ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳು

By Nagaraja

ಬದಲಾವಣೆಯ ಪರ್ವದಲ್ಲಿರುವ ಭಾರತೀಯ ವಾಹನ ಮಾರುಕಟ್ಟೆಗೆ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಹಲವಾರು ಹೊಚ್ಚ ಹೊಸ ಕಾರುಗಳ ಪ್ರವೇಶವಾಗಲಿದೆ. ಗರಿಷ್ಠ ಮಾರಾಟವನ್ನು ಗುರಿಯಿಸಿಕೊಂಡಿರುವ ದೇಶದ ಜನಪ್ರಿಯ ಸಂಸ್ಥೆಗಳು ಅತ್ಯಾಕರ್ಷಕ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿ ನಿಂತಿವೆ.

ಈ ಸಂಬಂಧ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಕೆಲವು ಪ್ರಮುಖ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ. ಹೊಸ ಕಾರಿನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ನೆರವಾಗುವ ಭರವಸೆ ನಮ್ಮದ್ದು.

ಮುಂದಿನ ತಲೆಮಾರಿನ ಆಡಿ ಎ4

ಮುಂದಿನ ತಲೆಮಾರಿನ ಆಡಿ ಎ4

ಮುಂದಿನ ತಲೆಮಾರಿನ ಆಡಿ ಎ4 ಸೆಡಾನ್ ಕಾರು ಸೆಪ್ಟೆಂಬರ್ ತಿಂಗಳಾಗುವಾಗ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಮೊದಲು 30 ಟಿಎಫ್‌ಎಸ್ ಐ ಪೆಟ್ರೋಲ್ ಆವೃತ್ತಿಯು ಮಾರುಕಟ್ಟೆಗೆ ಅಪ್ಪಳಿಸಲಿದ್ದು ಬಳಿಕ ಪ್ರಸಕ್ತ ಆರ್ಥಿಕ ಸಾಲಿನಲ್ಲೇ 35 ಟಿಡಿಐ ಡೀಸೆಲ್ ಆವೃತ್ತಿಯು ಬಿಡುಗಡೆಯಾಗಲಿದೆ.

ಫಿಯೆಟ್ ಅಬಾರ್ತ್ ಅರ್ಬನ್ ಕ್ರಾಸ್

ಫಿಯೆಟ್ ಅಬಾರ್ತ್ ಅರ್ಬನ್ ಕ್ರಾಸ್

ಮೂಲತ: ಫಿಯೆಟ್ ಅವೆಂಚ್ಯುರಾ ಪರಿಷ್ಕೃತ ಆವೃತ್ತಿಯಂತೆ ಇರಲಿರುವ ಅಬಾರ್ತ್ ಅರ್ಬನ್ ಕ್ರಾಸ್ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗೆಡೆಯಾಗಲಿದೆ. ಇದು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಮೈಗೂಡಿಸಿಕೊಂಡು ಬರಲಿದ್ದು, ಹಿಂದುಗಡೆ ಟೈಲ್ ಗೇಟ್ ಮೌಂಟೆಡ್ ಹೆಚ್ಚುವರಿ ಚಕ್ರಗಳನ್ನು ಹೊಂದಿರಲಿದೆ.

ಹೊಸ ಷೆವರ್ಲೆ ಬೀಟ್

ಹೊಸ ಷೆವರ್ಲೆ ಬೀಟ್

ಭಾರತದಲ್ಲಿ ಬೀಟ್ ಆಕ್ಟಿವ್ ಅಥವಾ ಮುಂದಿನ ತಲೆಮಾರಿನ ಬೀಟ್ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಯಾಗಲಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಏನೇ ಆದರೂ ಪ್ರಸಕ್ತ ಸಾಲಿನಲ್ಲೇ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಭಾರತದಲ್ಲಿ ಒಂದು ಉತ್ಪನ್ನವನ್ನು ಬಿಡುಗಡೆ ಮಾಡುವುದಂತೂ ಗ್ಯಾರಂಟಿ.

2016 ಹೋಂಡಾ ಅಕಾರ್ಡ್ ಹೈಬ್ರಿಡ್

2016 ಹೋಂಡಾ ಅಕಾರ್ಡ್ ಹೈಬ್ರಿಡ್

ಜಪಾನ್ ಮೂಲದ ಐಕಾನಿಕ್ ಹೋಂಡಾ ಸಂಸ್ಥೆಯು ಭಾರತದಲ್ಲಿ ಪ್ರಸಕ್ತ ಸಾಲಿನಲ್ಲೇ 9ನೇ ತಲೆಮಾರಿನ 2016 ಅಕಾರ್ಡ್ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಲಿದೆ.

