ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿರುವ 6 ಪ್ರಮುಖ ಕಾರುಗಳು

By Nagaraja

ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ದೀಪಾವಳಿ ಹಬ್ಬದ ಆವೃತ್ತಿಯು ಸಮೀಪಿಸುತ್ತಿರುವಂತೆಯೇ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಹೊಸ ಹೊಸ ಕಾರುಗಳ ಬಿಡುಗಡೆಯಲ್ಲಿ ತೊಡಗಿಸಿಕೊಂಡಿದೆ. ಹಾಗೊಂದು ವೇಳೆ ನೀವು ನೂತನ ಕಾರೊಂದನ್ನು ಖರೀದಿಸುವ ಇರಾದೆಯಲ್ಲಿದ್ದರೆ ಈ ಲೇಖನವನ್ನು ತಪ್ಪದೇ ಓದಿ.

ಪ್ರಸ್ತುತ ಲೇಖನದಲ್ಲಿ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿರುವ ಆರು ಪ್ರಮುಖ ಕಾರುಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ. ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನಿರಂತರ ಅಂತರಾಳದಲ್ಲಿ ನೂತನ ಕಾರುಗಳ ಪ್ರವೇಶವಾಗುತ್ತಿದ್ದು, ಅತ್ಯುತ್ತಮ ಬೆಳವಣಿಗೆಯನ್ನು ತೋರಿಸುತ್ತಿದೆ.

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಎಎಂಟಿ

ಈಗಷ್ಟೇ 1.0 ಲೀಟರ್ ಕ್ವಿಡ್ ಶಕ್ತಿಶಾಲಿ ಆವೃತ್ತಿಯನ್ನು ಬಿಡುಗಡೆ ಮಾಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಮಗದೊಂದು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಎಎಂಟಿ

ಇತರೆ ಎಎಂಟಿ ಗೇರ್ ಬಾಕ್ಸ್ ಗಿಂತಲೂ ವಿಭಿನ್ನವಾಗಲಿರುವ ರೆನೊ ಕ್ವಿಡ್ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ಮಾದರಿಯನ್ನು 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳಿಸಲಾಗಿತ್ತು. ಇದರಲ್ಲಿರುವ 1.0 ಲೀಟರ್ ಎಸ್ ಸಿಇ ಎಂಜಿನ್ 91 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾ ಕೈಟ್ 5

ಟಾಟಾ ಕೈಟ್ 5

ಬಹುನಿರೀಕ್ಷಿತ ಟಾಟಾ ಕೈಟ್ ಕಾಂಪಾಕ್ಟ್ ಸೆಡಾನ್ ಆವೃತ್ತಿಯು ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಟಾಟಾ ಟಿಯಾಗೊ ಕಾಂಪಾಕ್ಟ್ ಸೆಡಾನ್ ಕಾರು ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಟಾಟಾ ಕೈಟ್ 5

ಟಾಟಾ ಕೈಟ್ 5

ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಅತಿ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡಿದ್ದು, ಇದಕ್ಕೆ ಸಮಾನವಾದ ವೈಶಿಷ್ಟ್ಯಗಳನ್ನು ಹೊಂದಿರುವ ಟಾಟಾ ಕೈಟ್ ಸಹ ಸದ್ದು ಮಾಡುವ ನಿರೀಕ್ಷೆಯಿದೆ. ಇದರಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಎಂಪಿಎಫ್ ಐ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.05 ಲೀಟರ್ ರೆವೊಟ್ರಾನ್ ತ್ರಿ ಸಿಲಿಂಡರ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 140 ಎನ್ ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್

ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿರುವ ಬಹುನಿರೀಕ್ಷಿತ ಮಾರುತಿ ಇಗ್ನಿಸ್ ಬಿಡುಗಡೆಗೂ ಕ್ಷಣಗಣನೆ ಆರಂಭವಾಗಿದೆ. ಇದಕ್ಕೂ ಮೊದಲು ಬಲೆನೊ ಹ್ಯಾಚ್ ಬ್ಯಾಕ್ ಹಾಗೂ ಬ್ರಿಝಾ ಎಸ್ ಯುವಿ ಬೇಡಿಕೆ ಹೆಚ್ಚಿದ್ದರಿಂದ ಇಗ್ನಿಸ್ ಬಿಡುಗಡೆ ವಿಳಂಬವಾಗಲಿದೆಯೆಂಬ ವರದಿಗಳಿದ್ದರೂ ಇವೆಲ್ಲವನ್ನು ಮಾರುತಿ ನಿರಾಕರಿಸಿದ್ದು, ನಿಗದಿತ ವೇಳೆಯಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್

ನೂತನ ಮಾರುತಿ ಇಗ್ನಿಸ್ 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ನಿಯಂತ್ರಿಸಲ್ಪಡಲಿದೆ. ಅಂತೆಯೇ ಸಂಸ್ಥೆಯ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳ ಮುಖಾಂತರ ಬಿಡುಗಡೆಯಾಗಲಿದೆ.

