ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಭಾರತೀಯ ಆಟೋ ಉದ್ಯಮದಲ್ಲೂ ಕೂಡಾ ಹಲವು ಬದಲಾವಣೆಗಳನ್ನು ಕಂಡಿದ್ದು, ಕೆಲವು ಜನಪ್ರಿಯ ಕಾರುಗಳು ತಮ್ಮ ಉತ್ಪಾದನೆ ಕಡಿತಗೊಳಿಸುತ್ತಿರುವ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತಿದೆ.

By Praveen

ಇನ್ನೇರಡು ದಿನ ಕಳೆದ್ರೆ ಹೊಸ ವರುಷ ಬರುತಿದೆ. ಹಾಗಂತ ಈ ಹಿಂದೆ ಆದ ಕೆಲವು ಮಹತ್ವದ ಬದಲಾವಣೆಗಳನ್ನು ಮರೆಯಲು ಸಾಧ್ಯವಿಲ್ಲ. ಅಂತಯೇ ಭಾರತೀಯ ಆಟೋ ಉದ್ಯಮದಲ್ಲೂ ಕೂಡಾ ಹಲವು ಬದಲಾವಣೆಗಳನ್ನು ಕಂಡಿದ್ದು, ಕೆಲವು ಜನಪ್ರಿಯ ಕಾರುಗಳು ತಮ್ಮ ಉತ್ಪಾದನೆ ಕಡಿತಗೊಳಿಸುತ್ತಿರುವ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

'ಹಳೆಯ ಸವಿನೆನಪುಗಳೊಂದಿಗೆ ಹೊಸತನವನ್ನು ಅಳವಡಿಸಿಕೊಳ್ಳಬೇಕು' ಎಂಬ ಮಾತಿದೆ. ಹಾಗೆಯೇ ಆಟೋ ಉದ್ಯಮವು ಕೂಡಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಜೊತೆಗೆ ಹಳೆಯ ಮಾದರಿಯೊಂದಿಗೆ ಹೊಸತನ ಪಡೆಯುತ್ತಲೇ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರ ಮಾಡುತ್ತವೆ.

Recommended Video

Bangalore Bike Accident At Chikkaballapur Near Nandi Upachar - DriveSpark
ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಹೀಗಾಗಿ ಭಾರತದಲ್ಲಿ ಜನಪ್ರಿಯಗೊಂಡ ಕೆಲವು ಕಾರುಗಳನ್ನು ಉತ್ಪಾದನೆಯಿಂದ ಕೈ ಬಿಡಲಾಗುತ್ತಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಮಾರುಕಟ್ಟೆಯಲ್ಲಿನ ಸ್ಪರ್ಧೆಗೆ ನೆಲಕಚ್ಚಿದ ಕೆಲವು ಕಾರುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಮಾರುತಿ ಸುಜುಕಿ ರಿಡ್ಜ್

ಭಾರತದ ನಂ.1 ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿಯು ಕಳೆದ 2009 ರಿಡ್ಜ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿ ಬೇಡಿಕೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿ ರಿಡ್ಜ್‌ಗೆ ಗುಡ್ ಬೈ ಹೇಳುತ್ತಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಹ್ಯುಂಡೈ ಐ10

ಉತ್ಪಾದನೆಗೆ ಗುಡ್ ಬೈ ಪಟ್ಟಿಯಲ್ಲಿ ಐ10 ಸೇರ್ಪಡೆಯಾಗಿದೆ. 2007ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿ ಜನಪ್ರಿಯತೆ ಪಡೆದುಕೊಂಡಿದ್ದ ಐ10, 2013ರಲ್ಲಿ ಹೊಸ ಮಾದರಿಯೊಂದಿಗೆ ಬಿಡುಗಡೆಯಾಗಿತ್ತು. ಆದ್ರೆ ಕಳೆದ 1 ವರ್ಷದಿಂದ ಎಂಟ್ರಿ ಲೆವೆಲ್ ಕಾರು ಮಾರಾಟದಲ್ಲಿ ಸಂಪೂರ್ಣ ನೆಲಕಚ್ಚಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ರೆನಾಲ್ಟ್ ಪಲ್ಸ್

