ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

By Nagaraja

ಈಗಷ್ಟೇ ಮಾಡೆಲ್ 3 ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆ ಮಾಡಿರುವ ಅಮೆರಿಕದ ಖ್ಯಾತ ಎಲೆಕ್ಟ್ರಿಕ್ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್ ಮಗದೊಂದು ಮಹತ್ತರ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ನಿಮ್ಮ ಮಾಹಿತಿಗಾಗಿ, ಟೆಸ್ಲಾ ಮಾಡೆಲ್ 3 ಬಿಡುಗಡೆಯಾದ ಕೆಲವೇ ತಾಸುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಭಾರತದಿಂದಲೂ ಟೆಸ್ಲಾ ಪರಿಸರ ಸ್ನೇಹಿ ಕಾರುಗಳಿಗೆ ಭಾರಿ ಬೇಡಿಕೆ ಕಂಡುಬಂದಿರುವುದು ಗಮನಾರ್ಹ.

ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

ಈ ನಡುವೆ ಇದೇ ವೇದಿಕೆಯಲ್ಲಿ ಟೆಸ್ಲಾ ಮಗದೊಂದು ಮಹತ್ತರ ಯೋಜನೆ ಬಹಿರಂಗಗೊಳಿಸಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಮಾಡೆಲ್ ಎಫ್ ಎಂ ಸ್ವಯಂಚಾಲಿತ ಹಾರುವ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

ಟೆಸ್ಲಾ ಹೊತ್ತುಕೊಂಡಿರುವ ಈ ಬಹುನಿರೀಕ್ಷಿತ ಕನಸು 2019ರ ವೇಳೆಯಾಗುವ ನನಸಾಗಲಿದೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ಸಂಸ್ಥೆ ಬಿಡುಗಡೆಗೊಳಿಸಿದೆ.

ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

ಈ ಸಂಬಂಧ ಇಟಲಿಯ ವಿಮಾನ ಸಂಸ್ಥೆ ವೊಲಂಟ್ ಶೆರ್ಜೊ (Volante Scherzo) ಪಾಲುದಾರಿಕೆ ಹೊಂದಲಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

ಪ್ರಸ್ತುತ ಯೋಜನೆಯು ಪ್ರಾಥಮಿಕ ಹಂತದಲ್ಲಿದ್ದು, ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಗಾಳಿಯಲ್ಲಿ ಗಂಟೆಗೆ 482 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ನನಸಾಗಲಿದೆ ಟೆಸ್ಲಾ 'ಮಾಡೆಲ್ ಎಫ್' ಸ್ವಯಂಚಾಲಿತ ಹಾರುವ ಕಾರುಗಳು

ಕಾರ್ಬನ್ ಫೈಬರ್ ನ್ಯಾನೋ ಬ್ಲೇಡ್, ಕಸ್ಟಮೈಸ್ಡ್ ತ್ರಿಡಿ ಪ್ರಿಂಟಡ್ ಚಾಸೀ ಹಾಗೂ ವಿಶಿಷ್ಟ ಸಾಫ್ಟ್ ವೇರ್ ಗಳನ್ನು ಇದಕ್ಕಾಗಿ ತಯಾರಿಸಲಾಗುವುದು. ಇದು ಸ್ವಯಂಚಾಲಿತ ಕಾರುಗಳ ಹಾರಾಟವನ್ನು ಮತ್ತಷ್ಟು ಸುಲಭವಾಗಿಸಲಿದೆ.

Most Read Articles

Kannada
English summary
Tesla announces Model F flying car ready to ship in 2019
Story first published: Saturday, April 2, 2016, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X