500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ಅಶೋಕ್‌ ಲೈಲ್ಯಾಂಡ್‌ ಭಾರಿ ಗಾತ್ರದ ನಿರ್ಮಾಣ ಸಂಸ್ಥೆಯು ದೊಡ್ಡ ಮಟ್ಟದ ಟೆಂಡರ್ ಒಂದನ್ನು ತನ್ನದಾಗಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

By Girish

ಅಶೋಕ್‌ ಲೈಲ್ಯಾಂಡ್‌ ಭಾರಿ ಗಾತ್ರದ ನಿರ್ಮಾಣ ಸಂಸ್ಥೆಯು ದೊಡ್ಡ ಮಟ್ಟದ ಟೆಂಡರ್ ಒಂದನ್ನು ತನ್ನದಾಗಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ಭಾರತದ ಪ್ರಸಿದ್ಧ ಅಶೋಕ್‌ ಲೈಲ್ಯಾಂಡ್‌ ಟ್ರಕ್ ನಿರ್ಮಾಣ ಸಂಸ್ಥೆಯು ಸುಮಾರು 120 ಕೋಟಿ ಮೌಲ್ಯದ ಟೆಂಡರ್ ತನ್ನದಾಗಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ 500 ಸಂಪೂರ್ಣವಾಗಿ ನಿರ್ಮಿಸಿದ ವಾಹನಗಳನ್ನು ತಯಾರು ಮಾಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

2014ರಲ್ಲಿ ಸ್ಥಾಪಿತವಾದ ರಿವಿಗೂ ಸರಕು ಸಾಗಾಣಿಕೆ ಸಂಸ್ಥೆಯೊಂದು ಈ ದೊಡ್ಡ ಮೊತ್ತದ ಟೆಂಡರ್ ಅನ್ನು ಸಂಸ್ಥೆಗೆ ನೀಡಲು ಮುಂದೆ ಬಂದಿದ್ದು, ಇದರಿಂದಾಗಿ ಈ ಎರಡು ಕಂಪನಿಗಳ ವಿಶ್ವಾಸ ಮಟ್ಟ ಹೆಚ್ಚಲಿದೆ ಎನ್ನಲಾಗಿದೆ.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ರಿವಿಗೂ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದ್ದು, ಸದ್ಯ ಇರುವಂತಹ 2200 ವಾಹನಗಳ ಜೊತೆ ಮತ್ತೆ 500 ಟ್ರಕ್‌ಗಳನ್ನು ಜೋಡಿಸುವ ಕಾರ್ಯಕ್ಕೆ ಮುಂದಾಗಿದೆ.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ಅಶೋಕ್‌ ಲೈಲ್ಯಾಂಡ್‌ ಸ್ವತಃ ಅಭಿವೃದ್ಧಿಪಡಿಸಿರುವ IEGR(Intelligent Exhaust Gas Recirculation)ತಂತ್ರಜ್ಞಾನವು ಕಂಪನಿಯ ಮೇಲೆ ವಿಶ್ವಾಸ ಇಡಲು ಮುಖ್ಯ ಕಾರಣವಾಗಿದೆ ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿಬರುತ್ತಿದೆ.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ಇನ್ನು IEGR ತಂತ್ರಜ್ಞಾನದ ಬಗ್ಗೆ ಮಾತನಾಡುವುದಾದರೆ, ಬಿಎಸ್-4 ಎಂಜಿನ್ ಕಾನೂನು ಭಾರತದಲ್ಲಿ ಅನುಷ್ಠಾನಗೊಂಡ ನಂತರ, ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಈ IEGR(Intelligent Exhaust Gas Recirculation)ತಂತ್ರಜ್ಞಾನವನ್ನು ಅಶೋಕ್‌ ಲೈಲ್ಯಾಂಡ್‌ ಪರಿಚಯ ಮಾಡಿತು.

500 ಕೋಟಿ ಆಫರ್ ತನ್ನದಾಗಿಸಿಕೊಂಡ ಅಶೋಕ್‌ ಲೈಲ್ಯಾಂಡ್‌ ಸಂಸ್ಥೆ !!

ಬಿಎಸ್-IV ಅನುಷ್ಠಾನಗೊಂಡ ನಂತರ ಏಪ್ರಿಲ್ ತಿಂಗಳಿನಲ್ಲಿ ಅಶೋಕ್‌ ಲೈಲ್ಯಾಂಡ್‌ ಪರಿಚಯ ಮಾಡಿದ ಈ ಹೊಸ ತಂತ್ರಜ್ಞಾನದಿಂದಾಗಿ ಟ್ರಕ್ ವಾಹನಗಳಲ್ಲಿ ಹೆಚ್ಚು ದಕ್ಷತೆ ಮತ್ತೆ ಹೊಗೆಯ ಪ್ರಮಾಣ ಕಡಿಮೆಗೊಂಡಿದ್ದು, ಹೆಚ್ಚು ಹೆಚ್ಚು ವಾಹನ ತಯಾರಕರು ಈ ಬಗ್ಗೆ ಗಮನ ಹರಿಸಬೇಕಾಗಿದೆ.

Most Read Articles

Kannada
English summary
Ashok Leyland, one of India's leading truck manufacturer, has bagged an order for 500 fully built vehicles worth Rs 120 crore.
Story first published: Saturday, August 12, 2017, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X