ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ಪ್ರತಿಷ್ಠಿತ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 112 ಕೋಟಿ ಗಳಿಕೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಶೇ.37ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

By Praveen

ದೇಶಿಯವಾಗಿ ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 112 ಕೋಟಿ ಗಳಿಕೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಶೇ.37ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹತ್ತು ವಿಶೇಷತೆಗಳೊಂದಿಗೆ ಗ್ರಾಹಕರ ನೆಚ್ಚಿನ ಮಾದರಿಯಾಗಿರುವ ಅಶೋಕ್ ಲೈಲ್ಯಾಂಡ್ ಉತ್ಪನ್ನಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಗೊಂಡಿದ್ದು, ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ರೂ.4,515 ಕೋಟಿ ವಹಿವಾಟು ನಡೆಸಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ಐಇಜಿಆರ್ ಹಾಗೂ ಬಿಎಸ್-4 ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದ ವಾಣಿಜ್ಯ ವಾಹನಗಳಿಗೆ ಅತಿಹೆಚ್ಚು ಬೇಡಿಕೆ ಬಂದಿದ್ದು, ಅಶೋಕ್ ಲೈಲ್ಯಾಂಡ್ ಕೈಗೊಂಡ ಹೊಸ ಯೋಜನೆಗಳು ಸಫಲಗೊಂಡಿವೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ವರ್ಷದ ಮೊದಲ ತಿಂಗಳಿನಿಂದ ಏಪ್ರಿಲ್ ಅಂತ್ಯದ ವರೆಗಿನ ವಾಣಿಜ್ಯ ವಾಹನಗಳ ವ್ಯಾಪಾರ ವಹಿವಾಟಿನ ಮಾಹಿತಿ ಇದಾಗಿದ್ದು, 2ನೇ ಹಾಗೂ 3ನೇ ತ್ರೈಮಾಸಿಕ ಅವಧಿಗೆ ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ಈ ಬಗ್ಗೆ ಮಾತನಾಡಿರುವ ಅಶೋಕ್ ಲೈಲ್ಯಾಂಡ್ ಎಂಡಿ ವಿನೋದ್ ಕೆ. ದಾಸರಿ, "ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೈಗೊಂಡ ಹೊಸ ಯೋಜನೆಗಳು ಸಫಲಗೊಂಡಿದ್ದು, ಇದು ಇನ್ನಷ್ಟು ಹೆಚ್ಚಳವಾಗುವ ನಿಟ್ಟಿನಲ್ಲಿ ಕೆಲವು ಹೊಸ ಯೋಜನೆಗಳನ್ನು ಸದ್ಯದಲ್ಲೇ ರೂಪಿಸಲಾಗುವುದು" ಎಂದಿದ್ದಾರೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ಒಟ್ಟಿನಲ್ಲಿ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಅಶೋಕ್ ಲೈಲ್ಯಾಂಡ್ ಪ್ರಮುಖ ವಾಣಿಜ್ಯ ವಾಹನಗಳ ಉತ್ಪಾದಕರಿಗೆ ತೀವ್ರ ಸ್ಪರ್ಧೆ ನೀಡುತ್ತಿದ್ದು, ಲಾಭದ ಅಂಶಗಳನ್ನು ಬಳಕೆ ಮಾಡಿಕೊಂಡು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಯೋಜನೆ ಕೈಕೊಳ್ಳುವ ಸಾಧ್ಯತೆಗಳಿವೆ.

ಮೊದಲ ತ್ರೈಮಾಸಿಕ ಅವಧಿಯಲ್ಲೇ ಅಶೋಕ್ ಲೈಲ್ಯಾಂಡ್‌ಗೆ 112 ಕೋಟಿ ಲಾಭ..!

ಡ್ರೈವ್‍‌ಸ್ಪಾರ್ಕ್ ಅಭಿಪ್ರಾಯ

ಕಳೆದ ಕೆಲ ವರ್ಷಗಳಿಂದ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ದೇಶಿಯವಾಗಿ ಅತಿಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ ವಾಣಿಜ್ಯ ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಶೇ.60ರಷ್ಟು ಯಶಸ್ಸು ಸಾಧಿಸುವುದರಲ್ಲಿ ಯಾವುದೇ ಅನುಮಾವಿಲ್ಲ.

Most Read Articles

Kannada
English summary
Read in Kannada about Ashok Leyland Achieves Highest Ever Q1 Market Share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X