ಕಾರು, ಬೈಕ್ ಮಾಲಿಕರ ಜೇಬಿಗೆ ಕತ್ತರಿ; ವಿಮೆ ಕಂತಿನಲ್ಲಿ ಭಾರಿ ಏರಿಕೆ

By Nagaraja

ವಾಹನ ಮಾಲಿಕರ ಜೇಬಿಗೆ ಕತ್ತರಿ ಪ್ರಯೋಗಿಸಿರುವ ಕೇಂದ್ರ ಸರಕಾರ ಮುಂಬರುವ 2016 ಎಪ್ರಿಲ್ 01ರಿಂದ ಮೂರನೇ ವ್ಯಕ್ತಿಯ ವಾರ್ಷಿಕ ವಿಮೆ ಕಂತನ್ನು (ಥರ್ಡ್ ಪಾರ್ಟಿ) ಶೇಕಡಾ 40ರಷ್ಟು ಹೆಚ್ಚಳಗೊಳಿಸಲು ನಿರ್ಧರಿಸಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಪ್ರಯಾಣಿಕ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಎಲ್ಲ ವಾಹನಗಳ ವಿಮಾ ಕಂತನ್ನು ಶೇಕಡಾ 40ರಷ್ಟು ಹೆಚ್ಚಳಗೊಳಿಸಿದೆ.

ಕಾರು, ಬೈಕ್ ಮಾಲಿಕರ ಜೇಬಿಗೆ ಕತ್ತರಿ; ವಿಮೆ ಕಂತಿನಲ್ಲಿ ಭಾರಿ ಏರಿಕೆ

ವರ್ಷಂಪ್ರತಿ ಐಆರ್‌ಡಿಎ ವಿಮಾ ಕಂಪನಿಗಳಿಗೆ ಆದ ನಷ್ಟವನ್ನು ಮತ್ತು ಒಟ್ಟು ಕ್ಲೈಮ್ ಮಾಡಲಾದ ವಿಮೆಗಳ ಆಧಾರದಲ್ಲಿ ಥರ್ಡ್ ಪಾರ್ಟಿ ವಿಮೆಯನ್ನು ಪರಿಷ್ಕರಣೆಗೊಳಿಸುತ್ತಿದೆ. ಈಗ ಮಾಡಿರುವ ವಿಮಾ ಕಂತಿನ ಹೆಚ್ಚಳವು ವಾಹನ ಮಾಲಿಕರಿಗೆ ಬಲವಾದ ಹೊಡೆತವನ್ನೇ ನೀಡಲಿದೆ.

ಕಾರು, ಬೈಕ್ ಮಾಲಿಕರ ಜೇಬಿಗೆ ಕತ್ತರಿ; ವಿಮೆ ಕಂತಿನಲ್ಲಿ ಭಾರಿ ಏರಿಕೆ

ವಾಣಿಜ್ಯ ವಾಹನಗಳ ಮೇಲಿನ ಥರ್ಡ್ ಪಾರ್ಟಿ ಕಂತನ್ನು ಶೇಕಡಾ 15ರಿಂದ 30ರಷ್ಟು ಹೆಚ್ಚಿಸಿರುವುದು ಟ್ರಕ್ ಮಾಲಿಕರಿಂದ ಭಾರಿ ಪ್ರತಿಭಟನೆಗೆ ಕಾರಣವಾಗುತ್ತಿದೆ.

ಕಾರು, ಬೈಕ್ ಮಾಲಿಕರ ಜೇಬಿಗೆ ಕತ್ತರಿ; ವಿಮೆ ಕಂತಿನಲ್ಲಿ ಭಾರಿ ಏರಿಕೆ

ಅತ್ತ 1500 ಸಿಸಿ ವರೆಗಿನ ಪ್ರಯಾಣಿಕ ಕಾರುಗಳ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ಶೇಕಡಾ 40ರಷ್ಟು ಹೆಚ್ಚಳಗೊಳಿಸಲಾಗಿದೆ. ಈ ನಡುವೆ ಹೆಚ್ಚು ಸುರಕ್ಷಿತ ಎನಿಸಿಕೊಂಡರೂ 1.5 ಸಿಸಿ ಮೇಲ್ಪಟ್ಟ ಐಷಾರಾಮಿ ಕಾರುಗಳ ವಿಮೆಯನ್ನು ಶೇಕಡಾ 25ರಷ್ಟು ಏರಿಕೆಗೊಳಿಸಿದೆ.

