ಮುಂಬರುವ ಮೂರು ಹೊಚ್ಚ ಹೊಸ ಟೊಯೊಟಾ ಕಾರುಗಳು ಯಾವುವು?

By Nagaraja

ಇತ್ತೀಚೆಗಷ್ಟೇ ಭಾರತದಲ್ಲಿ ಇನ್ನೋವಾ ಕ್ರೈಸ್ಟಾದಂತಹ ಬಹು ಬಳಕೆಯ ವಾಹನವನ್ನು ಬಿಡುಗಡೆ ಮಾಡಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಟೊಯೊಟಾ, ನಿಕಟ ಭವಿಷ್ಯದಲ್ಲೇ ಮೂರು ಹೊಚ್ಚ ಹೊಸ ಕಾರುಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಅವುಗಳು ಯಾವುದೆಂಬುದನ್ನು ನಿಮ್ಮಿಂದ ಹೆಸರಿಸಲು ಸಾಧ್ಯವೇ ?

2000ನೇ ಇಸವಿಯಲ್ಲಿ ಕ್ವಾಲಿಸ್ ನೊಂದಿಗೆ ದೇಶಕ್ಕೆ ಎಂಟ್ರಿ ಕೊಟ್ಟಿರುವ ಟೊಯೊಟಾ, ದೇಶಕ್ಕೆ ಕೆಲವು ಅತ್ಯುತ್ತಮ ಉತ್ಪನ್ನಗಳನ್ನು ಕೊಡುಗೆಯಾಗಿ ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿ ಇಟಿಯೋಸ್ ಲಿವಾದಿಂದ ಹಿಡಿದು, ಇಟಿಯೋಸ್ ಕ್ರಾಸ್, ಇನ್ನೋವಾ ಕ್ರೈಸ್ಟಾ, ಕರೊಲ್ಲಾ ಆಲ್ಟಿಸ್, ಫಾರ್ಚ್ಯುನರ್, ಕ್ಯಾಮ್ರಿ ಹೈಬ್ರಿಡ್, ಲ್ಯಾಂಡ್ ಕ್ರೂಸರ್ ಪ್ರಾಡೊ ಮತ್ತು ಲ್ಯಾಂಡ್ ಕ್ರೂಸರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ನ್ಯೂ ಜನರೇಷನ್ ಫಾರ್ಚ್ಯುನರ್

ನ್ಯೂ ಜನರೇಷನ್ ಫಾರ್ಚ್ಯುನರ್

ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶದ ಹಲವು ಗಣ್ಯ ವ್ಯಕ್ತಿಗಳು ಟೊಯೊಟಾ ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವನ್ನು ಆಶ್ರಯಿಸಿಕೊಂಡಿದ್ದಾರೆ. ಈಗ ಮತ್ತಷ್ಟು ಆಧುನಿಕತೆಗೆ ಮೊರೆ ಹೋಗುತ್ತಿರುವ ಸಂಸ್ಥೆಯು ಹೊಸ ತಲೆಮಾರಿನ ಫಾರ್ಚ್ಯುನರ್ ಬಿಡುಗಡೆ ಮಾಡುವ ತವಕದಲ್ಲಿದೆ.

ನ್ಯೂ ಜನರೇಷನ್ ಫಾರ್ಚ್ಯುನರ್

ನ್ಯೂ ಜನರೇಷನ್ ಫಾರ್ಚ್ಯುನರ್

ಫರಿಷ್ಕೃತ ಫ್ರಂಟ್ ಗ್ರಿಲ್ ಹಾಗೂ ಬಂಪರ್, ಶಕ್ತಿಯುತ ನಿಲುವು, ಆಕ್ರಮಣಕಾರಿ ನೋಟ, ಕ್ರೋಮ್ ಸ್ಪರ್ಶ ಹಾಗೂ ಎಲ್‌ಇಡಿ ಮತ್ತು ಡೇಟೈಮ್ ರನ್ನಿಂಗ್ ಲೈಟ್ ಗಳು ಪ್ರಮುಖ ಆಕರ್ಷಣೆಯಾಗಲಿದೆ. ಇನ್ನು ಕಾರಿನೊಳಗೂ ಐಷಾರಾಮಿ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಡ್ಯುಯಲ್ ಟೋನ್ ಬಣ್ಣಗಳು ಇರಲಿದೆ.

ನ್ಯೂ ಜನರೇಷನ್ ಫಾರ್ಚ್ಯುನರ್

ನ್ಯೂ ಜನರೇಷನ್ ಫಾರ್ಚ್ಯುನರ್

ಹೊಸ ತಲೆಮಾರಿನ ಫಾರ್ಚ್ಯುನರ್ ಕಾರಿನಲ್ಲಿ 2.4 ಲೀಟರ್ ಮತ್ತು 2.8 ಲೀಟರ್ ಜಿಡಿ ಡೀಸೆಲ್ ಎಂಜಿನ್ ಗಳಿರಲಿದೆ. ಇವೆರಡು ಅನುಕ್ರಮವಾಗಿ 160 (400 ಎನ್ ಎಂ ತಿರುಗುಬಲ) ಹಾಗೂ 177 (450 ಎನ್ ಎಂ ತಿರುಗುಬಲ) ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳ ಜೊತೆಗೆ ಫೋರ್ ವೀಲ್ ಚಾಲನಾ ವ್ಯವಸ್ಥೆಯೂ ಇರುತ್ತದೆ.

