ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ದೇಶದಲ್ಲಿ ಪ್ರತಿದಿನ ಸಾವಿರಾರು ಡ್ರೈವಿಂಗ್ ಲೈನೆಸ್ಸ್‌ಗಳು ವಿತರಣೆ ಆಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ದುರ್ಬಳಕೆ ಕೂಡಾ ಆಗುತ್ತಿವೆ. ಈ ಹಿನ್ನೆಲೆ ಚಾಲನಾ ಪರವಾನಿಗೆಗಳ ವಿತರಣೆ ಮೇಲೆ ನಿಯಂತ್ರಣ ಹೊಂದುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಧಾರ

By Praveen

ದೇಶದಲ್ಲಿ ಪ್ರತಿದಿನ ಸಾವಿರಾರು ಡ್ರೈವಿಂಗ್ ಲೈನೆಸ್ಸ್‌ಗಳು ವಿತರಣೆ ಆಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ದುರ್ಬಳಕೆ ಕೂಡಾ ಆಗುತ್ತಿವೆ. ಈ ಹಿನ್ನೆಲೆ ಚಾಲನಾ ಪರವಾನಿಗೆಗಳ ವಿತರಣೆ ಮೇಲೆ ನಿಯಂತ್ರಣ ಹೊಂದುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಧಾರ್ ಲಿಂಕ್ ಕಡ್ಡಾಯ ಮಾಡುತ್ತಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಿದೆ ಕೇಂದ್ರ..!!

ವರದಿಗಳ ಪ್ರಕಾರ ನಗರ ಪ್ರದೇಶಗಳಲ್ಲಿನ ಹಲವು ಬೈಕ್ ಸವಾರರು ಮತ್ತು ವಾಣಿಜ್ಯ ವಾಹನ ಸವಾರರು ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈನೆಸ್ಸ್‌ಗಳನ್ನು ಹೊಂದುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಇದರಿಂದ ಸಂಚಾರಿ ನಿಯಮಗಳ ಉಲ್ಲಂಘನೆ ಕೂಡಾ ಹೆಚ್ಚುತ್ತಿದೆ ಎನ್ನಲಾಗಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಹೀಗಾಗಿ ಡ್ರೈವಿಂಗ್ ಲೈಸೆನ್ಸ್‌ಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರವು, ಈ ಹಿಂದೆ ಬ್ಯಾಂಕಿಂಗ್ ಅವ್ಯವಹಾರಗಳನ್ನು ತಡೆಯಲು ಪ್ಯಾನ್ ಕಾರ್ಡ್ ಕಡ್ಡಾಯ ಜಾರಿ ತಂದ ಮಾದರಿಯಲ್ಲೇ ಚಾಲನಾ ಪರವಾನಗಿಯನ್ನೂ ಆಧಾರ್ ನಂಬರ್ ಜೊತೆ ಜೋಡಿಸಲು ಯೋಜನೆ ರೂಪಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಈ ಬಗ್ಗೆ 'ಡಿಜಿಟಲ್ ಹರ್ಯಾಣ 2017' ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಭಾರತವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವತ್ತ ಮತ್ತೊಂದು ಹೆಜ್ಜೆ ಇಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಚಾಲನಾ ಪರವಾನಗಿಯನ್ನೂ ಆಧಾರ್ ನೊಂದಿಗೆ ಜೋಡಿಸಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಹೊಸ ಯೋಜನೆ ಕುರಿತು ಈಗಾಗಲೇ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಮಾತನಾಡಿದ್ದೇವೆ ಎಂದಿರುವ ಸಚಿವ ರವಿಶಂಕರ್ ಪ್ರಸಾದ್, ಒಬ್ಬ ವಾಹನ ಚಾಲಕ ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಹೊಂದುವುದನ್ನು ನಿಯಂತ್ರಣ ಮಾಡಬಹುದಾಗಿದೆ ಎಂದಿದ್ದಾರೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಒಂದು ಅಂದಾಜಿನ ಪ್ರಕಾರ, ಈವರೆಗೆ ದೇಶಾದ್ಯಂತ 18 ಕೋಟಿಗೂ ಅಧಿಕ ಡಿಎಲ್‍ಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಒಂದೇ ಹೆಸರಿನಲ್ಲಿ ಬಹು ಪರವಾನಗಿಗಳನ್ನು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮತ್ತು ಪೊಲೀಸ್ ಇಲಾಖೆಗೆ ವಂಚಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಈ ಹಿನ್ನೆಲೆಯಲ್ಲಿ ವಂಚನೆ, ಅಪರಾಧ ಚಟುವಟಿಕೆಗಳು ಮತ್ತು ನಕಲಿ ಗುರುತುಗಳನ್ನು ತಡೆಗಟ್ಟಲು ಆಧಾರ್ ಅಸ್ತ್ರವನ್ನು ಬಳಸಲು ಉದ್ದೇಶಿಸಲಾಗಿದೆ ಎಂದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಈ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡ್ತಾ ಇರೋದಕ್ಕೆ ಕಾರಣವೇನು?

ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇದೀಗ ಸುಲಭ..!

ವಾಹನಗಳ ನೋಂದಣಿ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಯಲು ಕೇಂದ್ರ ಸರ್ಕಾರವು ಈಗಾಗಲೇ ಮಹತ್ವದ ಹೆಜ್ಜೆಯಿಟ್ಟಿದೆ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇದೀಗ ಸುಲಭದ ಕೆಲಸ ಎಂದರೇ ತಪ್ಪಾಗಲಾರದು.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಿದೆ ಕೇಂದ್ರ..!!

ವಾಹನ ನೋಂದಣಿ, ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ನು ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತಿದ್ದು, ಇದಕ್ಕಾಗಿ "ವಾಹನ್ 4.0" ಹಾಗೂ 'ಸಾರಥಿ 4.0' ಎಂಬ ಆ್ಯಪ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕವೇ ನೀವು ಅರ್ಜಿ ಸಲ್ಲಿಸಬಹುದು.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಿದೆ ಕೇಂದ್ರ..!!

ಏನಿದು "ವಾಹನ್ 4.0"..?

ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಿದೆ ಕೇಂದ್ರ..!!

ಲೈಸೆನ್ಸ್ ಪಡಿಯೋಕೆ "ಸಾರಥಿ 4.0"

ಹೊಸದಾಗಿ ಅಭಿವೃದ್ಧಿಗೊಳಿಸಲಾಗಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದ್ದು, ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಿದೆ ಕೇಂದ್ರ..!!

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ಹೊಸ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲಕರವಾಗಲಿದ್ದು, ಭ್ರಷ್ಟಾಚಾರ ಮತ್ತು ನಕಲಿ ಚಾಲನಾ ಪರವಾನಿಗೆ ಮೂಲಕ ಅಪರಾಧಗಳಲ್ಲಿ ಭಾಗಿಯಾಗುವರನ್ನು ಮಟ್ಟಹಾಕಬಹುದಾಗಿದೆ.

Most Read Articles

Kannada
English summary
Read in Kannada about Centre Plans To Link Aadhaar Card To Driver’s Licence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X