2016 ಹೋಂಡಾ ಬ್ರಿಯೊ

2016 ಹೋಂಡಾ ಬ್ರಿಯೊ

ಕೆಲವು ಸಮಯಗಳ ಹಿಂದೆಯಷ್ಟೇ ಅಮೇಜ್ ಫೇಸ್ ಲಿಫ್ಟ್ ಬಿಡುಗಡೆಗೊಂಡಿತ್ತು. ಈಗ ಕಿರಿಯ ಸೋದರ ಬ್ರಿಯೊ ಸಹ ಕೆಲವೊಂದು ಗಮನಾರ್ಹ ಬದಲಾವಣೆಗಳೊಂದಿಗೆ ದೇಶದಲ್ಲಿ ಬಿಡುಗಡೆಯಾಗಲಿದೆ. ಈ ನಡುವೆ ಹೋಂಡಾ ಬ್ರಿಯೊ 'ಆರ್ ಎಸ್' ಮಾದರಿಯು ಬಿಡುಗಡೆಯಾಗಲಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

2016 ಹ್ಯುಂಡೈ ಎಲಂಟ್ರಾ

2016 ಹ್ಯುಂಡೈ ಎಲಂಟ್ರಾ

ಭಾರತದಲ್ಲಿ ಅನೇಕ ಬಾರಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿರುವ ಮುಂದಿನ ತಲೆಮಾರಿನ ಹ್ಯುಂಡೈ ಎಲಂಟ್ರಾ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಪ್ರವೇಶ ಪಡೆಯಲಿದೆ. ಇದು 1.6 ಸಿಆರ್ ಡಿಐ ಮತ್ತು 2.0 ಎಂಪಿಐ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಗಳ ಜೊತಂಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳ ಲಭ್ಯವಿರುತ್ತದೆ.

2016 ಹ್ಯುಂಡೈ ಟಕ್ಸನ್

2016 ಹ್ಯುಂಡೈ ಟಕ್ಸನ್

ಭಾರತದಲ್ಲಿ ಪ್ರೀಮಿಯಂ ಕಾರುಗಳ ಶ್ರೇಣಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಟಕ್ಸನ್ ಕಾರನ್ನು ಬಿಡುಗಡೆ ಮಾಡಲಿದೆ. ಎಲಂಟ್ರಾ ಬೇಗನೇ ಪ್ರವೇಶಿಸಿರುವುದರಿಂದ ವರ್ಷಾಂತ್ಯದಲ್ಲಷ್ಟೇ ಟಕ್ಸನ್ ಆಗಮನವಾಗಲಿದೆ.

ಹ್ಯುಂಡೈ ಐ20 ಆಟೋಮ್ಯಾಟಿಕ್

ಹ್ಯುಂಡೈ ಐ20 ಆಟೋಮ್ಯಾಟಿಕ್

ಮುಂಬರುವ ಹಬ್ಬದ ಆವೃತ್ತಿಯಲ್ಲಿ ಐ20 ಆಟೋಮ್ಯಾಟಿಕ್ ಕಾರನ್ನು ಹ್ಯುಂಡೈ ಬಿಡುಗಡೆ ಮಾಡಲಿದೆ. ಇದರ 1.2 ಲೀಟರ್ ಪೆಟ್ರೋಲ್ ಆವೃತ್ತಿಗಳು 4 ಸ್ಪೀಡ್ ಹಾಗೂ 6 ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ.

ಜಾಗ್ವಾರ್ ಎಫ್ ಫೇಸ್

ಜಾಗ್ವಾರ್ ಎಫ್ ಫೇಸ್

ಕೆಲವೇ ತಿಂಗಳೊಳಗೆ ತನ್ನ ಚೊಚ್ಚಲ ಕ್ರೀಡಾ ಬಳಕೆಯ ವಾಹನ ಎಫ್-ಫೇಸ್ ಪ್ರೀಮಿಯಂ ಕಾರನ್ನು ಜಾಗ್ವಾರ್ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡಲಿದೆ. ಈ ಸಂಬಂಧ ಬ್ರಿಟನ್ ಮೂಲದ ಐಕಾನಿಕ್ ಸಂಸ್ಥೆಯು ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅಂತೆಯೇ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತವನ್ನು ತಲುಪಲಿದೆ.

