ದೇಶದಲ್ಲಿ ಲಭ್ಯವಿರುವ ಅಗ್ರ ಸಿಎನ್‌ಜಿ ಕಾರುಗಳು

By Nagaraja

ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) [Compressed natural gas] ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ. ಹಾಗಿದ್ದರೂ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್ ಜಿ ಕಾರುಗಳ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರುತ್ತದೆ.

ಇನ್ನೊಂದೆಡೆ ಇಂಧನ ಚಾಲಿತ ಕಾರಿಗಿಂತಲೂ ಹೆಚ್ಚು ಮೈಲೇಜ್ ಪಡೆಯಲು ಸಿಎನ್ ಜಿ ಕಾರುಗಳಿಂದ ಸಾಧ್ಯ. ಹೀಗೆ ಸದ್ಯ ದೇಶದಲ್ಲಿರುವ ಅಗ್ರ ಸಿಎನ್‌ಜಿ ಕಾರುಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡುವ ಪ್ರಯತ್ನ ಮಾಡಲಿದ್ದೇವೆ.

ಟಾಟಾ ನ್ಯಾನೋ ಇಮ್ಯಾಕ್ಸ್

ಟಾಟಾ ನ್ಯಾನೋ ಇಮ್ಯಾಕ್ಸ್

ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ 2012ರ ಇಸವಿಯ ವರೆಗೆ ಸಿಎನ್‌ಜಿ ವಾಹನಗಳಿಗೆ ಒಲವು ತೋರಿರಲಿಲ್ಲ. ಆದರೆ ಬಳಿಕ ಹೊಸ ಹೊರಿಝೋನೆಕ್ಸ್ಟ್ ತತ್ವಶಾಸ್ತ್ರದ ಬಳಿಕ ಹೊಸ ಹಾದಿಗೆ ತುಳಿದಿರುವ ಟಾಟಾ ಸಂಸ್ಥೆಯು ವಿಶ್ವದ ಅತಿ ಅಗ್ಗದ ಟಾಟಾ ನ್ಯಾನೋ ಕಾರಿನಲ್ಲೂ ಸಿಎನ್‌ಜಿ ಕಿಟ್ ನೀಡಿದೆ. ಅಷ್ಟಕ್ಕೂ ಈ ಚೊಕ್ಕದಾದ ಕಾರಿನಲ್ಲಿ ಸಿಎನ್ ಜಿ ಟ್ಯಾಂಕ್ ಎಲ್ಲಿ ಜೋಡಿಸಿದ್ದಾರೆ? ಎಂದು ಅಂದುಕೊಂಡಿರುವೀರಾ ಇದಕ್ಕಾಗಿ ಮುಂದೆ ಓದಿ...

ಟಾಟಾ ನ್ಯಾನೋ ಇಮ್ಯಾಕ್ಸ್

ಟಾಟಾ ನ್ಯಾನೋ ಇಮ್ಯಾಕ್ಸ್

ಲಗ್ಗೇಜ್ ಜಾಗಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಹಳ ಬುದ್ಧಿವಂತಿಕೆಯಿಂದ ಸಿಎನ್ ಜಿ ಟ್ಯಾಂಕ್ ಗಳನ್ನು ಮುಂಭಾಗದ ಸೀಟುಗಳ ಅಡಿಯಲ್ಲಿ ಲಗತ್ತಿಸಲಾಗಿದೆ. ಈ ಮೂಲಕ ಪ್ರಯಾಣಿಕರ ಸ್ಥಳಾವಕಾಶಕ್ಕೂ ಯಾವುದೇ ತೊಂದರೆಯುಂಟಾಗಿಲ್ಲ. ನ್ಯಾನೋ ಸಿಎನ್‌ಜಿ ಆವೃತ್ತಿಯು ಪ್ರತಿ ಕೆ.ಜಿ.ಗೆ 36 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬೆಲೆ ಮಾಹಿತಿ: 2.88 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಆಲ್ಟೊ 800 ಸಿಎನ್ ಜಿ

