ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಭಾರತೀಯ ವಾಣಿಜ್ಯ ವಾಹನ ತಯಾರಕ ಕಂಪೆನಿಯಾದ ಇಚರ್ ಮೋಟಾರ್ಸ್ ದೇಶದಲ್ಲಿ ವಿದ್ಯುತ್ ಚಾಲಿತ ಬಸ್ ಪರಿಚಯಿಸುವ ಯೋಜನೆಯನ್ನು ಬಹಿರಂಗಪಡಿಸಿದೆ.

By Girish

ಭಾರತೀಯ ವಾಣಿಜ್ಯ ವಾಹನ ತಯಾರಕ ಕಂಪೆನಿಯಾದ ಇಚರ್ ಮೋಟಾರ್ಸ್ ದೇಶದಲ್ಲಿ ವಿದ್ಯುತ್ ಚಾಲಿತ ಬಸ್ ಪರಿಚಯಿಸುವ ಯೋಜನೆಯನ್ನು ಬಹಿರಂಗಪಡಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಹೊಸ ವಿದ್ಯುತ್ ವಾಹನವು ನಗರದೊಳಗೆ ಸಂಚರಿಸುವ ವಾಹನವಾಗಿರಲಿದ್ದು, ಆದರೆ ಈ ವಾಹನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ನೀಡಿಲ್ಲ. ವಿದ್ಯುತ್ ಬಸ್ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಕಂಪೆನಿಯು ಶೀಘ್ರದಲ್ಲೇ ವಿವರವನ್ನು ಬಹಿರಂಗಪಡಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ತಂತ್ರಜ್ಞಾನದ ಅಭಿವೃದ್ಧಿ ಮತ್ತು ಹಂಚಿಕೆಯ ವಿಚಾರದಲ್ಲಿ ಇಚರ್ ಮೋಟಾರ್ಸ್ ಮತ್ತು ವೊಲ್ವೊ ಟ್ರಕ್ ಕಂಪನಿಗಳ ಒಪ್ಪಂದ ಮಾಡಿಕೊಂಡಿದ್ದು, ಎರಡೂ ಕಂಪನಿಗಳು ಸೇರಿ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾಡಲಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್ ಸೇರಿದಂತೆ, ಹಲವಾರು ವಾಹನ ತಯಾರಕ ಕಂಪನಿಗಳೂ ಸಹ ಮಾಲಿನ್ಯವನ್ನು ಕಡಿಮೆಗೊಳಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆಗೊಳಿಸಲು ವಿದ್ಯುತ್ ವಾಹನಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

"ನಗರ ಮಾರುಕಟ್ಟೆಗೆ ಸರಿಹೊಂದುವ ವಿದ್ಯುತ್ ಬಸ್‌ಗಳ ಅಭಿವೃದ್ಧಿಯ ಕಡೆ ಕಂಪನಿಯು ಕೆಲಸ ಮಾಡುತ್ತಿದೆ" ಎಂದು ಇಚರ್ ಮೋಟಾರ್ಸ್ ಎಂಟರ್‌‌ಪ್ರೈಸೆಸ್ ಕಂಪನಿಯ ಲೈಟ್ ಅಂಡ್ ಮೀಡಿಯಮ್ ಡ್ಯೂಟಿ ಟ್ರಕ್ಸ್ ಮತ್ತು ಬಸ್ಸುಗಳು ಹಾಗು ವಿಇ ಕಮರ್ಷಿಯಲ್ ವೆಹಿಕಲ್ಸ್ ವಿಭಾಗದ ಉಪಾಧ್ಯಕ್ಷ ಶ್ಯಾಮ್ ಮಲ್ಲರ್ ತಿಳಿಸಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಇಚರ್ ಪಾಲುದಾರ ಸಂಸ್ಥೆಯಾದ ವೊಲ್ವೊ ಕಂಪನಿಯು 2016ರಲ್ಲಿ ನವಿ ಮುಂಬೈನ ಆಯ್ದ ಮಾರ್ಗಗಳಲ್ಲಿ ಡೀಸೆಲ್ ಮತ್ತು ಎಲೆಕ್ಟ್ರಿಕ್ ಸಹಾಯದಿಂದ ಚಲಿಸುವ ಹೈಬ್ರಿಡ್ ಬಸ್‌ಗಳನ್ನು ಪರಿಚಯಿಸಿತ್ತು. ಈಗ ಇಚರ್ ಮೋಟಾರ್ಸ್ ಕಂಪನಿಯೂ ಸಹ ವಿದ್ಯುತ್ ವಾಹನಗಳ ಅಭಿವೃದ್ಧಿಗೆ ಕೈಜೋಡಿಸಿರುವುದು ಮೆಚ್ಚುವ ಸಂಗತಿಯಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಆರಂಭಿಸಲು, ಇಚರ್ ಮೋಟಾರ್ಸ್ ಸಂಸ್ಥೆಯು ಸರ್ಕಾರದ ಬೆಂಬಲವನ್ನು ನಿರೀಕ್ಷಿಸುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳ ಮೇಲೆ ಕಡಿಮೆ ದರದ ಜಿಎಸ್‌ಟಿ ವಿಧಿಸಬೇಕು ಎಂದು ಕಂಪನಿಯ ಉಪಾಧ್ಯಕ್ಷರು ಕೇಳಿಕೊಂಡಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯಿಸಲು ಮುಂದಾದ ಇಚರ್ ಮೋಟಾರ್ಸ್

ಪ್ರಸ್ತುತ, ಇಚರ್ ಮೋಟರ್ಸ್ ಕಂಪನಿಯು ಲೈಟ್ ಮತ್ತು ಮೀಡಿಯಂ ಡ್ಯೂಟಿ(ಎಲ್ಎಂಡಿ) ವಿಭಾಗದಲ್ಲಿ ಬಲವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಲೈಟ್ ಕಮರ್ಷಿಯಲ್ ವೆಹಿಕಲ್(LCV) ವಿಭಾಗಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ, 'ಕಂಪೆನಿಯು ಈ ರೀತಿಯ ಯಾವುದೇ ಯೋಜನೆ ಹೊಂದಿಲ್ಲ' ಎಂದು ಮಲ್ಲೆರ್ ಹೇಳಿದರು.

Most Read Articles

Kannada
English summary
Indian commercial vehicle manufacturer Eicher Motors has revealed its plan to introduce electric bus in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X