ಜಾಗ್ವಾರ್ ಎಕ್ಸ್ ಇ ಡೀಸೆಲ್ ಆವೃತ್ತಿ

ಜಾಗ್ವಾರ್ ಎಕ್ಸ್ ಇ ಡೀಸೆಲ್ ಆವೃತ್ತಿ

ಸದ್ಯ ಜಾಗ್ವಾರ್ ಎಕ್ಸ್ ಇ 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಇತರೆ ಮಾರುಕಟ್ಟೆಗಳಲ್ಲಿ 2.0 ಲೀಟರ್ (1999 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಆವೃತ್ತಿಯು ಮಾರಾಟದಲ್ಲಿದ್ದು, ಇದು ಸಹ ಭಾರತವನ್ನು ಪ್ರವೇಶವನ್ನು ಸಾಧ್ಯತೆಯಿದೆ.

ಜಾಗ್ವಾರ್ ಎಕ್ಸ್ ಎಫ್

ಜಾಗ್ವಾರ್ ಎಕ್ಸ್ ಎಫ್

ಇನ್ನು ಪ್ರಸಕ್ತ ಸಾಲಿನಲ್ಲೇ ಜಾಗ್ವಾರ್ ಎಕ್ಸ್ ಎಫ್ ಬಿಡುಗಡೆ ಭಾಗ್ಯ ಕಾಣಲಿದೆ. ಇದಕ್ಕೂ ಮೊದಲು 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಜಾಗ್ವಾರ್ ಎಕ್ಸ್ ಎಫ್ ಕಾರಿನಲ್ಲಿ ಐಷಾರಾಮಿ ವೈಶಿಷ್ಟ್ಯಗಳಿಗೆ ಆದ್ಯತೆಯನ್ನು ಕೊಡಲಾಗಿದೆ.

ಜೀಪ್ ಗ್ರಾಂಡ್ ಚೆರೋಕೀ ಮತ್ತು ಎಸ್ ಆರ್ ಟಿ

ಜೀಪ್ ಗ್ರಾಂಡ್ ಚೆರೋಕೀ ಮತ್ತು ಎಸ್ ಆರ್ ಟಿ

ಈಗಾಗಲೇ ವರದಿ ಮಾಡಿರುವಂತೆಯೇ ಜೀಪ್ ಗ್ರಾಂಡ್ ಚೆರೋಕೀ ಮತ್ತು ಎಸ್ ಆರ್ ಟಿ ಆವೃತ್ತಿಗಳು ಆಗಸ್ಟ್ 31 ಹಾಗೂ ಸೆಪ್ಟೆಂಬರ್ 01ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಭಾರತಕ್ಕೆ ಗ್ರಾಂಡ್ ಎಂಟ್ರಿಯನ್ನು ಕೊಡಲಿದೆ.

ಜೀಪ್ ವ್ರ್ಯಾಂಗ್ಲರ್

ಜೀಪ್ ವ್ರ್ಯಾಂಗ್ಲರ್

ಅತ್ತ ಜೀಪ್ ವ್ರ್ಯಾಂಗ್ಲರ್ ಸಹ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇದು ದೇಶದಲ್ಲಿ ಫೈರ್ ಡೋರ್ ಅನ್ ಲಿಮಿಟೆಡ್ ವೆರಿಯಂಟ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಮಹೀಂದ್ರ ಮಿನಿ ಬೊಲೆರೊ

ಮಹೀಂದ್ರ ಮಿನಿ ಬೊಲೆರೊ

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ಮಹೀಂದ್ರ ಮಿನಿ ಬೊಲೆರೊ, ವರ್ಷಾಂತ್ಯದೊಳಗೆ ಭಾರತ ಪ್ರವೇಶಿಸಲಿದೆ. ಇದು ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಮಾದರಿಗಳಲ್ಲಿ ಒಂದಾಗಿದ್ದು, ಗರಿಷ್ಠ ಮಾರಾಟವನ್ನು ಸಂಸ್ಥೆಯು ಗುರಿಯಿರಿಸಿಕೊಂಡಿದೆ.

ಮಾರುತಿ ಬಲೆನೊ ಆರ್ ಎಸ್

ಮಾರುತಿ ಬಲೆನೊ ಆರ್ ಎಸ್

ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಶಕ್ತಿಶಾಲಿ ಆರ್ ಎಸ್ ಆವೃತ್ತಿಯು ಮುಂಬರುವ ಹಬ್ಬದ ಸಂಭ್ರಮಕ್ಕೆ ಮೆರಗು ತುಂಬಲಿದೆ. ಇದು 1.0 ಲೀಟರ್ ಬೂಸ್ಟರ್ ಜೆಟ್ (ಟರ್ಬೊ ಚಾರ್ಜ್ಡ್) ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಜಿಟಿಆರ್

