ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್: ಮಹೀಂದ್ರ ಒಡೆತನದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್ ಯುವಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದೆ.

By Super Admin

ದೇಶದ ಉಪಯುಕ್ತ ವಾಹನಗಳ ದೈತ್ಯ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ದೇಶಕ್ಕೆ ಸ್ಯಾಂಗ್ಯೊಂಗ್ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಲಿದೆ ಎಂಬುದು ಬಹಳ ಹಿಂದಿನಿಂದಲೇ ಸುದ್ದಿಯಾಗಿತ್ತು. ಇದಕ್ಕೀಗ ನೂತನ ಸ್ಯಾಂಗ್ಯೊಂಗ್ ಎಸ್ ಯುವಿ ಟೆಸ್ಟಿಂಗ್ ವೇಳೆ ಪತ್ತೆ ಹಚ್ಚಿರುವುದು ಮತ್ತಷ್ಟು ಹುರುಪು ಸಿಕ್ಕಿದಂತಾಗಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದ ಸ್ಯಾಂಗ್ಯೊಂಗ್ ಸಂಸ್ಥೆಯ ಶೇಕಡಾ 70ರಷ್ಟು ಶೇರನ್ನು ಖರೀದಿಸುವ ಮೂಲಕ ಮಹೀಂದ್ರ ಹೊಸ ಜೀವವನ್ನು ತುಂಬಿತ್ತು. ಇದು ಒಟ್ಟಾರೆ 470 ಕೋಟಿ ಅಮೆರಿಕನ್ ಡಾಲರ್ ಮೊತ್ತ ಅಂದಾಜಿಸಲಾಗಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಉಪಯುಕ್ತ ವಾಹನ ವಿಭಾಗದಲ್ಲಿ ತನ್ನ ಅಧಿಪತ್ಯವನ್ನು ಮತ್ತಷ್ಟು ಭದ್ರವಾಗಿಸಿರುವ ಇರಾದೆಯಲ್ಲಿರುವ ಮಹೀಂದ್ರ ಸಂಸ್ಥೆಯು ಟಿವೊಲಿ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ನೂತನ ಸ್ಯಾಂಗ್ಯೊಂಗ್ ಟಿವೊಲಿ 4202 ಎಂಎಂ ಉದ್ದ, 1798 ಎಂಎಂ ಅಗಲ, 1590 ಎಂಎಂ ಎತ್ತರ ಮತ್ತು 2600 ಎಂಎಂ ಚಕ್ರಾಂತರವನ್ನು ಪಡೆಯಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ ಮತ್ತು ರೆನೊ ಡಸ್ಟರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೂರಕಲಿದೆ. ಇದರಲ್ಲಿ ಮಹೀಂದ್ರ ಅಭಿವೃದ್ಧಿಪಡಿಸಿರುವ 1.6 ಲೀಟರ್ ಎಂಜಿನ್ ಪ್ರಮುಖವೆನಿಸಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ನೂತನ ಪೆಟ್ರೋಲ್ ಎಂಜಿನ್ 160 ಎನ್ ಎಂ ತಿರುಗುಬಲದಲ್ಲಿ 126 ಅಶ್ವಶಕ್ತಿ ಹಾಗೂ ಡೀಸೆಲ್ ಎಂಜಿನ್ 300 ಎನ್ ಎಂ ತಿರುಗುಬಲದಲ್ಲಿ 113 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆರಡು ಎಂಜಿನ್ ಗಳು ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗುವುದು. ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಟೈಲ್ ಲ್ಯಾಂಪ್ ಕಾಣ ಸಿಗಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಕಾರಿನೊಳಗೆ ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಗಳಿರಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಇತ್ಯಾದಿ ಸೌಲಭ್ಯಗಳಿರಲಿದೆ.

ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿದ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್‌ಯುವಿ

ಈ ಎಲ್ಲದರ ಬಗ್ಗೆ ಮಹೀಂದ್ರ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ. ಒಟ್ಟಾರೆಯಾಗಿ ಮಹೀದ್ರದ ನೂತನ ಸ್ಯಾಂಗ್ಯೊಂಗ್ ಕಾಂಪಾಕ್ಟ್ ಎಸ್ ಯುವಿ ಟಿವೊಲಿ ಎಂಬುದಾಗಿಯೇ ಹೆಸರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Spy Pics: Ssangyong Tivoli Spotted Testing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X