ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಉಪಯುಕ್ತ ವಾಹನ ವಿಭಾಗದಲ್ಲಿ ಅಗ್ರಜನೆನಿಸಿಕೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ ದೇಶದಲ್ಲಿ ಮತ್ತಷ್ಟು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡಲಿದೆ.

By Nagaraja

ನಿರಂತರ ಅಂತರಾಳದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವುದರಲ್ಲಿ ಸದಾ ಬದ್ಧತೆಯನ್ನು ಪ್ರದರ್ಶಿಸಿರುವ ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯೀಗ ಮತ್ತೆರಡು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಅಷ್ಟಕ್ಕೂ ಮಹೀಂದ್ರ ಬಿಡುಗಡೆ ಮಾಡಲಿರುವ ಎರಡು ಆಕರ್ಷಕ ಕಾರುಗಳು ಯಾವುದೆಂಬುದನ್ನು ತಿಳಿಯುವ ಕುತೂಹಲ ನಮ್ಮ ಹಾಗೆಯೇ ನಿಮ್ಮಲ್ಲೂ ಇರಬಹುದು. ಇದಕ್ಕಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಹೌದು, ದೇಶದ ಎಸ್ ಯುವಿ ದೈತ್ಯ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಮುಂದಿನ ವರ್ಷ ಅಂದರೆ 2017ನೇ ಸಾಲಿನಲ್ಲಿ ಹೊಸತೊಂದು ಬಹು ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ತದಾ ಬಳಿಕ ಒಂದು ವರ್ಷದ ಬಿಡುವಿನ ನಂತರ 2018ನೇ ಸಾಲಿನಲ್ಲಿ ಟಿವೊಲಿ ಕ್ರೀಡಾ ಬಳಕೆಯ ವಾಹನದ ತಳಹದಿಯಲ್ಲಿ ನೂತನ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವ ಇರಾದೆಯನ್ನು ಹೊಂದಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ದಕ್ಷಿಣ ಕೊರಿಯಾ ಮೂಲದ ಸ್ಯಾಂಗ್ಯೊಂಗ್ ಸಹಯೋಗದಲ್ಲಿ ನೂತನ ಮಿನಿ ಎಸ್ ಯುವಿ ಭಾರತಕ್ಕೆ ಪ್ರವೇಶ ಪಡೆಯಲಿದೆ. ಇವೆಲ್ಲವೂ ಉಪಯುಕ್ತ ವಾಹನ ವಿಭಾಗದಲ್ಲಿ ಮತ್ತಷ್ಟು ಬಲಶಾಲಿಯಾಗಲು ನೆರವಾಗಲಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಮಹೀಂದ್ರ ಬಿಡುಗಡೆ ಮಾಡಲಿರುವ ನೂತನ ಎಂಪಿವಿ ಕಾರು 'ಯು231' ಎಂಬ ಕೋಡ್ ಪಡೆದುಕೊಂಡಿದೆ. ಇದು ಪ್ರಮುಖವಾಗಿಯೂ ಅತಿ ಹೆಚ್ಚು ಮಾರಾಟದಲ್ಲಿರುವ ಇನ್ನೋವಾ ಕ್ರೈಸ್ಟಾಗೆ ಪ್ರತಿಸ್ಪರ್ಧಿಯಾಗಲಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಮಹೀಂದ್ರ ನೂತನ ಎಂಪಿವಿ ಈಗಾಗಲೇ ಟೆಸ್ಟಿಂಗ್ ವೇಳೆ ಹಲವಾರು ಬಾರಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ. ಇದು ಕುತೂಹಲವನ್ನು ಇಮ್ಮಡಿಗೊಳಿಸುವಂತಾಗಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಹೊಸ ಎಂಪಿವಿ ಕಾರಿನ ಹೆಸರು ಏನಾಗಿರಬಹುದೆಂಬುದು ಹೆಚ್ಚಿನ ಆಸಕ್ತಿ ಕೆರಳಿಸಿದೆ. ಮಗದೊಂದು ಮೂಲದ ಪ್ರಕಾರ ಪ್ರಕಾರ ಪ್ರಕಾರ ನೂತನ ಕಾರು ಟಿಯುವಿ500 ಎಂದು ಹೆಸರಿಸಿಕೊಳ್ಳಲಿದೆ. ಆದರೆ ಇವೆಲ್ಲವೂ ಇನ್ನಷ್ಟೇ ಖಚಿತವಾಗಬೇಕಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ನಿರ್ವಹಣೆ ಬಗ್ಗೆ ಮಾತನಾಡುವುದಾದ್ದಲ್ಲಿ ಮಹೀಂದ್ರ ಕ್ಸೈಲೋ ಅಥವಾ ಸ್ಪಾರ್ಪಿಯೊದಲ್ಲಿರುವುದಕ್ಕೆ ಸಮಾನವಾದ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ನೂತನ ಎಂಪಿವಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಮಾರಾಟವಾಗುವ ಸಾಧ್ಯತೆ ಜಾಸ್ತಿಯಾಗಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಮಹೀಂದ್ರ ನೂತನ ಎಂಪಿವಿ ಕಾರಿನಲ್ಲಿ ಹೆಚ್ಚಿನ ಸ್ಥಳಾವಕಾಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಹೊರಮೈಯಲ್ಲಿ ಮಹೀಂದ್ರ ಟ್ರೇಡ್ ಮಾರ್ಕ್ ವಿನ್ಯಾಸವನ್ನು ರೂಪಿಸಲಾಗಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಇನ್ನೊಂದೆಡೆ ಸ್ಯಾಂಗ್ಯೊಂಗ್ ಟಿವೊಲಿ ತಳಹದಿಯಲ್ಲಿ ಕಾಂಪಾಕ್ಟ್ ಎಸ್ ಯುವಿ ಕಾರನ್ನು ಮಹೀಂದ್ರ ಬಿಡುಗಡೆ ಮಾಡಲಿದೆ. ಈ ಸಂಬಂಧ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಮಾರಾಟದಲ್ಲಿ ಹ್ಯುಂಡೈ ಕ್ರೆಟಾ, ಮಾರುತಿ ವಿಟಾರಾ ಬ್ರಿಝಾ ಮತ್ತು ರೆನೊ ಡಸ್ಟರ್ ಮುಂತಾದ ಮಾದರಿಗಳಿಗೆ ಮಹೀಂದ್ರ ನೂತನ ಮಿನಿ ಎಸ್ ಯುವಿ ಪ್ರತಿಸ್ಪರ್ಧಿಯಾಗಲಿದೆ.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