ಮಾರುತಿ ಆಲ್ಟೊ 800 ಸಿಎನ್ ಜಿ

ದೇಶದ ಜನಪ್ರಿಯ ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಹೆಸರಾಂತ ಮಾರುತಿ ಆಲ್ಟೊ 800 ಕಾರಿನಲ್ಲೂ ಸಿಎನ್ ಜಿ ಕಿಟ್ ನೀಡುತ್ತಿದೆ. ಇದು ಕೂಡಾ ಎಫ್8ಡಿ 800 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಮಾರುತಿ ಆಲ್ಟೊ 800 ಸಿಎನ್ ಜಿ

ಮಾರುತಿ ಆಲ್ಟೊ 800 ಸಿಎನ್ ಜಿ

ಮಾರುತಿ ಸುಜುಕಿ ಸಿಎನ್ ಜಿ ಆವೃತ್ತಿ ಪ್ರತಿ ಕೆ.ಜಿ.ಗೆ 30.46 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಬೆಲೆ ಮಾಹಿತಿ: 3.77 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

 ಆಲ್ಟೊ ಕೆ10 ಸಿಎನ್ ಜಿ

ಆಲ್ಟೊ ಕೆ10 ಸಿಎನ್ ಜಿ

ಭಾರತದಲ್ಲಿ ದಶಕದಿಂದಲೂ ತನ್ನ ಅಧಿಪತ್ಯ ಸ್ಥಾಪಿಸಿರುವ ಮಾರುತಿ ಆಲ್ಟೊ ಕೆ10 ಸಿಎನ್ ಜಿ ಆವೃತ್ತಿಯಲ್ಲಿರುವ 998 ಸಿಸಿ ಎಂಜಿನ್ 59 ಅಶ್ವಶಕ್ತಿ ಉತ್ಪಾದಿಸುತ್ತದೆ. ಇಲ್ಲಿ ಸ್ಟ್ಯಾಂಡರ್ಡ್ ಪೆಟ್ರೋಲ್ ಆವೃತ್ತಿಯು 68 ಅಶ್ವಶಕ್ತಿ ನೀಡುತ್ತದೆ.

ಆಲ್ಟೊ ಕೆ10 ಸಿಎನ್ ಜಿ

ಆಲ್ಟೊ ಕೆ10 ಸಿಎನ್ ಜಿ

ಆಲ್ಟೊ ಕೆ10 ಸ್ಟ್ಯಾಂಡರ್ಡ್ ಆವೃತ್ತಿಯು 24.07 ಕೀ.ಮೀ. ಇಂಧನ ಕ್ಷಮತೆ ಕಾಪಾಡುವುದಾದ್ದಲ್ಲಿ ಸಿಎನ್ ಜಿ ಆವೃತ್ತಿಯು ಪ್ರತಿ ಕೆ.ಜಿ.ಗೆ 32.26 ಕೀ.ಮೀ. ಮೈಲೇಜ್ ನೀಡಲಿದೆ.

ಬೆಲೆ ಮಾಹಿತಿ: 4.8 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ

ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ

ಸಣ್ಣ ಕಾರುಗಳಲ್ಲಿ ಮಾತ್ರವಲ್ಲದೆ ಮೇಲ್ದರ್ಜೆಯ ಕಾರುಗಳಲ್ಲೂ ಮಾರುತಿ ಸಿಎನ್ ಜಿ ಕಿಟ್ ನೀಡುತ್ತಿರುವುದು ವಿಶೇಷ. ಇದಕ್ಕೆ ಹೊಸದಾಗಿ ಬಿಡುಗಡೆಯಾಗಿರುವ ಸೆಲೆರಿಯೊ ಕಾರು ಉದಾಹರಣೆಯಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ

ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ

1.0 ಲೀಟರ್ ಕೆಬಿ10 ಎಂಜಿನ್ ಹೊಂದಿರುವ ಮಾರುತಿ ಸೆಲೆರಿಯೊ 58 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಸಾಮಾನ್ಯ ಆವೃತ್ತಿಗಿಂತ 10 ಅಶ್ವಶಕ್ತಿಯಷ್ಟು ಕಡಿಮೆ ಶಕ್ತಿಶಾಲಿಯಾಗಿದೆ.

