ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಬಹುನಿರೀಕ್ಷಿತ ಬಿಎಂಡಬ್ಲ್ಚು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಸ್ಪೋರ್ಟ್ ಆವೃತ್ತಿಗಳಲ್ಲೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದುವ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯುವಂತೆ ಮಾಡಿದೆ.

By Praveen

ಎಕ್ಸ್‌ಶೋರಂ ಬೆಲೆಗಳ ಪ್ರಕಾರ 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರಿಗೆ ರೂ. 49.40 ಲಕ್ಷ ನಿಗದಿಗೊಳಿಸಲಾಗಿದ್ದು, ಈ ಹಿಂದಿನ ಬಿಎಂಡಬ್ಲ್ಯು ಎಂ3 ಆವೃತ್ತಿಯ ವಿನ್ಯಾಸ ಪ್ರೇರಣೆಯೊಂದಿಗೆ ಹೊಸ ಕಾರಿನ ವಿನ್ಯಾಸಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಸ್ಪೋರ್ಟ್ ಕಾರು ಪ್ರಿಯರಿಗಾಗಿಯೇ 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಆವೃತ್ತಿಯಲ್ಲಿ ವಿಶೇಷ ವಿನ್ಯಾಸಗಳನ್ನು ನೀಡಲಾಗಿದ್ದು, ಹೊಸದಾದ ಬ್ಲ್ಯಾಕ್ ಬಣ್ಣದ ಗ್ರಿಲ್‌ಗಳನ್ನು ಪಡೆದುಕೊಂಡಿರುವುದು ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಲ್ಫಿನೆ ವೈಟ್, ನಾನ್ ಮೆಟಾಲಿಕ್ ಕಲರ್, ಎಸ್ಟ್ರಿಲ್ ಬ್ಲ್ಯೂ ಬಣ್ಣದಲ್ಲಿ ಲಭ್ಯವಿದ್ದು, ಎಂ3 ಸ್ಪೋರ್ಟ್ ಆವೃತ್ತಿಯಂತೆಯೇ 18-ಇಂಚಿನ ಚಕ್ರಗಳನ್ನು ಹೊಂದಿದೆ. ಹೀಗಾಗಿ ಒಳವಿನ್ಯಾಸಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಸ್ಪೋರ್ಟ್ ಲುಕ್ ಅದ್ಭುತವಾಗಿವೆ.

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

2.0-ಲೀಟರ್ ನಾಲ್ಕು ಸಿಲಿಂಡರ್‌ನ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು, 250-ಬಿಎಚ್‌ಪಿ ಹಾಗೂ 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಮೈಲೇಜ್

ಇಂಧನ ಕಾರ್ಯಕ್ಷಮತೆ ಹಿಂದಿನ ಸ್ಪೋರ್ಟ್ ಆವೃತ್ತಿಗಳಿಂತ ಹೊಸ ಮಾದರಿಯು ಉತ್ತಮವಾಗಿದ್ದು ಪ್ರತಿ ಲೀಟರ್ ಪೆಟ್ರೋಲ್‌ಗೆ 15.34 ಕಿಮಿ ಮೈಲೇಜ್ ಹೊಂದಿವೆ. ಈ ಮೂಲಕ 6.1 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗದಲ್ಲಿ ಸಂಚರಿಸುತ್ತವೆ.

ಓದಿರಿ-

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಸುರಕ್ಷಾ ವಿಧಾನಗಳು

330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಆವೃತ್ತಿಗಳಲ್ಲಿ ಕ್ರೂಸ್ ಕಂಟ್ರೋಲರ್ ಒದಗಿಸಲಾಗಿದ್ದು, ಸ್ಪ್ಯಾಂಡರ್ಡ್ ಬ್ರೇಕಿಂಗ್ ಸಿಸ್ಟಂ, ಪವರ್‌ಫುಲ್ ಎಂಜಿನ್, ಸಿಕ್ಸ್ ಏರ್‌ಬ್ಯಾಗ್, ಎಬಿಎಸ್, ತುರ್ತು ಚಕ್ರಗಳು, ಕ್ರ್ಯಾಶ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ.

ಬಿಎಂಡಬ್ಲ್ಯು 330ಐ ಗ್ರ್ಯಾನ್ ಟೂರಿಸ್ಮೊ ಎಂ ಸ್ಪೋರ್ಟ್ ಕಾರು ಬಿಡುಗಡೆ

ಡ್ರೈವ್ ಸ್ವಾರ್ಕ್ ಅಭಿಪ್ರಾಯ

ಹಿಂದೆಂದಿಗಿಂತಲೂ ಸ್ಪೋರ್ಟ್ ಆವೃತ್ತಿಗಳಲ್ಲಿ ಗುಣಮಟ್ಟದ ಕಾರು ಆವೃತ್ತಿಯನ್ನು ಹೊರತಂದಿರುವ ಬಿಎಂಡಬ್ಲ್ಯು ಸಂಸ್ಥೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಯಾವ ರೀತಿ ಬೇಡಿಕೆ ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Trending On Drivespark Kannada

Most Read Articles

Kannada
English summary
Read in Kannada about BMW 330i Gran Turismo M Sport Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X