2018ರಲ್ಲಿ ಬಿಡುಗಡೆಯಾಗಲಿರುವ ಮಹೀಂದ್ರ ಕಾಂಪಾಕ್ಟ್ ಎಸ್ ಯುವಿ ಕಾರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಿರಲಿದೆ. ಇದನ್ನು ಕೆಯುವಿ100 ಅಥವಾ ನುವೊಸ್ಪೋರ್ಟ್ ನಿಂದ ಆಮದು ಮಾಡುವ ಸಾಧ್ಯತೆಯಿದ್ದು, ವಿಶೇಷವಾಗಿ ಟ್ಯೂನ್ ಮಾಡಲಾಗುವುದು.

ಮಹೀಂದ್ರದಿಂದ ಮತ್ತೆರಡು ಆಕರ್ಷಕ ಕಾರುಗಳು ಭಾರತಕ್ಕೆ!

ಒಟ್ಟಿನಲ್ಲಿ ಮಹೀಂದ್ರ ಹಂತ ಹಂತವಾಗಿ ಯೋಜನೆ ರೂಪಿಸಿಕೊಳ್ಳುತ್ತಿದ್ದು, ಉಪಯುಕ್ತ ವಾಹನ ವಿಭಾಗದಲ್ಲಿ ತನ್ನ ಮಾರಾಟ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಇರಾದೆಯಲ್ಲಿದೆ.

Most Read Articles

Kannada
English summary
Exclusive: Mahindra To Launch Two 'New' Vehicles For The Indian Market
Story first published: Monday, November 14, 2016, 9:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X