ರೆನೊ ಸಣ್ಣ ಕಾರಿನ ಈ 10 ವಿಚಾರಗಳ ಬಗ್ಗೆ ಗಮನವಿರಲಿ

By Nagaraja

ಡಸ್ಟರ್ ಗಳಂತಹ ಜನಪ್ರಿಯ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಸದ್ಯದಲ್ಲೇ ನೂತನ ಕಾರೊಂದನ್ನು ಬಿಡುಗಡೆ ಮಾಡಲಿದೆ. ಎಂಟ್ರಿ ಲೆವೆಲ್ ಮಾರುಕಟ್ಟೆಯಲ್ಲಿ ರೆನೊ ಸಣ್ಣ ಕಾರು ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಗೆ ಪ್ರತಿಸ್ಪರ್ಧಿಯಾಗಲಿದೆ.

ಮುಂಬರುವ 2015 ಮೇ 20ರಂದು ಲೋಕಾರ್ಪಣೆಗೈಯಲಿರುವ ರೆನೊ ಸಣ್ಣ ಕಾರಿನ ಕುರಿತಾಗಿ ನೀವು ತಿಳಿಕೊಳ್ಳಬೇಕಾಗಿರುವ 10 ವಿಚಾರಗಳ ನಾವಿಲ್ಲಿ ಮಾಹಿತಿಯನ್ನು ಕೊಡಲಿದ್ದೇವೆ. ಹೊಸ ಕಾರು ಖರೀದಿ ಮಾಡಲಿಚ್ಛಿಸುವ ಗ್ರಾಹಕರಿಗೆ ಇದು ನೆರವಾಗುವ ಭರವಸೆ ನಮ್ಮದ್ದು. ತಪ್ಪದೇ ಓದಿ.

10. ಹೆಸರು ಏನು?

10. ಹೆಸರು ಏನು?

ಬಲ್ಲ ಮೂಲಗಳ ಪ್ರಕಾರ 'ಎಕ್ಸ್ ಬಿಎ' ಎಂಬ ಕೋಡ್ ಪಡೆದಿರುವ ರೆನೊ ಸಣ್ಣ ಕಾರು 'ಕಯೂ' (Kayou) ಎಂಬ ಹೆಸರಿನಿಂದ ಗುರುತಿಸ್ಪಡಲಿದೆ. ಆದರೆ ಇದರ ಉಚ್ಛಾರಣೆ ಕಷ್ಟವಾಗಿದ್ದರಿಂದ ಭಾರತದಲ್ಲಿ ಹೆಸರು ಬದಲಾವಣೆ ಮಾಡುವ ಸಾಧ್ಯತೆಯಿದೆ.

09. ಫ್ಲ್ಯಾಟ್ ಫಾರ್ಮ್

09. ಫ್ಲ್ಯಾಟ್ ಫಾರ್ಮ್

ಎಕ್ಸ್ ಬಿಎ ಎಂಬ ಕೋಡ್ ಪಡೆದಿರುವ ರೆನೊ ಸಣ್ಣ ಕಾರನ್ನು 'ಸಿಎಂಎಫ್-ಎ' (ಕಾಮನ್ ಮೊಡ್ಯುಲ್ ಫ್ಯಾಮಿಲಿ-ಆಫರ್ಡಬಲ್) ತಳಹದಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

08. ಪ್ರತಿಸ್ಪರ್ಧಿಗಳು

08. ಪ್ರತಿಸ್ಪರ್ಧಿಗಳು

ಇದರಂತೆ ದೇಶದ ಮುಂಚೂಣಿಯ ಸಂಸ್ಥೆಗಳ ಜನಪ್ರಿಯ ಮಾದರಿಗಳಾದ ಮಾರುತಿ ಸುಜುಕಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

 07. ಬೆಲೆ

07. ಬೆಲೆ

ಮೂರು ಅಥವಾ ನಾಲ್ಕು ವೆರಿಯಂಟ್ ಗಳ ಆಯ್ಕೆಗಳಲ್ಲಿ ಲಭ್ಯವಿರಲಿರುವ ರೆನೊ ಸಣ್ಣ ಕಾರಿನ ಆರಂಭಿಕ ಬೆಲೆ 2.5 ಲಕ್ಷ ರು.ಗಳಾಗಿರಲಿದೆ.

