ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಬೆಂಗಳೂರಿನಲ್ಲಿ 150ರಷ್ಟು ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ ಆರಂಭಕ್ಕೆ ಬಿಎಂಟಿಸಿ ಗ್ರೀನ್ ಸಿಗ್ನಲ್ ನೀಡಿದೆ.

By Nagaraja

ಅತಿ ಶೀಘ್ರದಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 150ರಷ್ಟು ಎಲೆಕ್ಟ್ರಿಕ್ ಬಸ್ಸುಗಳ ಸಂಚಾರವನ್ನು ಆರಂಭಿಸಲಿದೆ. ಆದರೆ ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲಿರುವ ಬಿಎಂಟಿಸಿ ಬಸ್ಸಿನ ದರ ಕೇಳಿದ್ರೆ ನೀವು ಖಂಡಿತ ಶಾಕ್ ಆಗ್ತೀರಾ! ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನವನ್ನು ಓದಿ...

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

2014 ಫೆಬ್ರವರಿಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದ್ದ ಬಿಎಂಟಿಸಿ, ದುಬಾರಿ ವೆಚ್ಚದ ಹಿನ್ನಲೆಯಲ್ಲಿ ಯೋಜನೆ ಕೈಬಿಟ್ಟಿತ್ತು. ಈಗ ಎರಡು ವರ್ಷಗಳ ಕಾಯುವಿಕೆಯ ಬಳಿಕ 150 ಬಸ್ಸುಗಳನ್ನು ರಸ್ತೆಗಳಿಸಲು ಬಿಎಂಟಿಸಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಇದರೊಂದಿಗೆ ವಿದ್ಯುತ್ ಚಾಲಿತ ಬಸ್ಸುಗಳನ್ನು ಬಳಸಲಿರುವ ದೇಶದ ಮೊದಲ ನಗರವೆಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಅಷ್ಟಕ್ಕೂ ಬಿಎಂಟಿಸಿ ಖರೀದಿಸಿರುವ ಪ್ರತಿಯೊಂದು ಎಲೆಕ್ಟ್ರಿಕ್ ಬಸ್ಸಿಗೆ ಎಷ್ಟು ವೆಚ್ಚ ತಗುಲುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು, ಬರೋಬ್ಬರಿ 2.7 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುತ್ತದೆ ಎಂಬುದನ್ನು ಮೂಲಗಳು ಬಹಿರಂಗಪಡಿಸಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ವಿಶ್ಲೇಷಕರ ಪ್ರಕಾರ ಈಗಿನ ಮಾರುಕಟ್ಟೆ ದರ ಪರಿಗಣಿಸಿದಾಗ ಬಿಎಂಟಿಸಿ ಖರೀದಿಸುತ್ತಿರುವ ಬಸ್ಸುಗಳು ಸಾಕಷ್ಟು ದುಬಾರಿಯೆನಿಸುತ್ತದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ದರ 1.5 ಕೋಟಿ ಮೀರದು. ಇದು ಹೊಸ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಇನ್ನೊಂದೆಡೆ ಭಾರತೀಯ ಸರಕಾರದ ಮಹತ್ತರ ಫೇಮ್ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಲು ಬಿಎಂಟಿಸಿ ಬಸ್ಸುಗಳಿಗೆ ಸಾಧ್ಯವಾಗಲಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಬೆಂಗಳೂರಿನಲ್ಲಿ ಮಾಲಿನ್ಯ ದಿನದಿಂದ ದಿನಕ್ಕೆ ಹದೆಗೆಡುತ್ತಿರುವಂತೆಯೇ ಬಿಎಂಟಿಸಿ ಈ ನಿರ್ಧಾರ ಸೂಕ್ತವೆನಿಸಿದರೂ ಬಸ್ ವೆಚ್ಚ ಇಷ್ಟೊಂದು ದುಬಾರಿಯಾಗಿರುವುದು ಬಹಳಷ್ಟು ಚರ್ಚೆಗೀಡು ಮಾಡಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸುಗಳ ಬಗೆಗಿನ ತಾಂತ್ರಿಕ ವಿವರಗಳು ಇನ್ನಷ್ಟೇ ಹೊರಬರಬೇಕಿದೆ. ಅದಾದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಎಲೆಕ್ಟ್ರಿಕ್ ಬಸ್ಸುಗಳನ್ನು ಬಳಕೆ ಮಾಡಲಾಗುವುದು. ಇಲ್ಲಿ ಡೀಸೆಲ್ ಬಸ್ಸುಗಳ ಕಾರ್ಯಾಚರಣೆಗೆ ಪ್ರತಿ ಕೀ.ಮೀ.ಗೆ 18 ರುಪಾಯಿ ವೆಚ್ಚ ತಗುಲಿದ್ದರೆ ಎಲೆಕ್ಟ್ರಿಕ್ ಬಸ್ಸುಗಳ ವೆಚ್ಚ ಪ್ರತಿ ಕೀ.ಮೀ. 8 ರುಪಾಯಿ ಆಗಿರಲಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಚಾರ್ಜಿಂಗ್ ಪಾಯಿಂಟ್ ಗಳಂತಹ ಮೂಲಸೌಕರ್ಯಗಳ ವೃದ್ಧಿಗಾಗಿ ಗಮನ ಹರಿಸುತ್ತಿರುವ ಬಿಎಂಟಿಸಿ, ಎಲೆಕ್ಟ್ರಿಕ್ ಬಸ್ಸುಗಳಿಗಾಗಿ ಪ್ರತ್ಯೇಕ ಡಿಪೋ ತೆರೆಯುವ ಯೋಜನೆಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಅಶೋಕ್ ಲೇಲ್ಯಾಂಡ್ ನಂತಹ ಸಂಸ್ಥೆಗಳು ದೇಶದಲ್ಲೇ ಎಲೆಕ್ಟ್ರಿಕ್ ಬಸ್ಸುಗಳ ನಿರ್ಮಾಣವನ್ನು ಆರಂಭಿಸಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇವೆ ಲಭ್ಯವಾಗಲು ನೆರವಾಗಲಿದೆ. ವಿದೇಶಿ ರಾಷ್ಟ್ರಗಳಲ್ಲೂ ಎಲೆಕ್ಟ್ರಿಕ್ ಬಸ್ಸುಗಳ ಬಳಕೆ ಹೆಚ್ಚಿರುವುದು ಗಮನಾರ್ಹವೆನಿಸುತ್ತದೆ.

