ಕಳ್ಳತನವಾಗಿದ್ದ ಸಿಎಂ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಕಳೆದ 2 ದಿನಗಳ ಹಿಂದೆ ದೆಹಲಿ ಸಚಿವಾಲಯದ ಸಮೀಪ ನಿಲ್ಲಿಸಲಾಗಿದ್ದ ಸಿಎಂ ಕೇಜ್ರಿವಾಲ್ ಅವರ ವ್ಯಾಗನರ್ ಆರ್ ಕಾರು ನಾಪತ್ತೆಯಾಗಿತ್ತು. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿರುವ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

By Praveen

ಕಳೆದ 2 ದಿನಗಳ ಹಿಂದೆ ದೆಹಲಿ ಸಚಿವಾಲಯದ ಸಮೀಪ ನಿಲ್ಲಿಸಲಾಗಿದ್ದ ಸಿಎಂ ಕೇಜ್ರಿವಾಲ್ ಅವರ ವ್ಯಾಗನರ್ ಆರ್ ಕಾರು ನಾಪತ್ತೆಯಾಗಿತ್ತು. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿರುವ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

DL 9C G 9769 ನಂಬರ್‌ನ ವ್ಯಾಗನಾರ್ ಆರ್ ಕಾರು ಕೇಜ್ರಿವಾಲ್ ಅವರ ಅಚ್ಚುಮೆಚ್ಚಿನ ಕಾರ್ ಆಗಿದ್ದು, ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಸಹ ಇದೇ ಕಾರನ್ನು ಬಳಕೆ ಮಾಡುತ್ತಿದ್ದರು. ಆದ್ರೆ ಮುಂಜಾಗ್ರತ ಕ್ರಮ ವಹಿಸದ ಹಿನ್ನಲೆ ಕಳೆದ ಗುರುವಾರ ಕಳ್ಳರ ಪಾಲಾಗಿತ್ತು.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಘಟನೆ ನಂತರ ಕಾರು ಪತ್ತೆಗೆ ಸಾಕಷ್ಟು ಶ್ರಮವಹಿಸಿರುವ ದೆಹಲಿ ಪೊಲೀಸರು ಕೊನೆಗೂ ಕದ್ದ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆದ್ರೆ ಕಾರು ಕಳ್ಳತನ ಮಾಡಿದ ಖದೀಮರು ಮಾತ್ರ ಪತ್ತೆಯಾಗಿಲ್ಲಾ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಗಾಯಾಜಿಬಾದ್ ನಗರದ ಕಾಲೋನಿ ಒಂದರ ಬಳಿ ಕಾರು ಬಿಟ್ಟು ತೆರಳಿರುವ ಖದೀಮರು ಯಾವುದೇ ಸುಳಿವು ನೀಡದಂತೆ ಪರಾರಿಯಾಗಿದ್ದು, ಚಾಣಾಕ್ಷ ಕಳ್ಳರ ಪತ್ತೆಗೆ ಗಾಜಿಯಾಬಾದ್ ಮತ್ತು ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

Recommended Video

2017 Mercedes New GLA India Launch Kannada - DriveSpark ಕನ್ನಡ
ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಜೊತೆಗೆ ಕಾರು ಕದ್ದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಕಾರು ಪತ್ತೆಯಾದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶಿಲನೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಅತಿದೊಡ್ಡ ಕಾರು ಕಳ್ಳತನದ ಜಾಲವೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಇನ್ನು ಸಚಿವಾಲಯದ ಸಮೀಪದಿಂದಲೇ ಕಾರು ಕಳ್ಳತವಾಗಿದ್ದ ಕುರಿತು ಲೆ.ಗವರ್ನರ್‌ ಅನಿಲ್‌ ಬೈಜಲ್‌ ಅವರಿಗೆ ಪತ್ರ ಬರೆದಿದ್ದ ಸಿಎಂ ಅರವಿಂದ್‌ ಕೇಜ್ರಿವಾಲ್‌, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕ್ಷೀಣಿಸುತ್ತಿರುವುದರ ಪ್ರತೀಕ ಎಂದು ಅಸಹನೆ ವ್ಯಕ್ತಪಡಿಸಿದ್ದರು.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಜೊತೆಗೆ ರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್‌ಗಳಲ್ಲಿ ದಿನ ನಿತ್ಯ ಐದರಿಂದ ಹತ್ತು ಕಾರು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರಕರಣ ಭೇದಿಸಲು ದೆಹಲಿ ಪೊಲೀಸರು ಹರಸಾಹಸ ಪಡುವಂತಾಗಿದೆ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಅಲ್ಲದೇ ದೆಹಲಿಯಿಂದ ಕದ್ದ ಕಾರುಗಳನ್ನು ಗಾಜಿಯಾಬಾದ್, ಫರಿದಾಬಾದ್, ರೋಹ್ಟಕ್, ಮಿರತ್‌ಗಳಲ್ಲಿ ಬಿಡಿಭಾಗಗಳನ್ನಾಗಿ ಮಾರಾಟ ಮಾಡುವ ಗ್ಯಾಂಗ್‌ಗಳು ಸಕ್ರಿಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಕಾರು ಕಳ್ಳತನ ತಡೆ ಹೇಗೆ?

ಇದೀಗ ಮುಂದುವರಿರುವ ತಂತ್ರಜ್ಞಾನಗಳ ಸೌಲಭ್ಯಗಳ ಅಳವಡಿಕೆ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದ್ದು, ಆ್ಯಂಟಿ ಥೆಫ್ಟ್ ಟೆಕ್ನಾಲಜಿ ಮೂಲಕ ಕಾರು ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ.

ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ- ಹಾಗಾದ್ರೆ ಕದ್ದವರು ಯಾರು?

ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಮ್ ಮೊಬಿಲೈಸರ್ ಸಿಸ್ಟಂ, ಜಿಪಿಎಸ್ ಟ್ರಾಕಿಂಗ್ ಸಿಸ್ಟಂ, ಗೇರ್ ಆ್ಯಂಡ್ ಸ್ಟಿರಿಂಗ್ ವೀಲ್ಹ್ ಲಾಕ್ ಸೇರಿದಂತೆ ವಿವಿಧ ಸುರಕ್ಷಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕಾರು ಕಳ್ಳತನ ತಡೆಯಲು ಇದು ಸೂಕ್ತ ಪರಿಹಾರ ಎನ್ನಬಹುದು.

Most Read Articles

Kannada
English summary
Read in Kannada about Arvind Kejriwal's Blue WagonR, Missing For 2 Days, Found In Ghaziabad Near Delhi.
Story first published: Saturday, October 14, 2017, 15:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X