 06. ಕಯೂ ಎಂದರೇನು?

06. ಕಯೂ ಎಂದರೇನು?

ಮಗದೊಂದು ಮೂಲದ ಪ್ರಕಾರ ರೆನೊ ಸಣ್ಣ ಕಾರಿನ ಹೆಸರು ಕಯೂ ಎಂದಾಗಿರಲಿದೆ. ಜಪಾನ್ ನಲ್ಲಿ ಇದರ ಅರ್ಥ ಪ್ರಯಾಣಿಸು ಎಂಬುದಾಗಿದೆ.

05. ಜಾಗತಿಕ ಎಂಟ್ರಿ

05. ಜಾಗತಿಕ ಎಂಟ್ರಿ

ಕೇವಲ ಭಾರತ ಮಾತ್ರವಲ್ಲದೆ ಏಕಕಾಲದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಗುರಿ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಅಲ್ಲದೆ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ಮಾರುಕಟ್ಟೆಯನ್ನು ತಲುಪಲಿದೆ.

04. ಎಂಜಿನ್

04. ಎಂಜಿನ್

ಇನ್ನು ಕಾರಿನಡಿಯಲ್ಲಿ 800 ಸಿಸಿ ಎಂಜಿನ್ ಲಗತ್ತಿಸುವ ಸಾಧ್ಯತೆಯಿದೆ.

 03. ಆಟೋಮ್ಯಾಟಿಕ್ ಕಾರು

03. ಆಟೋಮ್ಯಾಟಿಕ್ ಕಾರು

ಈ ನಡುವೆ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದೆ ಎಂಬುದು ಕುತೂಹಲದಾಯಕ ಸುದ್ದಿಯಾಗಿದೆ. ಅಲ್ಲದೆ ಆಟೋಮ್ಯಾಟಿಕ್ ಕಾರು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

02. ದಟ್ಸನ್ ಜೊತೆ ಹಂಚಿಕೆ

02. ದಟ್ಸನ್ ಜೊತೆ ಹಂಚಿಕೆ

ದಟ್ಸನ್ ನ ಮುಂಬರುವ ಬಜೆಟ್ ಕಾರಿನೊಂದಿಗೂ ರೆನೊ ತನ್ನ ತಳಹದಿಯನ್ನು ಹಂಚಿಕೊಂಡಿದ್ದು, ಹಾಗಾಗಿ ಎರಡು ಕಾರುಗಳ ನಡುವೆ ಅನೇಕ ಸಾಮ್ಯತೆ ಕಂಡುಬರುವ ಸಾಧ್ಯತೆಯಿದೆ. ಇವೆರಡು ಕೆಲವೊಂದು ಬದಲಾವಣೆಗಳೊಂದಿಗೆ ತಮ್ಮದೇ ಆದ ಲಾಂಛನದೊಂದಿಗೆ ಮಾರುಕಟ್ಟೆಗೆ ಆಗಮಿಸಲಿದೆ.

01. ಯಶ ಕಂಡಿತೇ?

01. ಯಶ ಕಂಡಿತೇ?

ಒಟ್ಟಿನಲ್ಲಿ ದಶಕಗಳಿಂದಲೂ ದೇಶದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಆಲ್ಟೊ ಸವಾಲನ್ನು ಮೆಟ್ಟಿ ನಿಲ್ಲಲು ರೆನೊ ಸಣ್ಣ ಕಾರು ಯಶ ಕಂಡಿತೇ ಎಂಬುದು ಪ್ರಶ್ನೆಯ ವಿಚಾರವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

Most Read Articles

Kannada
English summary
Renault India has been working on a small car project for a while now. The French manufacturer is now ready to present it globally in India by May, 2015.
Story first published: Thursday, April 16, 2015, 9:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X