ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಬ್ರಿಟಿಷ್ ಐಷಾರಾಮಿ ಸ್ಪೋರ್ಟ್ಸ್ ಕಾರ್ ಉತ್ಪಾದಕ ಆಸ್ಟನ್ ಮಾರ್ಟಿನ್ ತನ್ನ ಡ್ರಾಪ್-ಟಾಪ್ ವೊಲಾಂಟೆ ಆವೃತ್ತಿಯ ಅನಾವರಣದೊಂದಿಗೆ ಡಿಬಿ11 ಶ್ರೇಣಿಯನ್ನು ವಿಸ್ತರಿಸಿದೆ.

ಬ್ರಿಟಿಷ್ ಐಷಾರಾಮಿ ಸ್ಪೋರ್ಟ್ಸ್ ಕಾರ್ ಉತ್ಪಾದಕ ಆಸ್ಟನ್ ಮಾರ್ಟಿನ್ ತನ್ನ ಡ್ರಾಪ್-ಟಾಪ್ ವೊಲಾಂಟೆ ಆವೃತ್ತಿಯ ಅನಾವರಣದೊಂದಿಗೆ ಡಿಬಿ11 ಶ್ರೇಣಿಯನ್ನು ವಿಸ್ತರಿಸಿದೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಆಸ್ಟನ್ ಮಾರ್ಟಿನ್ ಹೇಳುವಂತೆ ಡಿಬಿ11 ವೊಲಾಂಟೆ ಆವೃತಿಯೂ ಕಂಪೆನಿಯ ಕ್ರೀಡಾ ಡ್ರಾಪ್-ಟಾಪ್ ಮಾದರಿಯಾಗಿದೆ. ಆಎಂಜಿ ಮೂಲದ ವಿ8 ಎಂಜಿನ್ ಆಯ್ಕೆಯೊಂದಿಗೆ ಈ ಹೊಸ ಕಾರುಗಳನ್ನು ಶಕ್ತಗೊಳಿಸಲು ಕಂಪನಿ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಆದಷ್ಟು ಹಗುರವಾಗಿರುವ ವಾಹನವನ್ನು ತಯಾರು ಮಾಡುವ ಕಡೆ ಸಂಸ್ಥೆ ಹೆಚ್ಚು ಗಮನ ಹರಿಸಿದ್ದು, ದೊಡ್ಡದಾದ ವಿ12 ಡಿಬಿ11 ವೊಲಾಂಟೆ ಬದಲಿಗೆ ವಿ8 ಎಂಜಿನ್ ಅಳವಡಿಕೆ ಮಾಡುವ ಬಗ್ಗೆ ಖಚಿತಪಡಿಸಿದೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

"ದೊಡ್ಡದಾಗಿರುವ ವಿ12 ಎಂಜಿನ್ ಚಾಲಿತ ಮಾದರಿಯ ಬಗ್ಗೆ ಪ್ರಸ್ತುತವಾಗಿ ಯಾವುದೇ ಪ್ರೆಶ್ನೆಯೂ ಸಹ ಉದ್ಭವಿಸುವುದಿಲ್ಲ, ಆದರೆ ನಂತರದ ಹಂತದಲ್ಲಿ ಇದನ್ನು ಸೇರಿಸಲಾಗುತ್ತದೆ" ಎಂಬ ಮಾಹಿತಿಯನ್ನು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಡಿಬಿ11 ಕೂಪ್ ಮತ್ತು ವೊಲಾಂಟೆ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಹಾರ್ಡ್-ಟಾಪ್ ಮಾದರಿಯಲ್ಲಿ ಇರುವ ಏರೋಬ್ಲೇಡ್‌ಗಳ ಅನುಪಸ್ಥಿತಿ ಎನ್ನಬಹುದು. ಸಿ-ಪಿಲ್ಲರ್ ಅಡಿಪಾಯದಲ್ಲಿ ಏರೋಬ್ಲೇಡ್‌ಗಳನ್ನು ಡಿಬಿ11 ಕೂಪ್ ಪಡೆಯಲಿದೆ, ಆದರೆ ವೊಲಾಂಟೆ ಸಿ-ಪಿಲ್ಲರ್‌ಗಳನ್ನು ಪಡೆಯುವುದಿಲ್ಲ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಮುಂಭಾಗದ ವಿನ್ಯಾಸದಲ್ಲಿ, ಡಿಬಿ11 ವೊಲಾಂಟೆ ಸಿಂಗಲ್-ಪೀಸ್ ಅಲ್ಯೂಮಿನಿಯಂ ಬಾನೆಟ್ ಮತ್ತು ನವೀನ 'ಕ್ರೂಲಿಕ್' ವಾಯುಬಲದ ವೈಜ್ಞಾನಿಕ ವೈಶಿಷ್ಟ್ಯವನ್ನು ಹೊಂದಿದೆ. ಹಿಂಭಾಗದ ಸೀಟುಗಳು ಹೊಸ ಮರದ ಅಥವಾ ಕಾರ್ಬನ್ ಫೈಬರ್ ಪ್ಯಾನೆಲ್ ಪಡೆಯಲಿವೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ, ಹೊಸದಾಗಿ ವಿನ್ಯಾಸಗೊಳಿಸಿದ ರೂಫ್ ಮತ್ತು ಮಡಿಸುವ ಕಾರ್ಯ ವಿಧಾನವನ್ನು ಪಡೆಯುತ್ತದೆ. ಮೃದುವಾದ ಮೇಲ್ಭಾಗವು ಎಂಟು ಪದರಗಳನ್ನು ಒಳಗೊಂಡಿದೆ ಮತ್ತು 14 ಸೆಕೆಂಡುಗಳಲ್ಲಿ ಮಡಚಿಕೊಳ್ಳುತ್ತದೆ ಮತ್ತು ಕೇವಲ 16 ಸೆಕೆಂಡ್‌ಗಳಲ್ಲಿ ತೆರೆದುಕೊಳ್ಳುತ್ತದೆ. ಮೇಲ್ಛಾವಣಿಯು ಕೆಂಪು, ಕಪ್ಪು, ಬೆಳ್ಳಿ ಅಥವಾ ಬೂದು ಬಣ್ಣದ ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ.

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಆವೃತಿ ಅನಾವರಣ

ಆಸ್ಟನ್ ಮಾರ್ಟಿನ್ ಡಿಬಿ11 ವೊಲಾಂಟೆ ಕಾರು, 4-ಲೀಟರ್ ಡುಯಲ್-ಟರ್ಬೊ ವಿ8 ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 695 ಎನ್ಎಂ ತಿರುಗುಬಲದಲ್ಲಿ 503 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು ಹಿಂಭಾಗದ ಚಕ್ರಗಳಿಗೆ ಶಕ್ತಿ ಕಳುಹಿಸುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

Most Read Articles

Kannada
English summary
British luxury sports car manufacturer Aston Martin has expanded its DB11 range with the unveiling of the drop-top Volante version.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X