್ಕ್,
  • ಷೆವರ್ಲೆ ಬೀಟ್,
  • ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್
ನಿರ್ಮಾಣ ಯಾವಾಗ ?
2007ರಿಂದ 2014ನೇ ಇಸವಿಯ ಅವಧಿಯಲ್ಲಿ ತಯಾರಿಸಲಾದ ಷೆವರ್ಲೆ ಸ್ಪಾರ್ಕ್, ಷೆವರ್ಲೆ ಬೀಟ್ ಹಾಗೂ ಷೆವರ್ಲೆ ಎಂಜಾಯ್ ಸೇರಿದಂತೆ 1,55,000 ಯುನಿಟ್ ಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ಜನರಲ್ ಮೋಟಾರ್ಸ್ ನಿರ್ಧರಿಸಿದೆ.

ಮೇಲೆ ತಿಳಿಸಿದ ಕೆಲವು ನಿರ್ದಿಷ್ಟ ಮಾದರಿಗಳಲ್ಲಿ ರಿಮೋಟ್ ಕೀಲೆಸ್ ಎಂಟ್ರಿ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾರನ್ನು ಪರೀಶೀಲಿಸಿ ದೋಷ ಕಂಡುಬಂದಲ್ಲಿ ಸಂಪೂರ್ಣ ಉಚಿತವಾಗಿ ತೊಂದರೆ ಸರಿಪಡಿಸಿಕೊಡಲಾಗುವುದೆಂದು ಜನರಲ್ ಮೋಟಾರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ಸಂಸ್ಥೆಯೇ ನೇರವಾಗಿ ತೊಂದರೆಗ್ರಸ್ತ ಗ್ರಾಹಕರನ್ನು ಸಂಪರ್ಕಿಸಲಿದೆ. ಈ ನಡುವೆ ಗ್ರಾಹಕರಿಗೆ ಸಂದೇಹವಿದ್ದಲ್ಲಿ ತಮ್ಮ ಸಮೀಪದ ಷೆವರ್ಲೆ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ಇದು ದೇಶದಲ್ಲಿ ಜನರಲ್ ಮೋಟಾರ್ಸ್ ಕೈಗೊಳ್ಳುತ್ತಿರುವ ಅತಿ ದೊಡ್ಡ ರಿಕಾಲ್ ಆಗಿದ್ದು, ಈ ಹಿಂದೆ 2014ರಲ್ಲಿ ಬೀಟ್ ಹ್ಯಾಚ್ ಬ್ಯಾಕ್ ಪೆಟ್ರೋಲ್ ಮಾದರಿಗಳನ್ನು (ಇಂಧನ ಕೊಳವೆ) ಹಿಂಪಡೆದಿತ್ತು. ಅದಕ್ಕೂ ಮೊದಲು 2013 ಜೂನ್ ತಿಂಗಳಲ್ಲಿ 1,14,000 ಲಕ್ಷ ತವೆರಾ ಮಾದರಿಗಳಿಗೂ (ಎಮಿಷನ್ ತೊಂದರೆ) ಹಿಂದಕ್ಕೆ ಕರೆ ನೀಡಿತ್ತು.

Most Read Articles

Kannada
English summary
General Motors recalls 1.5 Lakh cars in India
Story first published: Monday, July 13, 2015, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X