ನಿರೀಕ್ಷಿತ ಬೆಲೆ: 23ರಿಂದ 25 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯದಲ್ಲಿ

ಟೊಯೊಟಾ ವೈಯೊಸ್

ಟೊಯೊಟಾ ವೈಯೊಸ್

ಎಲ್ಲ ಸೆಗ್ಮೆಂಟ್ ನಲ್ಲೂ ಗಮನಾರ್ಹ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಟೊಯೊಟಾ, ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಅತಿ ನೂತನ ವೈಯೊಸ್ ಕಾರನ್ನು ಬಿಡುಗಡೆ ಮಾಡಲಿದೆ. ಇದು ಈಗ ಮಾರಾಟದಲ್ಲಿರುವ ಇಟಿಯೋಸ್ ಮತ್ತು ಕೊರೊಲ್ಲಾ ನಡುವೆ ಗುರುತಿಸಿಕೊಳ್ಳಲಿದೆ.

ಟೊಯೊಟಾ ವೈಯೊಸ್

ಟೊಯೊಟಾ ವೈಯೊಸ್

ಮಾರುತಿ ಸಿಯಾಝ್ ಹಾಗೂ ಹೋಂಡಾ ಸಿಟಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಟೊಯೊಟಾ ವೈಯೊಸ್, ಕಾರಿನಲ್ಲೂ ಕ್ರೀಡಾತ್ಮಕ ವಿನ್ಯಾಸದ ಜೊತೆಗೆ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಒತ್ತು ಕೊಡಲಾಗಿದೆ. ಇಲ್ಲೂ ಕಾರಿನೊಳಗೆ ಡ್ಯುಯಲ್ ಟೋನ್ ಬಣ್ಣಗಳು ಹೆಚ್ಚು ಆಕರ್ಷಣೆಗೆ ಪಾತ್ರವಾಗಲಿದೆ.

ಟೊಯೊಟಾ ವೈಯೊಸ್

ಟೊಯೊಟಾ ವೈಯೊಸ್

ಟೊಯೊಟಾ ವೈಯೊಸ್ 1.5 ಲೀಟರ್ ಪೆಟ್ರೋಲ್ (107 ಅಶ್ವಶಕ್ತಿ, 141 ಎನ್ ಎಂ ತಿರುಗುಬಲ) ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಗಳಿಂದ (87 ಅಶ್ವಶಕ್ತಿ, 205 ಎನ್ ಎಂ ತಿರುಗುಬಲ) ನಿಯಂತ್ರಿಸಲ್ಪಡಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿರುತ್ತದೆ.

ನಿರೀಕ್ಷಿತ ಬೆಲೆ: 8ರಿಂದ 10 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017

ಟೊಯೊಟಾ ರಷ್

ಟೊಯೊಟಾ ರಷ್

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಾಂಪಾಕ್ಟ್ ಕೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಇದೇ ಕಾರಣಕ್ಕಾಗಿ ಜನಪ್ರಿಯ ಸಂಸ್ಥೆಗಳು ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುವುದರತ್ತ ಕಾರ್ಯಮಗ್ನವಾಗಿದೆ. ಇದರಿಂದ ಟೊಯೊಟಾ ಕೂಡಾ ಹೊರತಾಗಿಲ್ಲ.

ಟೊಯೊಟಾ ರಷ್

ಟೊಯೊಟಾ ರಷ್

ಕೆಲವು ಏಷ್ಯಾ ಮಾರುಕಟ್ಟೆಗಳಲ್ಲಿ ದೈಹಟ್ಸು ರಷ್ ಎಂಬುದಾಗಿಯೂ ಗುರುತಿಸಿಕೊಂಡಿರುವ ನೂತನ ಕಾರಿನಲ್ಲಿ ಮಿನಿ ಫಾರ್ಚ್ಯುನರ್ ಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ. ಈ ಏಳು ಸೀಟುಗಳ ಕಾಂಪಾಕ್ಟ್ ಎಸ್ ಯುವಿ ಪ್ರಮುಖವಾಗಿಯೂ ಮಾರುತಿ ಬ್ರಿಝಾ, ಹ್ಯುಂಡೈ ಕ್ರೆಟಾ ಮತ್ತು ರೆನೊ ಡಸ್ಟರ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಟೊಯೊಟಾ ರಷ್

ಟೊಯೊಟಾ ರಷ್

ಅಂದ ಹಾಗೆ ಟೊಯೊಟಾ ರಷ್ 1.5 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಭಾರತ ಆವೃತ್ತಿಯಲ್ಲಿ ಕೊರೊಲ್ಲಾ ಆಲ್ಟಿಸ್ ನಲ್ಲಿರುವುದಕ್ಕೆ ಸಮಾನವಾದ 1.4 ಲೀಟರ್ ಡೀಸೆಲ್ ಎಂಜಿನ್ ಲಭ್ಯವಿರಲಿದೆ. ಇದು 170 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿರೀಕ್ಷಿತ ಬೆಲೆ: 8ರಿಂದ 14 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ಮಧ್ಯಂತರ ಅವಧಿ

ಮುಂಬರುವ ಮೂರು ಹೊಚ್ಚ ಹೊಸ ಟೊಯೊಟಾ ಕಾರುಗಳು

ಇಲ್ಲಿ ಸೂಚಿಸಿರುವ ಮೂರು ಕಾರುಗಳ ಪೈಕಿ ಭಾರತ ಮಾರುಕಟ್ಟೆಯಲ್ಲಿ ಯಾವ ಕಾರು ಯಶಸ್ಸು ಸಾಧಿಸಲಿದೆ ಮತ್ತು ಯಾಕೆ? ಎಂಬುದಕ್ಕೆ ಸಂಬಂಧಪಟ್ಟಂತೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

Most Read Articles

Kannada
English summary
Upcoming Toyota Cars In India in 2016-17
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X