ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸುವ ಮೂಲಕ ತನ್ನ ಎಲ್ಲ ಪ್ರಕಾರದ ವಾಹನಗಳನ್ನು ಬಿಎಸ್ 6 ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಿದೆ.

By Praveen

2020ರ ವೇಳೆಗೆ ಭಾರತೀಯ ಆಟೋ ಉದ್ಯಮದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕಡ್ಡಾಯವಾಗಿರಲಿದ್ದು, ಈ ಸಂಬಂಧ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಬೃಹತ್ ಯೋಜನೆ ರೂಪಿಸುವ ಮೂಲಕ ತನ್ನ ಎಲ್ಲ ಪ್ರಕಾರದ ವಾಹನಗಳನ್ನು ಬಿಎಸ್ 6 ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಲಿದೆ.

ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಈ ಹಿಂದೆ ಬಿಎಸ್ 3 ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದಲೇ ಬಿಎಸ್ 4 ಮೇಲ್ಪಟ್ಟ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಆದೇಶಿಸಿದ್ದು, 2020ರ ವೇಳೆಗೆ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಿದೆ.

ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಹೀಗಾಗಿ ಡೆಡ್‌ ಲೈನ್‌ಗೂ ಮುನ್ನವೇ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಜಪಾನ್ ಮೂಲದ ಪ್ರತಿಷ್ಠಿತ ಆಟೋ ಉತ್ಪಾದನಾ ಸಂಸ್ಥೆಯಾದ ಹಿನೋ ಮೋಟಾರ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

Recommended Video

2017 Ford EcoSport Facelift | First Drive Review - DriveSpark
ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಈ ಮೂಲಕ ದೇಶಿಯ ಮಾರುಕಟ್ಟೆ ಅಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಗೂ ತನ್ನ ವಾಣಿಜ್ಯ ವಾಹನಗಳನ್ನು ರಫ್ತು ಮಾಡಲಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ನಿರ್ಮಾಣ ಮಾಡಲಿದೆ.

ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಏನಿದು ಬಿಸ್ 6?

ಹೌದು... ಇದು ಪ್ರತಿಯೊಬ್ಬರಿಗೂ ಮನಸ್ಸಿನಲ್ಲೂ ಮೂಡಬಹುದಾದ ಸಾಮಾನ್ಯ ಪ್ರಶ್ನೆ. ಯಾಕಂದ್ರೆ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳು ಪರಿಸರಕ್ಕೆ ಪೂರಕವಾದ ವೈಶಿಷ್ಟ್ಯತೆಗಳನ್ನು ಹೊಂದಿರುವುದಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ಹಿನ್ನೆಲೆ ಇಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಇನ್ನು ಯುರೋಪ ರಾಷ್ಟ್ರಗಳಲ್ಲಿ ಯುರೋ 6 ಎಂಜಿನ್ ಪ್ರೇರಿತ ವಾಹನಗಳು ಈಗಾಗಲೇ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2020ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮವನ್ನು ಕಡ್ಡಾಯ ಜಾರಿಗೊಳಿಸಲಿವೆ.

ಡೆಡ್ ಲೈನ್‌ಗೂ ಮುನ್ನವೇ ಬಿಎಸ್ 6 ವಾಹನಗಳ ನಿರ್ಮಾಣಕ್ಕೆ ಮುಂದಾದ ಅಶೋಕ್ ಲೈಲ್ಯಾಂಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2020ರ ವೇಳೆಗೆ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಹೊಸದೊಂದು ನಿಯಮವು ಜಾರಿಯಾಗಲಿದ್ದು, ಬಿಎಸ್ 6 ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ. ಹೀಗಾಗಿ ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಅಶೋಕ್ ಲೈಲ್ಯಾಂಡ್ ಹೆಚ್ಚು ಉತ್ಸುಕವಾಗಿದೆ ಎನ್ನಬಹುದು.

ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

Most Read Articles

Kannada
English summary
Read in Kannada about Ashok-Leyland & Hino Motors Renew Partnership For Euro VI Engine Development.
Story first published: Tuesday, November 28, 2017, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X