ಬೆಲೆ ಮಾಹಿತಿ: 4.99 ಲಕ್ಷ ರು.

ಮಾರುತಿ ವ್ಯಾಗನಾರ್ ಸಿಎನ್‌ಜಿ

ಮಾರುತಿ ವ್ಯಾಗನಾರ್ ಸಿಎನ್‌ಜಿ

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಅಗ್ರ ಐದು ಕಾರುಗಳಲ್ಲಿ ಒಂದಾಗಿರುವ ಮಾರುತಿ ವ್ಯಾಗನಾರ್ ಕಾರಿನಲ್ಲೂ ಸಿಎನ್ಜಿ ಕಿಟ್ ನೀಡಲಾಗುತ್ತದೆ. ಮಾರುತಿ ವ್ಯಾಗನಾರ್ ಎಲ್ ಎಕ್ಸ್ ಐ ಆವೃತ್ತಿಯಲ್ಲಿ ಸಿಎನ್ ಜಿ ಲಭ್ಯವಿರುತ್ತದೆ.

ಮಾರುತಿ ವ್ಯಾಗನಾರ್ ಸಿಎನ್‌ಜಿ

ಮಾರುತಿ ವ್ಯಾಗನಾರ್ ಸಿಎನ್‌ಜಿ

ವ್ಯಾಗನಾರ್ ಸಾಮಾನ್ಯ ಆವೃತ್ತಿಗಿಂತಲೂ ಕಡಿಮೆ ಶಕ್ತಿಶಾಲಿಯಾಗಿರುವ ಸಿಎನ್ ಜಿ ಯಲ್ಲಿ ಕೆ10ಬಿ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದೆ. ಇದು ಪ್ರತಿ ಕೆ.ಜಿಗೆ 26.6 ಕೀ.ಮೀ. ಮೈಲೇಜ್ ನೀಡುವಷ್ಟು ಸಾಮರ್ಥ್ಯ ಹೊಂದಿದೆ.

ಬೆಲೆ ಮಾಹಿತಿ: 4.66 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಹ್ಯುಂಡೈ ಗ್ರಾಂಡ್ ಐ10 ಸಿಎನ್‌ಜಿ

ಹ್ಯುಂಡೈ ಗ್ರಾಂಡ್ ಐ10 ಸಿಎನ್‌ಜಿ

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, 2013ರಲ್ಲಿ ಗ್ರಾಂಡ್ ಐ10 ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಪೆಟ್ರೋಲ್, ಡೀಸೆಲ್, ಸಿಎನ್ ಜಿ ಹೊರತಾಗಿ ಎಲ್ ಪಿಜೆ ಮಾದರಿಯನ್ನು ನೀಡುತ್ತಿದೆ. ಹಾಗಿದ್ದರೂ ಆಯ್ದ ನಗರಗಳಲ್ಲಿ ಮಾತ್ರ ಸಿಎನ್ ಜಿ ಕಿಟ್ ನೀಡಲಾಗುತ್ತಿದೆ.

ಹ್ಯುಂಡೈ ಗ್ರಾಂಡ್ ಐ10 ಸಿಎನ್‌ಜಿ

ಹ್ಯುಂಡೈ ಗ್ರಾಂಡ್ ಐ10 ಸಿಎನ್‌ಜಿ

ಸಾಮಾನ್ಯ ಪೆಟ್ರೋಲ್ ಆವೃತ್ತಿಗೆ ಸಮಾನವಾಗಿ ಇದರಲ್ಲಿರುವ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ 70 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಂತೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುತ್ತದೆ.

