Just In
- 42 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 46 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 48 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 58 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಪಾಟ್ ಟೆಸ್ಟಿಂಗ್ ನಡೆಸಿದ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್
ಡೈಮ್ಲರ್ ಎಜಿ ಅಧೀನತೆಯಲ್ಲಿರುವ ಜಪಾನ್ ಮೂಲದ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಭಾರತದಲ್ಲಿ ಸೂಪರ್ ಗ್ರೇಟ್ ಟ್ರಕ್ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದಕ್ಕೂ ಮುನ್ನ ಸ್ಪಾಟ್ ಟೆಸ್ಟಿಂಗ್ ನಡೆಸಿದೆ.
ಜರ್ಮನಿಯ ಡೈಮ್ಲರ್ ಎಜಿ ಅಧೀನತೆಯಲ್ಲಿರುವ ಜಪಾನ್ ಮೂಲದ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಭಾರತದಲ್ಲಿ ನ್ಯೂ ಜನರೇಷನ್ ಸೂಪರ್ ಗ್ರೇಟ್ ಟ್ರಕ್ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದಕ್ಕೂ ಮುನ್ನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಈ ಮಧ್ಯೆ ತಮಿಳುನಾಡು ಪಾಸಿಂಗ್ ಹೊಂದಿರುವ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್ವೊಂದು ಹೊಸೂರು ಬಳಿ ಕಾಣಿಸಿಕೊಂಡಿದ್ದು, ನ್ಯೂ ಜನರೇಷನ್ ಟೆಕ್ನಾಲಜಿ ಪ್ರೇರಿತ ಅಂಶಗಳನ್ನು ಹೊಸ ಮಾದರಿಯ ಫ್ಯೂಸೊ ಟ್ರಕ್ನಲ್ಲಿ ಪರಿಚಯಿಸಲಾಗುತ್ತಿದೆ.
ಸೂಪರ್ ಗ್ರೇಟ್ ಫ್ಯೂಸೊ ಟ್ರಕ್ಗಳು ಡಬಲ್ ರಿರ್ ಚಕ್ರಗಳನ್ನು ಹೊಂದಿದ್ದು, ಭಾರೀ ಗಾತ್ರದ ಸರಕು ಸೇವೆಗಳಿಗೆ ಅನುಕೂಲಕರವಾಗುವಂತೆ ಹೊಸ ಉತ್ಪನ್ನಗಳನ್ನು ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಅಭಿವೃದ್ಧಿಗೊಳಿಸಿದೆ.
ಈಗಾಗಲೇ ಮಿಟ್ಸುಬಿಸಿ ಫ್ಯೂಸೊ ಟ್ರಕ್ ಆಂಡ್ ಬಸ್ ಕಾರ್ಪೋರೇಷನ್ ಸಂಸ್ಥೆಯು ಜಪಾನ್ ಮಾರುಕಟ್ಟೆಯಲ್ಲಿ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್ ಬಿಡುಗಡೆಗೊಳಿಸಿದ್ದು, ಸದ್ಯ ಭಾರತದಲ್ಲೂ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೊಸ ಮಾದರಿಗಳನ್ನು ವಿನ್ಯಾಸಗೊಳಿಸುತ್ತಿದೆ.
ಜಪಾನ್ ಬಿಡುಗಡೆಯಾಗಿರುವ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್ ಮಾದರಿಯೂ 10.7-ಲೀಟರ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 12-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್, ಹೊಂದಿವೆ.
ಇನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಡೈಮ್ಲರ್ ಸಂಸ್ಥೆಯೇ ಫ್ಯೂಸೊ ಟ್ರಕ್ಗಳ ಉತ್ಪಾದನೆ ಉಸ್ತುವರಿ ವಹಿಸಿಕೊಂಡಿರುತ್ತದೆ. ಆದ್ರೆ ಇದೀಗ ಭಾರತದಲ್ಲಿ ಫ್ಯೂಸೊ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಭಾರತ್ ಬೆಂಝ್ ಸಂಸ್ಥೆಯು ಹೊಸ ಟ್ರಕ್ ಬಿಡುಗಡೆಯ ಹೊಣೆ ಹೊತ್ತಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಉತ್ತಮ ಕಾರ್ಯಕ್ಷಮತೆ ಟ್ರಕ್ ಮಾದರಿಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಸೂಪರ್ ಗ್ರೇಟ್ ಫ್ಯೂಸೊ ಟ್ರಕ್ ಬಿಡುಗಡೆಯಾಗುತ್ತಿರುವುದು ಭಾರೀ ಗಾತ್ರದ ಸರಕು ಸಾಗಾಟ ಪ್ರಕ್ರಿಯೆಗಳಿಗೆ ಸಹಕಾರಿಯಾಗಲಿವೆ.