ಬೆಂಗಳೂರಿನಲ್ಲಿ ಓಡಾಡಲಿರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಬೆಲೆ ಕೇಳಿದ್ರೆ ಶಾಕ್!

ಪ್ರಾಯೋಗಿಕ ಸಂಚಾರಕ್ಕಾಗಿ ಅಂದಾಜು 2.9 ಕೋಟಿ ರುಪಾಯಿ ವೆಚ್ಚದಲ್ಲಿ ಚೀನಾದ ಯುತೋಪಿಯಾ ಆಟೋಮೇಶನ್ ಆಂಡ್ ಕಂಟ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಬಸ್ಸನ್ನು ಖರೀದಿಸಲಾಗಿತ್ತು. ಇದು ಸಾಮ್ಯಾನ ಡೀಸೆಲ್ ಬಸ್ಸಿಗಿಂತಲೂ ಹತ್ತು ಪಟ್ಟು ದುಪ್ಪಾಟಾಗಿತ್ತು.

ವಿಶೇಷತೆಗಳು

ವಿಶೇಷತೆಗಳು

ವಾಯು, ಶಬ್ದ ಮಾಲಿನ್ಯ ರಹಿತ ಬಸ್

ಕಡಿಮೆ ಚಾಲನಾ ಹಾಗೂ ನಿರ್ವಹಣಾ ವೆಚ್ಚ

ಸಂಪೂರ್ಣ ಹವಾ ನಿಯಂತ್ರಿತ

ಎಲ್‌ಇಡಿ ಮಾರ್ಗಸೂಚಿ ಫಲಕ,

ಸಂಪೂರ್ಣ ಚಾರ್ಜ್ ಮಾಡಿಸಲು ಆರರಿಂದ ಏಳು ತಾಸುಗಳ ಅಗತ್ಯ,

ವಿಶೇಷತೆಗಳು

ವಿಶೇಷತೆಗಳು

ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 240ರಿಂದ 260 ಕೀ.ಮೀ. ವರೆಗೂ ಪಯಣ,

ಸುರಕ್ಷತೆ ದೃಷ್ಟಿಕೋನದಲ್ಲಿ ಎರಡು ಸಿಸಿ ಕ್ಯಾಮೆರಾ ಆಳವಡಿಕೆ

ವಿಕಲಚೇತನರಿಗೆ ಬಸ್ ಏರಲು ವೀಲ್ ಚೇರ್ ವ್ಯವಸ್ಥೆ

ಸೌರಶಕ್ತಿಯಲ್ಲೂ ಚಾರ್ಜಿಂಗ್ ಸೌಲಭ್ಯ

ಬೆಸ್ಕಾನಿಂದ ವಿದ್ಯುತ್ ಪೂರೈಕೆ

Most Read Articles

Kannada
English summary
BMTC To Introduce Electric Bus — Each Bus Costs A Whopping 2.7 Crore!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X