Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ ?
ಮುಂದಿನ ವರ್ಷ ಎರ್ಟಿಗಾ ಕಾರಿನ ಎರಡನೆಯ ಪೀಳಿಗೆಯ ಮಾದರಿಯನ್ನು ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಲಾಗುತಿದ್ದು, ಈ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾರುತಿ ಸಂಸ್ಥೆಯು ತನ್ನ ಎಂಪಿವಿ ಮಾದರಿಯ ಎರ್ಟಿಗಾ ಕಾರನ್ನು 2012ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಕಳೆದ ಐದು ವರ್ಷಗಳಲ್ಲಿ, ಈ ವಾಹನವು ಭಾರತದಲ್ಲಿ ಕೇವಲ ಒಮ್ಮೆ ಮಾತ್ರ ಸಣ್ಣ ಫೇಸ್ಲಿಫ್ಟ್ ಆಯ್ಕೆಯನ್ನು ಪಡೆದುಕೊಂಡಿದೆ, ಆದರೆ ಸದ್ಯ ಬಂದಿರುವ ಮಾಹಿತಿ ಪ್ರಕಾರ ಈ ಕಾರು ನವೀಕರಣಗೊಂಡು ಬಿಡುಗಡೆಯಾಗಲಿದೆ.

ಸುಜುಕಿ ಇಂಡೊಮೊಬಿಲ್ ಕಂಪನಿಯ ಮಾರ್ಕೆಟಿಂಗ್ ಹೆಡ್ ಡೊನ್ನಿ ಅವರು ಈ ಪ್ರಕಟಣೆಗಳನ್ನು ದೃಢಪಡಿಸಿದ್ದು, ಈಗಾಗಲೇ ಈ ಹೊಚ್ಚ ಹೊಸ ಫೇಸ್ ಲಿಫ್ಟ್ ಕಾರಿನ ಅಭಿವೃದ್ಧಿಗೆ ಕೈಹಾಕಲಾಗಿದೆ ಎಂಬ ವಿಚಾರ ತಿಳಿದುಬಂದಿದೆ.

ಸದ್ಯ ಬಿಡುಗಡೆಗೆ ಸಿದ್ಧವಾಗಿರಿರುವ ಸ್ವಿಫ್ಟ್ ಕಾರಿನ ತಂತ್ರಜ್ಞಾನವನ್ನೇ ಈ ಕಾರೂ ಸಹ ಪಡೆದುಕೊಳ್ಳಲಿದ್ದು, ಮುಂದಿನ ಪೀಳಿಗೆಯ HEARTECT ಪ್ಲೇಟ್ಫಾರಂ ಆಧಾರವನ್ನು ಈ ಕಾರು ಪಡೆದುಕೊಳ್ಳಲಿದೆ.

ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಈ HEARTECT ಪ್ಲೇಟ್ಫಾರಂನಿಂದಾಗಿ ಕಾರಿನ ತೂಕವನ್ನು ಕಡಿಮೆ ಮಾಡಲು ಸಹಾಯವಾಗಲಿದ್ದು, ತೂಕದ ಉಳಿತಾಯದ ಜೊತೆಗೆ, ಈ ಎಂಪಿವಿ ಮಾದರಿ ಹೆಚ್ಚು ಇಂಧನ ಕ್ಷಮತೆ ಹೊಂದಲಿದೆ.

ಹೊಸ ಸ್ವಿಫ್ಟ್ ಮತ್ತು ಡಿಜೈರ್ ಕಾರಿನಲ್ಲಿ ನೀಡಲಾಗಿರುವ ಹೊಸ ಡ್ಯಾಶ್ಬೋರ್ಡ್ ಈ ಕಾರು ಸಹ ಪಡೆಯಬಹುದು ಎಂಬ ಮಾಹಿತಿ ಇದ್ದು, ಈ ಮೂಲಕ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ನೊಂದಿಗೆ ಹೊಸ ಟಚ್ಸ್ಕ್ರೀನ್ ಸಿಸ್ಟಮ್ ತನ್ನದಾಗಿಸಿಕೊಳ್ಳಲಿದೆ ಎನ್ನಬಹುದು.

ಎಂಜಿನ್ ಬಗ್ಗೆ ಹೇಳುವುದಾದರೆ, ಈ ಕಾರು ಡಿಡಿಐಎಸ್ 200 ಮಾದರಿಯಲ್ಲಿ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ. ಪೆಟ್ರೋಲ್ ಎಂಜಿನ್ಗೆ ಸಂಬಂಧಿಸಿದಂತೆ, ಕಂಪೆನಿಯು ಹೊಸ 1.5 ಲೀಟರ್ ಎಂಜಿನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಕಂಪನಿ ನೀಡಿಲ್ಲ.