ಬಂದೇ ಬಿಡ್ತು ರೆನೊ ಡಸ್ಟರ್ ಎಎಂಟಿ; ಸಮಗ್ರ ವಿವರಗಳನ್ನು ಓದಿ

By Nagaraja

ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ರೆನೊ, ಅತಿ ನೂತನ ಡಸ್ಟರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

Also Read: ಆಟೋ ಎಕ್ಸ್ ಪೋದಲ್ಲಿ ಡಸ್ಟರ್ ಮಿಂಚಿಂಗ್

ಮಾರುಕಟ್ಟೆಯಲ್ಲಿ ರೆನೊ ಡಸ್ಟರ್ ಮಾರಾಟ ಕಳೆಗುಂದಿರುವಂತೆಯೇ ನೂತನ ಎಎಂಟಿ ಆಗಮನವು ಹೆಚ್ಚಿನ ಉತ್ತೇಜನ ತುಂಬಲಿದ್ದು, ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಅಷ್ಟಕ್ಕೂ ನೂತನ ಡಸ್ಟರ್ ಎಎಂಟಿ ಬೆಲೆ ಹಾಗೂ ಸಮಗ್ರ ಮಾಹಿತಿಗಳಿಗಾಗಿ ಫೋಟೊ ಸ್ಲೈಡರ್ ನತ್ತ ಮುಂದುವರಿಯಿರಿ...

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ರೆನೊ ಡಸ್ಟರ್ ಎಎಂಟಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 8.46 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ನೂತನ ಡಸ್ಟರ್ ಕಾರಿನಲ್ಲಿ 6 ಸ್ಪೀಡ್ ಈಸಿ - ಆರ್ ಎಎಂಟಿ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ಡಸ್ಟರ್ ಎಎಂಟಿ ಕೆ9ಕೆ 1.5 ಲೀಟರ್ ಡಿಸಿಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 245 ಎನ್ ಎಂ ತಿರುಗುಬಲದಲ್ಲಿ (1750 ಆರ್‌ಪಿಎಂ) 110 ಅಶ್ವಶಕ್ತಿಯನ್ನು (4000 ಆರ್‌ಪಿಎಂ) ಉತ್ಪಾದಿಸಲಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ನೂತನ ರೆನೊ ಡಸ್ಟರ್ ಕಾರಿನಲ್ಲಿ 32ಕ್ಕೂ ಹೆಚ್ಚು ಬದಲಾವಣೆಗಳನ್ನು ತರಲಾಗಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

2016 ಮಾರ್ಚ್ 03ರಿಂದಲೇ (ಇಂದಿನಿಂದಲೇ) ರೆನೊ ಡಸ್ಟರ್ ಎಎಂಟಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ.

ದೆಹಲಿ ಎಕ್ಸ್ ಶೋ ರೂಂ ಬೆಲೆ

ದೆಹಲಿ ಎಕ್ಸ್ ಶೋ ರೂಂ ಬೆಲೆ

ಪರಿಷ್ಕೃತ ಡಸ್ಟರ್ ಪೆಟ್ರೋಲ್ ವೆರಿಯಂಟ್ ಗಳು 8.46 ಲಕ್ಷ ರು.ಗಳಿಂದ 9.26 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಂತೆಯೇ ಡೀಸೆಲ್ ಮಾದರಿಗಳು 9.26 ಲಕ್ಷ ರು.ಗಳಿಂದ ಟಾಪ್ ಎಂಡ್ 13.56 ಲಕ್ಷ ರು.ಗಳಷ್ಟು ಬಲೆ ಬಾಳುತ್ತದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ನೂತನ ಡಸ್ಟರ್ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಐದು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ - ಸ್ಟ್ಯಾಂಡರ್ಡ್, ಆರ್ ಎಕ್ಸ್ ಇ, ಆರ್ ಎಕ್ಸ್ ಎಲ್, ಆರ್ ಎಕ್ಸ್ ಎಸ್ ಮತ್ತು ಆರ್ ಎಕ್ಸ್ ಝಡ್.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ರೆನೊ ಡಸ್ಟರ್ ಡೀಸೆಲ್ 6 ಸ್ಪೀಡ್ ಈಸಿ-ಆರ್ ಎಎಂಟಿ ಮಾದರಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 11.66 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ನೂತನ ಡಸ್ಟರ್ ಮುಂಭಾಗದಲ್ಲಿ ಟ್ವಿನ್ ಸ್ಲೇಟ್ ಕ್ರೋಮ್ ಗ್ರಿಲ್, ಹಾಕ್ ಐ ಕ್ಲಸ್ಟರ್ ಹೆಡ್ ಲ್ಯಾಂಪ್, ಪರಿಷ್ಕೃತ ಫಾಗ್ ಲ್ಯಾಂಪ್, 16 ಇಂಚುಗಳ ಅಲಾಯ್ ವೀಲ್, ಎಲ್ ಇಡಿ ಟೈಲ್ ಲ್ಯಾಂಪ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್ ಜೊತೆ ಟರ್ನ್ ಇಂಡಿಕೇಟರ್, ರೂಫ್ ರೈಲ್ ಮತ್ತು ಹೊಸತಾದ ಕೆಯಾನ್ ಆರಂಜ್ ಬಣ್ಣದ ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ಇನ್ನು ಕಾರಿನೊಳಗೆ ರಿಯರ್ ವ್ಯೂ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಟೋ ಅಪ್/ಡೌನ್ ಪವರ್ ವಿಂಡೋ, ಹೊಸತಾದ ಮಿಡಿಯಾ ನೇವಿಗೇಷನ್ ಮುಂತಾದ ವ್ಯವಸ್ಥೆಗಳಿರಲಿದೆ.

ಬಂದೇ ಬಿಡ್ತು ಪರಿಷ್ಕೃತ ರೆನೊ ಡಸ್ಟರ್

ಕಾರಿನ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್, ಇಬಿಡಿ ಜೊತೆ ಬ್ರೇಕ್ ಅಸಿಸ್ಟ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಇಎಸ್ ಪಿ ಮತ್ತು ಹಿಲ್ ಅಸಿಸ್ಟ್ ಮುಂತಾದ ವೈಶಿಷ್ಟ್ಯಗಳಿರಲಿದೆ.

Most Read Articles

Kannada
English summary
Facelifted Renault Duster Launched In India
Story first published: Thursday, March 3, 2016, 9:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X