Just In
- 8 min ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 13 min ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 1 hr ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 1 hr ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಜುರಿಗೂ ಬೇಡವಾಗಿರುವ ಮಾರ್ಕೊಪೋಲೊ ಬಸ್ಸುಗಳನ್ನು ಎಲೆಕ್ಟ್ರಿಕ್ ಮಾಡ್ತೀವಿ ಎಂದ ಬಿಎಂಟಿಸಿ
ತಾಂತ್ರಿಕ ದೋಷದ ಕಾರಣದಿಂದಾಗಿ ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಟಾಟಾ ಸಂಸ್ಥೆಯ ಮಾರ್ಕೊಪೋಲೊ ಬಸ್ಗೆ ಹೊಸ ರೂಪ ನೀಡಲು ಬಿಎಂಟಿಸಿ ಮುಂದಾಗಿದೆ.
ತಾಂತ್ರಿಕ ದೋಷದ ಕಾರಣದಿಂದಾಗಿ ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಟಾಟಾ ಸಂಸ್ಥೆಯ ಮಾರ್ಕೊಪೋಲೊ ಬಸ್ಗೆ ಹೊಸ ರೂಪ ನೀಡಲು ಬಿಎಂಟಿಸಿ ಮುಂದಾಗಿದೆ.
ಹೌದು, ಕಳೆದ ಸಾಕಷ್ಟು ತಿಂಗಳಿನಿಂದ ಬಿಎಂಟಿಸಿ ಡಿಪೋಗಳಲ್ಲಿ ಹಾಳಾದ ಸ್ಥಿತಿಯಲ್ಲಿ ನಿಂತಿರುವ 98 ಮಾರ್ಕೊಪೋಲೊ ಬಸ್ಗಳಿಗೆ ಎಲೆಕ್ಟ್ರಿಕ್ ಸ್ಪರ್ಶ ನೀಡುವ ಕಾರ್ಯಕ್ಕೆ ಬಿಎಂಟಿಸಿ ಸಂಸ್ಥೆ ಅಸ್ತು ಎಂದಿದೆ. ಗುಜರಿಗೂ ಬೇಡವಾಗಿದ್ದ ಬಸ್ಗಳು ತಾಂತ್ರಿಕ ಬದಲಾವಣೆಯೊಂದಿಗೆ ಮತ್ತೆ ರಸ್ತೆಗಿಳಿಯಲಿವೆ ಎನ್ನಲಾಗಿದೆ.
ಬಿಎಂಟಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಆಶಯದೊಂದಿಗೆ ದುಬಾರಿ ಮಾರ್ಕೊಪೋಲೊ ಬಸ್ಗಳನ್ನು ರಸ್ತೆಗಿಳಿಸಿತ್ತು. ಆದರೆ ಈ ಬಸ್ನ ಇಂಜಿನ್ನಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಬಿಎಂಟಿಸಿಗೆ 30 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಟಾಟಾ ಬಸ್ಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ 9 ಲಕ್ಷ ಕಿ.ಮಿ ಸಂಚರಿಸದಿದ್ದರೂ 2015ರ ಅಂತ್ಯದಲ್ಲಿ ಗುಜರಿಗೆ ಹಾಕಲು ಸರ್ಕಾರ ಸೂಚಿಸಿತ್ತು.
ಆ ನಂತರ ಈ ಬಸ್ಗಳನ್ನು ಮಾರಾಟ ಮಾಡಲೂ ಪ್ರಯತ್ನಿಸಲಾಗಿತ್ತು. ಅದೂ ಫಲ ನೀಡದ ಕಾರಣ ಏನೂ ಉಪಯೋಗಕ್ಕೆ ಬಾರದೆ ಮೂಲೆ ಸೇರಿರುವ ಮಾರ್ಕೊಪೋಲೊ ಬಸ್ಗಳನ್ನೇ ಎಲೆಕ್ಟ್ರಿಕ್ ಬಸ್ಗಳಾಗಿ ಪರಿವರ್ತಿಸಲು ಮುಂದಾಗಿದೆ. ಇದು ಸಾಧ್ಯವಾಗದಿದ್ದರೆ ಈ ಬಸ್ಗಳನ್ನು ಟಾಟಾ ಕಂಪನಿಗೇ ವಾಪಸ್ ನೀಡಲು ಚಿಂತನೆ ನಡೆಸಿದೆ.
ಭಾರತ ಸರ್ಕಾರದ ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮಾನ್ಯುಫಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಫೇಮ್ ಯೋಜನೆಯಡಿ 100ಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದಲ್ಲಿ ಪಡೆಯಲು ಬಿಎಂಟಿಸಿ ನಿರ್ಧರಿಸಿದೆ.
2016-17ನೇ ಸಾಲಿನಲ್ಲಿ 260 ಕೋಟಿ ರೂ. ನಷ್ಟದಲ್ಲಿರುವ ಬಿಎಂಟಿಸಿ ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿರುವುದು ಏಕೆ? ಎಂಬ ಪ್ರೆಶ್ನೆ ಕಾಡುವುದು ಸತ್ಯ.