ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

By Nagaraja

ಜಗತ್ತಿನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ( VW AG) ಅಧೀನತೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಾರು ಬ್ರಾಂಡ್ ಅತಿ ದೊಡ್ಡ ಮಾಲಿನ್ಯ ಮೋಸ ಮಾಡಿರುವುದು ಬಯಲಿಗೆ ಬಂದಿದ್ದು, ಸಂಸ್ಥೆಗೆ ಭಾರಿ ಹಿನ್ನೆಡೆಯನ್ನುಂಟು ಮಾಡಿದೆ.

ಏನಿದು ಪ್ರಕರಣ?
ಜಗತ್ತಿನೆಲ್ಲ ದೇಶಗಳು ತನ್ನದೇ ಆದ ಮಾಲಿನ್ಯ ಪ್ರಮಾಣ ಮಿತಿಯನ್ನು ಆಳವಡಿಸುತ್ತದೆ. ಪ್ರತಿಯೊಂದು ಕಾರು ತಯಾರಿಕ ಸಂಸ್ಥೆಗಳು ಈ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಆದರೆ ಇಂಥದೊಂದು ಬೃಹತ್ ಪ್ರಮಾಣದ ಮೋಸ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಅಮೆರಿಕ ಮಾಲಿನ್ಯ ತಪಾಸನೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ಫೋಕ್ಸ್‌ವ್ಯಾಗನ್ ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ವ್ಯತ್ಯಾಸಗಳು ಕಂಡುಬಂದಿತ್ತು.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಫೋಕ್ಸ್ ವ್ಯಾಗನ್ ಸಂಸ್ಥೆಯ ಈ ಮಹಾ ಮೋಸ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಅಮೆರಿಕನ್ ಸಂಶೋಧಕರು ಯಶ ಕಂಡಿದ್ದಾರೆ. ವಿಶೇಷ ಎಂದರೆ ಭಾರತೀಯ ಮೂಲದ ಸಂಶೋಧಕ ಅರವಿಂದ ತಿರುವೆಂಗದಮ್ (32) ಈ ತಂಡದಲ್ಲಿದ್ದರು ಎಂಬುದು ಹೆಮ್ಮೆಯ ವಿಚಾರ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ (ಇಪಿಎ) ನೀಡಿರುವ ಮಾಹಿತಿಗಳ ಪ್ರಕಾರ ಜನಪ್ರಿಯ ಪಸ್ಸಾಟ್, ಜೆಟ್ಟಾ, ಬೀಟೆಲ್, ಗಾಲ್ಫ್ ಹಾಗೂ ಆಡಿ ಎ3 ಸೇರಿದಂತೆ ಸರಿ ಸುಮಾರು 1.10 ಕೋಟಿ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಅಮೆರಿಕ ಪರಿಸರ ಕಾಯ್ದೆಯನ್ನೇ ಉಲ್ಲಂಘಿಸಿರುವ ಫೋಕ್ಸ್‌ವ್ಯಾಗನ್ ಜಾಗತಿಕ ಮಟ್ಟದ ಶೇರುಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅಲ್ಲದೆ 1.17 ಲಕ್ಷ ಕೋಟಿ ದಂಡ ಕಟ್ಟಬೇಕಾದ ಭೀತಿ ಎಧುರಿಸುತ್ತಿದ್ದು, ಮಾರುಕಟ್ಟೆಯಿಂದ ಕಾರುಗಳು ಹಿಂಪಡೆದು ದೋಷ ಸರಿಪಡಿಸಬೇಕಾಗಿದೆ. ಇದೀಗ ತಪ್ಪೊಪ್ಪಿಕೊಂಡಿರುವ ಫೋಕ್ಸ್‌ವ್ಯಾಗನ್ ನಷ್ಟವನ್ನು ಸರಿದೂಗಿಸಲು 46,200 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ ಎಂಬುದು ತಿಳಿದು ಬಂದಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ನಂತರ ಕಂಡು ಬಂದಿರುವ ಮಹತ್ತರ ಬೆಳವಣಿಗೆಯಲ್ಲಿ ಫೋಕ್ಸ್‌ವ್ಯಾಗನ್ ಸಿಇಒ ಮಾರ್ಟಿನ್ ವಿಂಟರ್‌ಕಾರ್ನ್ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಪ್ರಸಂಗವೂ ಎದುರಾಗಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಕಳೆದ 78 ವರ್ಷಗಳ ಆಟೋ ಕ್ಷೇತ್ರದ ಇತಿಹಾಸದಲ್ಲೇ ಇದು ಅತಿ ದೊಡ್ಡ ಮೋಸದ ಪ್ರಕರಣ ಎಂಬ ಕಪ್ಪು ಚುಕ್ಕೆಯೂ ಫೋಕ್ಸ್‌ವ್ಯಾಗನ್ ಮೇಲೆ ಬಿದ್ದಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಫೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನತೆಯಲ್ಲಿರುವ ಆಡಿ, ಬೆಂಟ್ಲಿ, ಬುಗಾಟಿ, ಲಂಬೋರ್ಗಿನಿ, ಪೋರ್ಷೆ, ಸಿಯೆಟ್, ಸ್ಕೋಡಾ ಮುಂತಾದ ಕಾರು ಬ್ರ್ಯಾಂಡ್ ಗಳಲ್ಲೂ ಮೋಸದಾಟ ಪ್ರಕರಣ ನಡೆದಿರಬಹುದೇ ಎಂಬ ಭೀತಿ ಕಾಡುತ್ತಿದೆ. ಈ ಪೈಕಿ ಆಡಿ ಎ3 ಕಾರಿನಲ್ಲಿ ಇದಕ್ಕೆ ಸಮಾನವಾದ ಪ್ರಕರಣ ಬಯಲಾಗಿದೆ.

ಫೋಕ್ಸ್‌ವ್ಯಾಗನ್ 'ಮಹಾ' ಮಾಲಿನ್ಯ ಮೋಸ; ಆಗಿದ್ದೇನು?

ಪ್ರಸ್ತುತ ಜರ್ಮನಿಯ ಬಹು ರಾಷ್ಟ್ರೀಯ ಸಂಸ್ಥೆಯೀಗ ಭಾರಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಟು ಸತ್ಯ ಬಯಲಾಗುವ ಸಾಧ್ಯತೆಯಿದೆ.


Most Read Articles

Kannada
English summary
Volkswagen Pollution scandal explained
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X