ಬಸ್ ಪ್ರಯಾಣ ದರ ಇಳಿಕೆ; ಪ್ರಯಾಣಿಕರ ಕಣ್ಣಿಗೆ ಮಣ್ಣೆರಚುವ ತಂತ್ರ?

By Nagaraja

ವ್ಯಾಪಕ ಪ್ರತಿಭಟನೆ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರಕಾರ ಕೊನೆಗೂ ಬಸ್ ಪ್ರಯಾಣ ದರವನ್ನು ಅಲ್ಪ ಇಳಿಸಿದೆ. ಈ ಮೂಲಕ ಪ್ರಯಾಣಿಕರ ಕಣ್ಣಿಗೆ ಮಣ್ಣೆರಚುವ ತಂತ್ರ ಅನುಸರಿಸಿದೆ.

ಕಳೆದ ದಿನ ಬಸ್ ಇಳಿಕೆ ಸಂಬಂಧ ಪ್ರಕಟಣೆ ಹೊರಡಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜನವರಿ 10ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದಿದ್ದಾರೆ.


ಇದರಂತೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರಗಳಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಇಲ್ಲಿಗೆ ಗಮನಾರ್ಹ ಸಂಗತಿಯೆಂದರೆ ಪಾಸ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.

ಬಿಎಂಟಿಸಿ ಬಸ್ ಪ್ರಯಾಣ ದರಗಳಲ್ಲಿ ಪ್ರತಿ ಹಂತಕ್ಕೆ 1 ರುಪಾಯಿ ಕಡಿತ ಮಾಡಲಾಗಿದೆ. ಹಾಗೆಯೇ ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ವಿವಿಧ ಹಂತಗಳಲ್ಲಿ 1ರಿಂದ 11 ರುಪಾಯಿಗಳ ವರೆಗೆ ಇಳಿಕೆಯಾಗಿದೆ.

ಆದರೆ ಶಾಲಾ ಮಕ್ಕಳ ಹಾಗೂ ಕಾಲೇಜ್ ಪಾಸು ದರ ಇಳಿಕೆ ಮಾಡದಿರುವುದು ಬೇಸರಕ್ಕೆ ಕಾರಣವಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ವೇಗದೂತ, ಎಸಿ ಬಸ್ ಹಾಗೂ ಹೊರರಾಜ್ಯಕ್ಕೆ ತೆರಳುವ ಬಸ್ ಪ್ರಯಾಣ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.

ದರ ಕಡಿತದಿಂದಾಗಿ ಸಾರಿಗೆ ಇಲಾಖೆಗೆ ವರ್ಷಕ್ಕೆ 161.76 ಕೋಟಿ ರು.ಗಳ ನಷ್ಟವುಂಟಾಗಲಿದೆ. ಅಲ್ಲದೆ ಇಳಿಕೆ ಪ್ರಮಾಣದ ಶೇಕಡಾವಾರು ಚಿತ್ರಣವನ್ನು ನೀಡುವಲ್ಲಿಯೂ ಸರಕಾರ ವಿಫಲವಾಗಿದೆ.

ಎಲ್ಲಿಂದ ಎಲ್ಲಿಗೆ ಎಷ್ಟೆಷ್ಟು ಕಡಿಮೆಯಾಯ್ತು ?
ಬೆಂಗಳೂರು-ಮಂಗಳೂರು 5 ರು.
ಬೆಂಗಳೂರು-ಮೈಸೂರು 2 ರು.
ಬೆಂಗಳೂರು-ಹಾಸನ 3 ರು.
ಬೆಂಗಳೂರು-ಚಿಕ್ಕಮಗಳೂರು 4 ರು.
ಬೆಂಗಳೂರು- ಶಿವಮೊಗ್ಗ 4 ರು.
ಬೆಂಗಳೂರು-ದಾವಣಗೆರೆ 4 ರು.
ಬೆಂಗಳೂರು-ಹುಬ್ಬಳ್ಳಿ 5 ರು.
ಬೆಂಗಳೂರು-ರಾಯಚೂರು 8 ರು.
ಬೆಂಗಳೂರು-ಬೆಳಗಾವಿ 7 ರು.
ಬೆಂಗಳೂರು-ಕಾರವಾರ 8 ರು.
ಬೆಂಗಳೂರು- ವಿಜಯಪುರ 8 ರು.

Most Read Articles

Kannada
English summary
Karnataka Government decided to reduce BMTC and KSRTC bus fares will be effected from jan 10, 2015.
Story first published: Thursday, January 8, 2015, 9:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X