ಕಾರು, ಬೈಕ್ ಮಾಲಿಕರ ಜೇಬಿಗೆ ಕತ್ತರಿ; ವಿಮೆ ಕಂತಿನಲ್ಲಿ ಭಾರಿ ಏರಿಕೆ

ಇನ್ನೊಂದೆಡೆ ತಮ್ಮ ದೈನಂದಿನ ಸವಾರಿಗಾಗಿ ದ್ವಿಚಕ್ರ ವಾಹನವನ್ನು ಆಶ್ರಯಿಸಿಕೊಳ್ಳುತ್ತಿರುವ ದೇಶದ ಅಸಂಖ್ಯಾತ ಬೈಕ್ ಮಾಲಿಕರ ಜೇಬಿಗೂ ಕತ್ತರಿ ಪ್ರಯೋಗಿಸಿದ್ದು, ಥರ್ಡ್ ಪಾರ್ಟಿ ವಿಮೆಯನ್ನು ಶೇಕಡಾ 25ರ ವರೆಗೂ ವರ್ಧಿಸಲಾಗಿದೆ. ಏತನ್ಮಧ್ಯೆ 350 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ವಿಮೆಯನ್ನು ಶೇಕಡಾ 10ರಷ್ಟು ಇಳಿಕೆಗೊಳಿಸಲಾಗಿದೆ.

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಖಾಸಗಿ ಕಾರು

ಎಂಜಿನ್ ಸಾಮರ್ಥ್ಯ: 1000 ಸಿಸಿ ವರೆಗೆ

ಹಳೆಯ ಪ್ರೀಮಿಯಂ ದರ: 1,468 ರು.

ಹೊಸ ಪ್ರೀಮಿಯಂ ದರ: 2,055 ರು.

ವ್ಯತ್ಯಾಸ: 587 ರು.ಗಳ ಏರಿಕೆ (ಶೇ. 40)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಖಾಸಗಿ ಕಾರು

ಎಂಜಿನ್ ಸಾಮರ್ಥ್ಯ: 1001ದಿಂದ 1500 ಸಿಸಿ ವರೆಗೆ

ಹಳೆಯ ಪ್ರೀಮಿಯಂ ದರ: 1,598 ರು.

ಹೊಸ ಪ್ರೀಮಿಯಂ ದರ: 2,237 ರು.

ವ್ಯತ್ಯಾಸ: 639 ರು.ಗಳ ಏರಿಕೆ (ಶೇ. 40)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಖಾಸಗಿ ಕಾರು

ಎಂಜಿನ್ ಸಾಮರ್ಥ್ಯ: 1500 ಸಿಸಿಗಿಂತಲೂ ಮೇಲ್ಪಟ್ಟ ಕಾರುಗಳು

ಹಳೆಯ ಪ್ರೀಮಿಯಂ ದರ: 4,931 ರು.

ಹೊಸ ಪ್ರೀಮಿಯಂ ದರ: 6,164 ರು.

ವ್ಯತ್ಯಾಸ: 639 ರು.ಗಳ ಏರಿಕೆ (ಶೇ. 25)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ದ್ವಿಚಕ್ರ ವಾಹನ

ಎಂಜಿನ್ ಸಾಮರ್ಥ್ಯ: 75 ಸಿಸಿ ವರೆಗೆ

ಹಳೆಯ ಪ್ರೀಮಿಯಂ ದರ: 519 ರು.

ಹೊಸ ಪ್ರೀಮಿಯಂ ದರ: 569 ರು.

ವ್ಯತ್ಯಾಸ: 50 ರು.ಗಳ ಏರಿಕೆ (ಶೇ. 10)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ದ್ವಿಚಕ್ರ ವಾಹನ

ಎಂಜಿನ್ ಸಾಮರ್ಥ್ಯ: 75ರಿಂದ 150 ಸಿಸಿ ವರೆಗೆ

ಹಳೆಯ ಪ್ರೀಮಿಯಂ ದರ: 538 ರು.

ಹೊಸ ಪ್ರೀಮಿಯಂ ದರ: 619 ರು.

ವ್ಯತ್ಯಾಸ: 81 ರು.ಗಳ ಏರಿಕೆ (ಶೇ. 15)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ದ್ವಿಚಕ್ರ ವಾಹನ

ಎಂಜಿನ್ ಸಾಮರ್ಥ್ಯ: 151ರಿಂದ 350 ಸಿಸಿ ವರೆಗೆ

ಹಳೆಯ ಪ್ರೀಮಿಯಂ ದರ: 554 ರು.

ಹೊಸ ಪ್ರೀಮಿಯಂ ದರ: 693 ರು.

ವ್ಯತ್ಯಾಸ: 139 ರು.ಗಳ ಏರಿಕೆ (ಶೇ. 25)

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ಹಳೆ ಮತ್ತು ಪರಿಷ್ಕೃತ ಕಂತಿನ ತುಲನೆ ಇಲ್ಲಿದೆ ನೋಡಿ

ದ್ವಿಚಕ್ರ ವಾಹನ

ಎಂಜಿನ್ ಸಾಮರ್ಥ್ಯ: 350 ಸಿಸಿಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನ

ಹಳೆಯ ಪ್ರೀಮಿಯಂ ದರ: 884 ರು.

ಹೊಸ ಪ್ರೀಮಿಯಂ ದರ: 796 ರು.

ವ್ಯತ್ಯಾಸ: 88 ರು.ಗಳ ಇಳಿಕೆ (ಶೇ. 10)

Most Read Articles

Kannada
Read more on ವಿಮೆ insurance
English summary
Third-Party Vehicle Insurance Hiked By Up To 40 Percent
Story first published: Wednesday, March 30, 2016, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X