Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ..!!
ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಡೆಯುವ ಉದ್ದೇಶದಿಂದ ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡು ಸರ್ಕಾರವು ಚಾಲನೆ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಮೂಲ ಪ್ರತಿ ಹೊಂದಿರುವುದನ್ನ ಕಡ್ಡಾಯಗೊಳಿಸಿದೆ.

ಈ ಹಿಂದೆ ವಿವಿಧ ಅಪಘಾತ ಪ್ರಕರಣಗಳ ಸಂಬಂಧಿಸಿದಂತೆ 9500 ಡ್ರೈವಿಂಗ್ ಲೈಸೆನ್ಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದ ತಮಿಳುನಾಡು ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಾಹನ ಚಾಲನೆ ಸಂದರ್ಭದಲ್ಲಿ ಮೂಲ ಪ್ರತಿ ಹೊಂದುವುದನ್ನು ಕಡ್ಡಾಯ ಮಾಡಿದೆ.

ಇಷ್ಟು ದಿನಗಳ ಕಾಲ ಬಹುತೇಕ ವಾಹನ ಸವಾರರು ಮೂಲ ಪ್ರತಿಗೆ ಬದಲಾಗಿ ನಕಲು ಪ್ರತಿ ಹೊಂದಿರುತ್ತಿದ್ದರು. ಆದ್ರೆ ಅಪರಾಧ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೂಲ ಪ್ರತಿಯನ್ನೇ ಹೊಂದುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ತೆರಬೇಕಿದೆ.

ಅಲ್ಲದೇ ಕಳೆದ ವರ್ಷ ತಮಿಳುನಾಡು ಒಂದರಲ್ಲೇ 13 ಸಾವಿರ ಜನ ಅಪಘಾತದಲ್ಲಿ ದುರ್ಮಕ್ಕಿಡಾಗಿದ್ದು, ಈ ವಿಚಾರವಾಗಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತ್ತು.

ಜೊತೆಗೆ ಅಪರಾಧಗಳ ಸಂಖ್ಯೆಯನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳನ್ನು ಕಠಿಣಗೊಳಿಸಿದ್ದ ತಮಿಳುನಾಡು ಪೊಲೀಸರು ಮೊದಲ ಹಂತದಲ್ಲಿ 9500 ಚಾಲನಾ ಪರವಾಗಿಗೆಗಳನ್ನು ರದ್ದುಗೊಳಿಸಿದ್ದರು.


ಇನ್ನು ತಮಿಳುನಾಡಿನಲ್ಲಿ ಡ್ರೈವಿಂಗ್ ಸಂದರ್ಭ ಲೈಸೆನ್ಸ್ ಹೊಂದುವುದು ಕಡ್ಡಾಯಗೊಳಿಸುತ್ತಿದ್ದಂತೆ ರಾಜ್ಯ ಪೊಲೀಸರು ಕೂಡಾ ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಅಗತ್ಯವೆನಿಸಿದಲ್ಲಿ ಬೆಂಗಳೂರಿನಲ್ಲೂ ಹೊಸ ಕಾನೂನು ಜಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಅಪಘಾತ ಸಂಖ್ಯೆ ತಡೆಯಲು ತಮಿಳುನಾಡು ಸರ್ಕಾರ ಕೈ ಗೊಂಡಿರುವ ಕ್ರಮ ಸೂಕ್ತವಾಗಿದ್ದು, ತ್ವರಿತ ಗತಿಯಲ್ಲಿ ಅದು ಇತರೆ ಪ್ರಮುಖ ನಗರಗಳಲ್ಲೂ ಜಾರಿಗೊಳ್ಳುವ ಅವಶ್ಯಕತೆಯಿದೆ.