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಈ ಹಿಂದೆ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಪಲ್ಸ್ ಭರ್ಜರಿ ಮಾರಾಟ ಮಾಡಿತ್ತು. ಆದ್ರೆ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಸುರಕ್ಷಾ ಸೌಲಭ್ಯವನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಮಾರಾಟ ಕೂಡಾ ಸಂಪೂರ್ಣ ಕುಸಿತ ಕಂಡಿದೆ. ಹೀಗಾಗಿ ಪಲ್ಸ್ ಉತ್ಪಾದನೆಗೆ ರೆನಾಲ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಷೆವರ್ಲೆ ಬಿಟ್

ನಿಮಗೆ ಈಗಾಗಲೇ ಗೊತ್ತಿರುವಂತೆ ಜನರಲ್ ಮೋಟಾರ್ ಭಾರತದಿಂದ ಹೊರಹೊಗಿದ್ದು, ಷೆವರ್ಲೆ ಕಾರುಗಳ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಜನಪ್ರಿಯತೆ ಸಾಧಿಸಿದ್ದ ಬಿಟ್ ಕಾರುಗಳು ಇನ್ನು ಖರೀದಿಸಲು ಲಭ್ಯವಿರುದಿಲ್ಲ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ರೆನಾಲ್ಟ್ ಸ್ಕಾಲಾ

ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಪಲ್ಸ್ ಜೊತೆಗೆ ಸ್ಕಾಲಾ ಸೆಡಾನ್ ಉತ್ಪಾದನೆಯನ್ನು ಕೂಡಾ ರೆನಾಲ್ಟ್ ಕೈಬಿಡುತ್ತಿದೆ. ಇದಕ್ಕೆ ಕಾರಣ ಇಟಿಯಾಸ್, ಡಿಸೈರ್ ಸೆಡಾನ್, ವೆರ್ನಾ ಮಾರಾಟಕ್ಕಿಂತ ಅತಿ ಕಡಿಮೆ ಬೇಡಿಕೆ ಹೊಂದಿದ್ದು, ಕಳೆದ ಅಕ್ಟೋಬರ್‌ನಿಂದ ಸ್ಕಾಲಾ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ತಪ್ಪದೇ ಓದಿ- ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಷೆವರ್ಲೆ ಕ್ರೂಜಿ

ಜಿಎಂ ಮೋಟಾರ್ಸ್ ನಿರ್ಮಾಣದ ಕ್ರೂಜಿ ಸೆಡಾನ್ ಆವೃತ್ತಿಗಳು ಈ ಹಿಂದೆ ಭಾರೀ ಸದ್ದು ಮಾಡಿದ್ದವು. ಆದ್ರೆ ಭಾರತೀಯ ಮಾರುಕಟ್ಟೆಯಿಂದ ಹೊರಹೋದ ಜಿಎಂ ಮೋಟಾರ್ಸ್ ಸಂಸ್ಥೆಯು ಪ್ರಮುಖ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಸ್ಕೋಡಾ ಯೆಟಿ

ಮಧ್ಯಮ ಗಾತ್ರ ಲಗ್ಷುರಿ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಕೂಡಾ ಯೆಟಿ ಎಸ್‌ಯುವಿಯಲ್ಲಿ ಮುಗ್ಗರಿಸಿದೆ. 2010ರಲ್ಲಿ ಬಿಡುಗಡೆಯಾಗಿದ್ದ ಯೆಟಿ ಕಾರು ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ತೀವ್ರ ನೆಲಕಚ್ಚಿತ್ತು.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಹ್ಯುಂಡೈ ಸಾಂತಾ ಫೆ

2010ರ ಅವಧಿಯಲ್ಲಿ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿ ಸಾಂತಾ ಫೆ ಕಾರುಗಳು ಕ್ರೇಟಾ ಮಾರಾಟದಿಂದಲೇ ತೀವ್ರ ಸ್ಪರ್ಧೆ ಎದುರಿಸಿತ್ತು. ಹೀಗಾಗಿ ಫೇಸ್‌ಲಿಫ್ಟ್ ಆವೃತ್ತಿಗಳತ್ತ ಗಮನಹರಿಸಿರುವ ಹ್ಯುಂಡೈ ಇದೀಗ ಸಾಂತಾ ಫೆ ಉತ್ಪಾದನೆಯನ್ನು ನಿಲ್ಲಿಸುತ್ತಿದೆ.

ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಟಾಟಾ ಸಫಾರಿ ಡಿಕೋರ್

1998ರಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿದ್ದ ಸಫಾರಿ ಡಿಕೋರ್ ಎಸ್‌ಯುವಿಗಳು ಇತ್ತೀಚೆಗೆ ತೀವ್ರ ಹಿನ್ನೆಡೆ ಅನುಭವಿಸಿದ್ದವು. ಹೀಗಾಗಿ ಹೆಕ್ಸಾದತ್ತ ಹೆಚ್ಚಿನ ಗಮನಹರಿಸಿರುವ ಟಾಟಾ ಸಂಸ್ಥೆಯು ಸಫಾರಿ ಉತ್ಪಾದನೆಯನ್ನು ಕೊನೆಗೊಳಿಸುತ್ತಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಹೋಂಡಾ ಮೊಬಿಲಿಯೋ

ಹೋಂಡಾ ನಿರ್ಮಾಣದ ಎಂಪಿವಿ ಕಾರು ಎಂದೇ ಖ್ಯಾತಿಯಾಗಿದ್ದ ಮೊಬಿಲಿಯೋ ಇನ್ನು ಖರೀದಿ ಲಭ್ಯವಾಗುದಿಲ್ಲ. ಇದಕ್ಕೆ ಕಾರಣ ಹಲವು. ಸದ್ಯ ಹೋಂಡಾ ಸಂಸ್ಥೆಯು ವಿವಿಧ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗುತ್ತಿರುವ ಮೊಬಿಲಿಯೋ ನಿರ್ಮಾಣಕ್ಕೆ ಗುಡ್ ಬೈ ಹೇಳುತ್ತಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಮಾರುತಿ ಸುಜುಕಿ ಸ್ವಿಫ್ಟ್

2018ರ ಮಾರ್ಚ್ ಅಂತ್ಯಕ್ಕೆ ಮೂರನೇ ತಲೆಮಾರಿನ ಸ್ವಿಫ್ಟ್ ಪರಿಚಯಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು 2ನೇ ತಲೆಮಾರಿನ ಸ್ವಿಫ್ಟ್ ನಿರ್ಮಾಣವನ್ನು ಕೈಬಿಡುತ್ತಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯನ್ ಆಟೋ ಎಕ್ಸ್‌ಪೋ ನಂತರ ಹೊಸ ಕಾರನ್ನು ಬಿಡುಗಡೆ ಮಾಡಲಿದೆ.

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಮಾರುತಿ ಸ್ವಿಫ್ಟ್ ಡಿಜೈರ್

2008ರಲ್ಲಿ ಬಿಡುಗಡೆಯಾಗಿದ್ದ ಸ್ವಿಫ್ಟ್ ಡಿಜೈರ್ ಸೆಡಾನ್ ಆವೃತ್ತಿ ಕೂಡಾ ಪ್ರಯಾಣಿಕ ಕಾರು ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿತ್ತು. ಆದ್ರೆ ಹ್ಯುಂಡೈ ವೆರ್ನಾ ಮತ್ತು ಇಟಿಯಾಸ್ ಪ್ರತಿಸ್ಪರ್ಧೆಯಿಂದ ಇತ್ತೀಚೆಗೆ ತೀವ್ರ ಹಿನ್ನಡೆ ಅನುಭವಿಸಿತ್ತು.

ತಪ್ಪದೇ ಓದಿ- ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಕೇವಲ ಮೇಲಿನ ಕಾರು ಮಾದರಿಗಳಷ್ಟೇ ಅಲ್ಲದೇ 2017ರ ಅವಧಿಯಲ್ಲೇ ಹಲವು ಕಾರುಗಳನ್ನು ಉತ್ಪಾದನೆಯಿಂದ ಕೈಬಿಡಲಾಗಿದ್ದು, ಮುಂಬರುವ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಎಲ್ಲಾ ಕಾರು ಉತ್ಪಾದಕರು ಕೂಡಾ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುವ ತವಕದಲ್ಲಿದ್ದಾರೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Cars Discontinued In India In 2017.
Story first published: Friday, December 29, 2017, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X