ಮಾರುತಿ ಬಲೆನೊ ಆರ್ ಎಸ್

ಮಾರುತಿ ಬಲೆನೊ ಆರ್ ಎಸ್

ಈಗಾಗಲೇ ಮಾರಾಟದಲ್ಲಿರುವ ಬಲೆನೊದ ಶಕ್ತಿಶಾಲಿ ಆರ್ ಎಸ್ ಆವೃತ್ತಿಯು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಬಲೆನೊಗೆ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಹೆಚ್ಚು ಶಕ್ತಿಶಾಲಿ ಆವೃತ್ತಿಯನ್ನು ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ಮಾರುತಿ ಬಲೆನೊ ಆರ್ ಎಸ್

ಮಾರುತಿ ಬಲೆನೊ ಆರ್ ಎಸ್

ಮಾರುತಿ ಬಲೆನೊ ಆರ್ ಎಸ್ ಕ್ರೀಡಾತ್ಮಕ ಆವೃತ್ತಿಯು ಶಕ್ತಿಶಾಲಿ ಎಂಜಿನ್ ಜೊತೆಗೆ ವಿಶೇಷ ಬಾಡಿ ಕಿಟ್ ಗಳನ್ನು ಪಡೆಯಲಿದೆ. ಇದು ಸಹ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್

ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್

ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿತ ಫೋಕ್ಸ್ ವ್ಯಾಗನ್ ಎಮಿಯೊ ಪೆಟ್ರೋಲ್ ಕಾಂಪಾಕ್ಟ್ ಸೆಡಾನ್ ಕಾರನ್ನು ಪರಿಚಯಿಸಿರುವ ಜರ್ಮನಿಯ ಈ ಐಕಾನಿಕ್ ಸಂಸ್ಥೆಯೀಗ ಎಮಿಯೊ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್

ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್

ಪೊಲೊ ಹ್ಯಾಚ್ ಬ್ಯಾಕ್ ತಳಹದಿಯಲ್ಲಿ ನಿರ್ಮಾಣವಾಗಿರುವ ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್ ಆವೃತ್ತಿಯು 1.5 ಟಿಡಿಐ ಎಂಜಿನ್ ಪಡೆಯಲಿದ್ದು, 230 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ನೂತನ ಡಿಸೈನ್ ತಂತ್ರಗಾರಿಕೆಗೆ ಮುಂದಾಗಿರುವ ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಯು, ನೆಕ್ಸನ್ ಕ್ರೀಡಾ ಬಳಕೆಯ ವಾಹನದ ಮೂಲಕ ಹೊಸ ಅಲೆಯನ್ನು ಎಬ್ಬಿಸಲಿದೆ. 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ನೆಕ್ಸನ್ ಕಾಂಪಾಕ್ಟ್ ಎಸ್ ಯುವಿ ವಿಶ್ಲೇಷಕರ ಮೆಚ್ಚುಗೆಗೂ ಪಾತ್ರವಾಗಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಭಾರತದಲ್ಲಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ವಾಹನ ಪ್ರೇಮಿಗಳಿಗೆ ನೆಕ್ಸನ್ ಅತ್ಯುತ್ತಮ ಕೊಡುಗೆಯಾಗಿರಲಿದೆ. ಇದು 6.5 ಲಕ್ಷ ರು.ಗಳಿಂದ 9 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿರುವ 6 ಪ್ರಮುಖ ಕಾರುಗಳು

ಪ್ರಸ್ತುತ ಪಟ್ಟಿಯಲ್ಲಿ ಕೊಡಲಾಗಿರುವ ಮುಂಬರುವ ಆರು ಪ್ರಮುಖ ಕಾರುಗಳಲ್ಲಿ ನಿಮಗೆ ಪ್ರಿಯವೆನಿಸಿರುವ ಕಾರಿನ ಬಗ್ಗೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಉಲ್ಲೇಖಿಸಲು ಮರೆಯದಿರಿ.

Most Read Articles

Kannada
English summary
Best Upcoming Car Launches During Festival Season — Make Your Choice
Story first published: Thursday, August 25, 2016, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X