ನಿಸ್ಸಾನ್ ಜಿಟಿಆರ್

'ಗಾಡ್ಜಿಲ್ಲಾ' ಎಂಬ ಹೆಸರಿನಿಂದಲೇ ಜಗಜ್ಜಾಹೀರಾಗಿರುವ ನಿಸ್ಸಾನ್ ಐಕಾನಿಕ್ ಜಿಟಿಆರ್ ಸೂಪರ್ ಕಾರು ಆಗಮನಕ್ಕೆ ಕಾಲ ಸನ್ನಿಹಿತಗೊಂಡಿದೆ. ಇದರಲ್ಲಿರುವ ಶಕ್ತಿಶಾಲಿ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ 633 ಎನ್ ಎಂ ತಿರುಗುಬಲದಲ್ಲಿ 585 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್ ಬಿಡುಗಡೆ ಸ್ವಲ್ಪ ಹಿಂದಕ್ಕೆ ಹೋದರೂ ಸಹ ವರ್ಷಾಂತ್ಯದೊಳಗೆ ಬಿಡುಗಡೆಯಾದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಈ ನಾಲ್ಕು ಮೀಟರ್ ಉದ್ದ ಪರಿಧಿಯ ಕ್ರೀಡಾ ಬಳಕೆಯ ಕಾರು ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಎಂಬುದರಲ್ಲಿ ಅಚ್ಚರಿಯಿಲ್ಲ.

ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ

ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ

ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ನಂಬಿಕೆಯನ್ನಿರಿಸಿಕೊಂಡಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು ಪೊಲೊ ಜಿಟಿಐ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದರ 1.8 ಲೀಟರ್ ಟಿಎಸ್ ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಆವೃತ್ತಿಯು 250 ಎನ್ ಎಂ ತಿರುಗುಬಲದಲ್ಲಿ 190 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ಟಿಯಾಗೊ ಬಿಡುಗಡೆಯ ಬಳಿಕ ಉತ್ತೇಜನ ಗಿಟ್ಟಿಸಿಕೊಂಡಿರುವ ಟಾಟಾ ಸಂಸ್ಥೆಯು, ಆರಿಯಾ ತಳಹದಿಯಲ್ಲಿ ಪ್ರೀಮಿಯಂ ಹೆಕ್ಸಾ ಕಾರನ್ನು ಬಿಡುಗಡೆ ಮಾಡಲಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಒಳಗೊಂಡಿರುವ ಟಾಟಾ ಹೆಕ್ಸಾ, ಅಪ್ಪಟ ದೇಶ ಪ್ರೇಮಿಯ ನೆಚ್ಚಿನ ಕಾರೆನಿಸಿಕೊಳ್ಳಲಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಯು ಮಗದೊಂದು ನೆಕ್ಸನ್ ಕಾಂಪಾಕ್ಟ್ ಎಸ್ ಯುವಿ ಬಿಡುಗಡೆಯ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ನೆಕ್ಸನ್ ಕಾರಿನಲ್ಲಿ ಫಿಯೆಟ್ ನಿಂದ ಆಮದು ಮಾಡಲಾಗಿರುವ 1.3 ಲೀಟರ್ ಡೀಸೆಲ್ ಎಂಜಿನ್ ಜೋಡಣೆಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ 1.5 ಲೀಟರ್ ಡೀಸೆಲ್ ಎಂಜಿನ್ ಆಳವಡಿಕೆಯಾಗುವ ನಿರೀಕ್ಷೆಯಿದೆ. ಇನ್ನು ಟಿಯಾಗೊದಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಕೂಡಾ ಇರಲಿದೆ.

ರೆನೊ ಕ್ವಿಡ್ ಎಎಂಟಿ

ರೆನೊ ಕ್ವಿಡ್ ಎಎಂಟಿ

ಕ್ವಿಡ್ ಸಣ್ಣ ಕಾರಿನ ಯಶಸ್ಸಿನ ಬಳಿಕ ಪುಳಕಿತಗೊಂಡಿರುವ ರೆನೊ ಸಂಸ್ಥೆಯು ಹೆಚ್ಚು ಶಕ್ತಿಶಾಲಿ 1.0 ಲೀಟರ್ ಆವೃತ್ತಿಯ ಜೊತೆಗೆ ಕ್ವಿಡ್ ಎಎಂಟಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಒಟ್ಟಿನಲ್ಲಿ ಸಣ್ಣ ಕಾರು ಮಾರುಕಟ್ಟೆಯಲ್ಲಿ ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ರೆನೊ ಹೊರಬರಲಿದೆ.

Most Read Articles

Kannada
English summary
Upcoming Cars In 2016 — This List Could Change Your Buying Decision
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X