ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

By Nagaraja

ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಸ್ಯಾಂಗ್ಯೊಂಗ್ ಮೋಟಾರ್ ಸಂಸ್ಥೆಗಳು ಒಟ್ಟುಸೇರಿ ಅವಳಿ ಕ್ರೀಡಾ ಬಳಕೆಯ ವಾಹನಗಳನ್ನು (ಎಸ್ ಯುವಿ) ಅಭಿವೃದ್ಧಿಪಡಿಸಲು ಕೊನೆಗೂ ನಿರ್ಧರಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಮೂಲದ ವಾಹನ ಸಂಸ್ಥೆಯನ್ನು 2011ರಲ್ಲೇ ಮಹೀಂದ್ರ ತನ್ನ ತೆಕ್ಕೆಗೆ ಸೇರಿಸಿಕೊಂಡಿರುವುದನ್ನು ನೆನಪಿಸಿಕೊಳ್ಳಬಹುದು.

ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

ಹೊಸ ಶ್ರೇಣಿಯ ಪೆಟ್ರೋಲ್ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದ ಬಳಿಕವೀಗ ಎರಡು ಹೊಸತಾದ ಕ್ರೀಡಾ ಬಳಕೆಯ ವಾಹನದ ಸಂರಚರಣೆಯಲ್ಲಿ ಎರಡು ಸಂಸ್ಥೆಗಳು ಕಾರ್ಯ ಮಗ್ನವಾಗಿದೆ.

ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

ಪ್ರಮುಖವಾಗಿಯೂ ನಿರ್ಮಾಣ ವೆಚ್ಚ ಕಡಿತ ಮಾಡಲು ಮಹೀಂದ್ರ ಗುರಿಯಿರಿಸಿಕೊಂಡಿದೆ. ಈ ಪೈಕಿ ಮೊದಲನೇ ಎಸ್ ಯುವಿ ಸ್ಯಾಂಗ್ಯೊಂಗ್ ಟಿವೊಲಿ ತಳಹದಿಯಲ್ಲಿ ನಿರ್ಮಾಣವಾದರೆ ಎರಡನೇಯದ್ದು ಹೊಸತಾದ ಏಳು ಸೀಟಿನ ಜಾಗತಿ ಎಸ್ ಯುವಿ ಎನಿಸಿಕೊಳ್ಳಲಿದೆ.

ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

ಅರ್ಬನ್ ಎಸ್ ಯುವಿ ಎನಿಸಿಕೊಳ್ಳಲಿರುವ ಕಾಂಪಾಕ್ಟ್ ಎಸ್ ಯುವಿ ಟಿವೊಲಿ ಅಥವಾ ಎಕ್ಸ್100 ತಳಹದಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಭಾರತದಲ್ಲೂ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಎಸ್ ಯುವಿ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

ಎರಡನೇಯ ಬೃಹತ್ತಾದ ಎಸ್ ಯುವಿ ನೇರವಾಗಿ ಟೊಯೊಟಾ ಫಾರ್ಚ್ಯುನರ್ ಸ್ಪರ್ಧೆಯನ್ನು ಎದುರಿಸಲಿದೆ. ಅಲ್ಲದೆ 2020ರ ವೇಳೆಯಾಗುವಾಗ ಉತ್ತರ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಅವಳಿ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ-ಸ್ಯಾಂಗ್ಯೊಂಗ್

ಬೆಲೆ ಕಡಿತಕ್ಕಾಗಿ ಜಂಟಿ ತಳಹದಿಯಲ್ಲಿ ಎಸ್ ಯುವಿ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದನ್ನು 2016 ಪ್ಯಾರಿಸ್ ಮೋಟಾರು ಶೋದಲ್ಲಿ ಮಹೀಂದ್ರ ಖಚಿತಪಡಿಸಿಕೊಂಡಿದೆ. ಅಲ್ಲದೆ ಭಾರತೀಯ ಮಾರುಕಟ್ಟೆಗಾಗಿ ಟಿವೊಲಿ ತಳಹದಿಯನ್ನು ಹಂಚಿಕೊಳ್ಳುವ ಇರಾದೆಯನ್ನು ಸ್ಯಾಂಗ್ಯೊಂಗ್ ವ್ಯಕ್ತಪಡಿಸಿದೆ.

Most Read Articles

Kannada
English summary
Mahindra-Ssangyong To Develop Petrol Engine And Two New Models
Story first published: Saturday, October 8, 2016, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X