ಬೆಲೆ ಮಾಹಿತಿ: ಸಾಮಾನ್ಯ ಆವೃತ್ತಿಗಿಂತಲೂ 70,000 ರು.ಗಳಷ್ಟು ದುಬಾರಿ

ಹ್ಯುಂಡೈ ಎಕ್ಸ್ ಸೆಂಟ್ ಸಿಎನ್‌ಜಿ

ಹ್ಯುಂಡೈ ಎಕ್ಸ್ ಸೆಂಟ್ ಸಿಎನ್‌ಜಿ

ಹ್ಯುಂಡೈ ಎಕ್ಸೆಸೆಂಟ್ ಕಾಂಪಾಕ್ಟ್ ಸೆಡಾನ್ ಕಾರಿನಲ್ಲೂ ಸಿಎನ್ ಜಿ ಕಿಟ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು ಗ್ರಾಂಡ್ ಐ10 ಮಾದರಿಯಲ್ಲಿರುವುದಕ್ಕೆ ಸಮಾನವಾಗಿದ್ದು, ಆಯ್ದ ನಗರಗಳಲ್ಲಿ ನೀಡಲಾಗುತ್ತದೆ.

ಹ್ಯುಂಡೈ ಎಕ್ಸ್ ಸೆಂಟ್ ಸಿಎನ್‌ಜಿ

ಹ್ಯುಂಡೈ ಎಕ್ಸ್ ಸೆಂಟ್ ಸಿಎನ್‌ಜಿ

ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದರಲ್ಲಿರುವ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ 70 ಅಶ್ವಶಕ್ತಿಯನ್ನು ನೀಡಲಿದೆ. ಸಿಎನ್ ಜಿ ಆವೃತ್ತಿಗಳಿಗೆ ಎರಡು ವರ್ಷಗಳ ಹೆಚ್ಚುವರಿ ವಾರಂಟಿಯನ್ನು ಸಂಸ್ಥೆ ನೀಡುತ್ತಿದೆ.

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ

ಬಹು ಬಳಕೆ ವಾಹನ ವಿಭಾಗದಲ್ಲೂ ಮಾರುತಿ ಸುಜುಕಿ ಸಿಎನ್ ಜಿ ಕಿಟ್ ನೀಡುತ್ತಿರುವುದು ಗಮನಾರ್ಹ. ಮಾರುತಿ ಎರ್ಟಿಗಾದಲ್ಲಿರುವ 1373 ವಿವಿಟಿ ಪೆಟ್ರೋಲ್ ಎಂಜಿನ್ 81 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಸಾಮಾನ್ಯ ಪೆಟ್ರೋಲ್ ಎರ್ಟಿಗಾ ಆವೃತ್ತಿಗಿಂತಲೂ 12 ಅಶ್ವಶಕ್ತಿಯಷ್ಟು ಕಡಿಮೆ ಶಕ್ತಿಶಾಲಿಯಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ

ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ

ಮಾರುತಿ ಎರ್ಟಿಗಾ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 16.02 ಕೀ.ಮೀ. ಇಂಧನ ಕ್ಷಮತೆ ನೀಡುವುದಾದ್ದಲ್ಲಿ ಸಿಎನ್ ಜಿ ಆವೃತ್ತಿಯು ಪ್ರತಿ ಕೆ.ಜಿ.ಗೆ 22.08 ಕೀ.ಮೀ. ಮೈಲೇಜ್ ನೀಡಲಿದೆ.

ಬೆಲೆ ಮಾಹಿತಿ: 8.13 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ದೇಶದಲ್ಲಿ ಲಭ್ಯವಿರುವ ಅಗ್ರ ಸಿಎನ್‌ಜಿ ಕಾರುಗಳು

ನಿಮ್ಮ ಬಳಿಯೂ ಸಿಎನ್ ಜಿ ಕಾರು ಇದ್ದಲ್ಲಿ ನಿಮಗೆ ಎದುರಾಗುವ ಅನುಕೂಲ ಮತ್ತು ಅನಾನುಕೂಲತೆಗಳತೆಗಳ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಲು ಮರೆಯದಿರಿ.

Most Read Articles

Kannada
English summary
Top CNG Cars available in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X