ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ ಕೆಎಸ್ಆರ್‌ಟಿಸಿ

ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮತ್ತಷ್ಟು ಹೊಸ ಬಸ್‌ಗಳನ್ನು ಆರಂಭಿಸುತ್ತಿರುವ ಕೆಎಸ್ಆರ್‌ಟಿ ಸಂಸ್ಥೆಯು ಸದ್ಯದಲ್ಲೇ 3019 ಹೊಸ ಖರೀದಿ ಮಾಡಲಿದ್ದು, ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

By Praveen

ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮತ್ತಷ್ಟು ಹೊಸ ಬಸ್‌ಗಳನ್ನು ಆರಂಭಿಸುತ್ತಿರುವ ಕೆಎಸ್ಆರ್‌ಟಿ ಸಂಸ್ಥೆಯು ಸದ್ಯದಲ್ಲೇ 3019 ಹೊಸ ಖರೀದಿ ಮಾಡಲಿದ್ದು, ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿರುವ ಕೆಎಸ್ಆರ್‌ಟಿ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಬಸ್‌ಗಳ ಸೇವೆ ಆರಂಭಿಸುತ್ತಿದ್ದು, ಇದಕ್ಕಾಗಿ 650ಕೋಟಿ ವೆಚ್ಚದಲ್ಲಿ 3019 ಹೊಸ ಬಸ್‌ಗಳನ್ನು ಖರೀದಿ ಮಾಡುತ್ತಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಈಗಾಗಲೇ ಅಶೋಕ್ ಲೈಲ್ಯಾಂಡ್‌ ಜೊತೆ ಬಸ್ ತಯಾರಿಕೆಗೆ ಒಡಂಬಡಿಕೆ ಮಾಡಿಕೊಂಡಿರುವ ಕೆಎಸ್ಆರ್‌ಟಿಸಿ, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಹೊಸ ಬಸ್‌ಗಳನ್ನು ಒದಗಿಸುವಂತೆ ಕೋರಿಕೆ ಸಲ್ಲಿಸಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಈ ಬಗ್ಗೆ ಅಶೋಕ್ ಲೈಲ್ಯಾಂಡ್ ಕೂಡಾ ಅಧಿಕೃತ ಪ್ರಕಟನೆ ಬಿಡುಗಡೆ ಮಾಡಿದ್ದು, ನಿಗದಿತ ಅವಧಿಯೊಳಗೆ ಕೆಎಸ್ಆರ್‌ಟಿಸಿ ಬೇಡಿಕೆಗೆ ಪೂರೈಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಇನ್ನು ಕೆಎಸ್ಆರ್‌ಟಿಸಿಯಲ್ಲಿ ಅಶೋಕ್ ಲೈಲ್ಯಾಂಡ್ ನಿರ್ಮಾಣದ ಬಸ್‌ಗಳು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣೆ ಹೊಂದಿರುವ ಹಿನ್ನೆಲೆ ಮತ್ತಷ್ಟು ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಹೊಸ ಬಸ್‌ಗಳು KSRTC, NWKRTC, BMTC ಮತ್ತು NEKRTC ವಿಭಾಗಗಳಿಗೆ ಬೇಡಿಕೆಗೆ ಅನುಗುಣವಾಗಿ ಹಂಚಿಕೆಯಾಗಲಿದ್ದು, ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅಶೋಕ್ ಲೈಲ್ಯಾಂಡ್ ನಿರ್ಮಾಣದ ಬಸ್‌ಗಳ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಲಿದೆ.

ಅಶೋಕ್ ಲೈಲ್ಯಾಂಡ್‌ನಿಂದ 3019 ಹೊಸ ಬಸ್‌ಗಳನ್ನು ಖರೀದಿಸಲಿದೆ KSRTC

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರೂ.650 ಕೋಟಿ ವೆಚ್ಚ ಮಾಡಿ ಹೊಸ ಬಸ್ ಖರೀದಿ ಮಾಡುತ್ತಿರುವ ಕೆಎಸ್ಆರ್‌ಟಿಸಿ ನಿರ್ಧಾರ ಮಹತ್ವದಾಗಿದ್ದು, ಇದರ ಜೊತೆ ಸದ್ಯ ಸೇವೆಯಲ್ಲಿರುವ ಹಳೆಯ ಬಸ್‌ಗಳಲ್ಲಿನ ಸೌಲಭ್ಯಗಳ ಸುಧಾರಣೆಗೂ ಒತ್ತು ನೀಡುವ ಅಗತ್ಯವಿದೆ.

Most Read Articles

Kannada
Read more on ಬಸ್ ksrtc
English summary
Read in Kannada about Ashok Leyland Bags Bulk Order Worth Rs 650 cr. For 3019 Buses From Karnataka state RTC.
Story first published: Friday, July 28, 2017, 15:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X