ಹ್ಯಾಂಡ್ ಬ್ರೇಕ್ ದೋಷ; 389 ಪೊಲೊ ಕಾರುಗಳಿಗೆ ಹಿಂದಕ್ಕೆ ಕರೆ

ಎರಡು ದಿನಗಳ ಹಿಂದೆಯಷ್ಟೇ ಭಾರತದಲ್ಲಿ ತನ್ನೆಲ್ಲ ಪೊಲೊ ಮಾದರಿಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸುವಂತೆ ತನ್ನೆಲ್ಲ ಡೀಲರ್ ಶಿಪ್ ಗಳಿಗೆ ಫೋಕ್ಸ್ ವ್ಯಾಗನ್ ಸೂಚನೆ ರವಾನಿಸಿತ್ತು. ಇದಾದ ಬೆನ್ನಲ್ಲೇ ತಾಜಾ ಬೆಳವಣಿಗೆಯಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜರ್ಮನಿ ಮೂಲದ ಈ ಐಷಾರಾಮಿ ಸಂಸ್ಥೆಯು 389 ಪೊಲೊ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ.

2015 ಸೆಪ್ಟೆಂಬರ್ ತಿಂಗಳಿಂದ ನಿರ್ಮಾಣವಾಗಿರುವ 389 ಪೊಲೊ ಮಾದರಿಗಳಲ್ಲಿ ಹ್ಯಾಚ್ ಬ್ರೇಕ್ ಯಾಂತ್ರಿಕ ರಚನೆಯಲ್ಲಿ ದೋಷ ಕಾಣಿಸಿಕೊಂಡಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಿಕಾಲ್ ಘೋಷಿಸಿದೆ.

ಫೋಕ್ಸ್ ವ್ಯಾಗನ್

ಆದರೆ ಅಮೆರಿಕದ ಮಹಾ ಮಾಲಿನ್ಯ ಮೋಸ ಪ್ರಕರಣದ ಬೆನ್ನಲ್ಲೇ ಪೊಲೊ ಮಾರಾಟಕ್ಕೆ ಭಾರತದಲ್ಲೂ ತತ್ ಕ್ಷಣಕ್ಕೆ ಬ್ರೇಕ್ ಹಾಕಿರುವ ಘಟನೆಗೂ ಸಂಬಧವಿದೆಯೇ ಎಂಬುದು ಗೊಂದಲಕ್ಕೀಡು ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಫೋಕ್ಸ್ ವ್ಯಾಗನ್ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮಟ್ಟ ಕಾಪಾಡಲು ತಪಾಸಣೆಯ ವೇಳೆ ವಿಶೇಷ ಸಾಫ್ಟ್ ವೇರ್ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿತ್ತು. ಬರೋಬ್ಬರಿ 1.1 ಕೋಟಿ ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ಇಂತಹ ಮಾಲಿನ್ಯ ಮೋಸ ಎಸಗಿತ್ತು.

ಪ್ರಸ್ತುತ ಗ್ರಾಹಕರು ಫೋಕ್ಸ್ ವ್ಯಾಗನ್ ಅಧಿಕೃತ ಶೋ ರೂಂಗಳಿಗೆ ಕರೆ ಮಾಡಿ ತಮ್ಮ ಕಾರಿನಲ್ಲೂ ಸಮಸ್ಯೆ ತಟ್ಟಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಕೇವಲ ಒಂದು ತಾಸಿನೊಳಗೆ ಯಾವುದೇ ಶುಲ್ಕ ವಿಧಿಸದೆ ಸಮಸ್ಯೆ ಬಗೆ ಹರಿಸಿ ಕೊಡಲಾಗುವುದು.

ಈಗ ಶೇಖರಣೆಯಲ್ಲಿರುವ ಪೊಲೊ ಕಾರುಗಳನ್ನು ಪರೀಶೀಲಿಸಿದ ಬಳಿಕ ಸ್ಧಗಿತಗೊಳಿಸಾಗಿರುವ ಮಾರಾಟವನ್ನು ಮುಂದುವರಿಸಲಾಗುವುದು. ಪೊಲೊ ಹೊರತುಪಡಿಸಿ ಸಂಸ್ಥೆಯ ಇತರೆಲ್ಲ ಶ್ರೇಣಿಯ ವಾಹನಗಳ ಮಾರಾಟವು ಎಂದಿನಂತೆ ನಡೆಯಲಿದೆ.

Most Read Articles

Kannada
English summary
Volkswagen Passenger Cars India calls back 389 Polo models into the workshop
Story first published: Friday, October 9, 2015, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X