ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಟೊಯೊಟಾ ಸಂಸ್ಥೆಯು ಭಾರತ ಮಾರುಕಟ್ಟೆಗೆ ನೂತನ ರಷ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಯನ್ನು ಬಿಡುಗಡೆ ಮಾಡಿದೆ.

By Praveen

ಬಹು ಬಳಕೆಯ ವಾಹನಗಳಲ್ಲಿ ಈಗಾಗಲೇ ಗಮನ ಸೆಳೆದಿರುವ ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಸಂಸ್ಥೆಯು ಭಾರತ ಮಾರುಕಟ್ಟೆಗೆ ನೂತನ ರಷ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಟೊಯೊಟಾ ಐಕಾನಿಕ್ ಮಾದರಿಗಳನ್ನು ಗಮನಿಸಿದಾಗ ರಷ್ ಭಾರತ ಪ್ರವೇಶಕ್ಕೆ ಯಾವುದೇ ಅಡೆ ತಡೆ ಎದುರಾಗುವ ಸಾಧ್ಯತೆಯಿಲ್ಲ. ಯಾಕೆಂದರೆ ಟೊಯೊಟಾ ಇನ್ನೋವಾ ಈಗಾಗಲೇ ಎಂಪಿವಿ ವಿಭಾಗದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಅಂದ ಹಾಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ರಷ್ ಕಾಂಪಾಕ್ಟ್ ಎಸ್‌ಯುವಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 107.5-ಬಿಎಚ್‌ಪಿ ಮತ್ತು 141.2-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಹೊಂದಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಹೀಗಾಗಿಯೇ ಭಾರತದಲ್ಲಿ ಬಿಡುಗಡೆಗಾಗಿ ಕಾಯ್ದಿರುವ ರಷ್ ಕೂಡಾ ಥರ್ಡ್ ಜನರೇಷನ್ ಆವೃತ್ತಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 104-ಬಿಎಚ್‌ಪಿ 140-ಎನ್ಎಂ ಟಾರ್ಕ್ ಹೊಂದಿರುವ ಪ್ರಮುಖ ವಿಚಾರ ಎನ್ನಬಹುದು.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಜೊತೆಗೆ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿರುವ ರಷ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಇನೋವಾ ರೀತಿಯಲ್ಲೇ ಫೌರ್ ಕ್ರೋಮ್ ಸ್ಲಾಟ್ ಒದಗಿಸಲಾಗಿದ್ದು, 7 ಸೀಟರ್ ಸೌಲಭ್ಯವನ್ನು ನೀಡಲಿದೆ ಹೊಂದಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಇನ್ನು ಹೊರ ಭಾಗದ ಎಲ್ಇಡಿ ಡಿಆರ್‌ಎಸ್ ವಿನ್ಯಾಸಗಳು ಹೋಂಡಾ ಸಿಆರ್-ವಿ ರೀತಿಯಲ್ಲಿದ್ದು, 220ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದಷ್ಟೇ ಅಲ್ಲದೇ ಡ್ಯುಯಲ್ ಟೊನ್ ಕ್ಯಾಬಿನ್, 17 ಇಂಚಿನ ಆಲಾಯ್ ಚಕ್ರಗಳು ಮತ್ತು ಕಾರಿನ ಮುಂಭಾಗದಲ್ಲಿ ಟಿಡಿಆರ್ ಸ್ಪೋರ್ಟಿವೊ ಬ್ಯಾಡ್ಜ್ ಅಂಟಿಸಲಾಗಿದೆ.

ತಪ್ಪದೇ ಓದಿ-ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಇನ್ನುಳಿದಂತೆ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಒದಗಿಸಲಾಗುವ ಸಿಕ್ಸ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಸ್ಟ್ಯಾಬಿಲಿಟಿ ಕಂಟ್ರೊಲರ್, ಯುಎಸ್‌ಬಿ, ಸಿಡಿ ಪ್ಲೇಯರ್, ಸ್ಮಾರ್ಟ್ ಕನೆಕ್ಟಿವಿಟಿ ಸ್ಲಾಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಕೀ ಲೆಸ್ ಎಂಟ್ರಿ ಜೋಡಣೆ ಮಾಡಲಾಗಿದೆ.

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೇಟಾ, ರೆನಾಲ್ಟ್ ಕ್ಯಾಪ್ಚರ್, ಫೋರ್ಡ್ ಇಕೋ ಸ್ಪೋರ್ಟ್ ಹಿಂದಿಕ್ಕುವ ಉದ್ದೇಶದೊಂದಿಗೆ ಟೊಯೊಟಾ ಸಂಸ್ಥೆಯು ರಷ್ ಬಿಡುಗಡೆ ಮಾಡುತ್ತಿದೆ.

ತಪ್ಪದೇ ಓದಿ-ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Most Read Articles

Kannada
Read more on toyota ಟೊಯೊಟಾ
English summary
Read in Kannada: 2018 Toyota Rush Revealed — Has All The DNA To Rival The Hyundai Creta & Renault Captur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X