ಜಿಎಸ್‌ಟಿ ಸೆಸ್ ಹೆಚ್ಚಳ- ಎಸ್‌ಯುವಿ, ಸೆಡಾನ್ ಕಾರುಗಳ ಖರೀದಿ ಇನ್ಮುಂದೆ ದುಬಾರಿ

ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.25 ಕ್ಕೆ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇನ್ಮುಂದೆ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಕಾರುಗಳ ಖರೀದಿ ದುಬಾರಿಯಾಗಲಿದೆ.

By Praveen

ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.25 ಕ್ಕೆ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇನ್ಮುಂದೆ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಕಾರುಗಳ ಖರೀದಿ ದುಬಾರಿಯಾಗಲಿದೆ.

ಜಿಎಸ್‌ಟಿ ಸೆಸ್ ಹೆಚ್ಚಳ-ಎಸ್‌ಯುವಿ, ಸೆಡಾನ್ ಕಾರುಗಳ ಬೆಲೆಗಳು ದುಬಾರಿ

ಐಷಾರಾಮಿ ಹಾಗೂ ಮಧ್ಯಮ ಗಾತ್ರದ ಎಸ್‌ಯುವಿ, ಸೆಡಾನ್ ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.25 ಕ್ಕೆ ಏರಿಕೆ ಮಾಡಲು ಸಚಿವ ಸಂಪುಟದ ಸುಗ್ರೀವಾಜ್ಞೆ ಹೊರಡಿಸಿದ್ದು, ಸದ್ಯ ಚಾಲ್ತಿಯಲ್ಲಿರುವ ಸೆಸ್ ಶೇ.15ರಿಂದ ಶೇ.25ಕ್ಕೆ ಏರಿಕೆಯಾಗಲಿದೆ.

ಜಿಎಸ್‌ಟಿ ಸೆಸ್ ಹೆಚ್ಚಳ-ಎಸ್‌ಯುವಿ, ಸೆಡಾನ್ ಕಾರುಗಳ ಬೆಲೆಗಳು ದುಬಾರಿ

ಹೀಗಾಗಿ ಪ್ರತಿ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಬೆಲೆಗಳು 1.1 ಲಕ್ಷದಿಂದ 3 ಲಕ್ಷದ ತನಕ ಬೆಲೆ ಹೆಚ್ಚಳವಾಗಲಿದ್ದು, ಜನಪ್ರಿಯ ಕಾರು ಮಾದರಿಗಳಾದ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಹ್ಯುಂಡೈ ಕ್ರೇಟಾ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಬೆಲೆಗಳು ಗಗನಮುಖಿಯಾಗಲಿವೆ.

ಜಿಎಸ್‌ಟಿ ಸೆಸ್ ಹೆಚ್ಚಳ- ಎಸ್‌ಯುವಿ, ಸೆಡಾನ್ ಕಾರುಗಳ ಖರೀದಿ ಇನ್ಮುಂದೆ ದುಬಾರಿ

ಈ ಹಿಂದೆ ಆ.5 ರಂದು ಸಭೆ ನಡೆಸಿದ್ದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಮಧ್ಯಮ ಗಾತ್ರದ ಹಾಗೂ ಎಸ್ ಯುವಿ ಕರುಗಳ ಮೇಲಿನ ಸೆಸ್ ನ್ನು ಏರಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿತ್ತು. ಅಂತಯೇ ಇದೀಗ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಜಿಎಸ್‌ಟಿ ಸೆಸ್ ಹೆಚ್ಚಳ- ಎಸ್‌ಯುವಿ, ಸೆಡಾನ್ ಕಾರುಗಳ ಖರೀದಿ ಇನ್ಮುಂದೆ ದುಬಾರಿ

ಸೆಸ್‌ ಹೆಚ್ಚಿಸುವ ಕುರಿತಂತೆ ಮಾತನಾಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ "ಜಿಎಸ್‌ಟಿಯಂಥ ನೀತಿಯ ಉದ್ದೇಶ ಐಷಾರಾಮಿ ಉತ್ಪನ್ನಗಳ ದರವನ್ನು ಇಳಿಕೆ ಮಾಡುವುದಲ್ಲ. ಬದಲಾಗಿ ಜನ ಸಾಮಾನ್ಯರ ಬಳಕೆಯ ಉತ್ಪನ್ನಗಳು ದುಬಾರಿಯಾಗಬಾರದು ಎನ್ನುವುದು ಕೇಂದ್ರದ ಆಶಯ' ಎಂದಿದ್ದಾರೆ.

ಜಿಎಸ್‌ಟಿ ಸೆಸ್ ಹೆಚ್ಚಳ- ಎಸ್‌ಯುವಿ, ಸೆಡಾನ್ ಕಾರುಗಳ ಖರೀದಿ ಇನ್ಮುಂದೆ ದುಬಾರಿ

ಇನ್ನು ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಸೆಸ್ ದರವನ್ನು ಏರಿಕೆ ಮಾಡಲು 2017 ರ ಜಿಎಸ್ ಟಿ ಕಾಯ್ದೆಯ ಸೆಕ್ಷನ್ 8 ಕ್ಕೆ ತಿದ್ದುಪಡಿ ತರಬೇಕಿದ್ದು, ತದನಂತರವಷ್ಟೇ ಹೊಸ ಮಾದರಿಯ ಸೆಸ್ ದರವನ್ನು ಏರಿಕೆ ಮಾಡಲು ಸಾಧ್ಯ ಎನ್ನಲಾಗಿದೆ.

ಜಿಎಸ್‌ಟಿ ಸೆಸ್ ಹೆಚ್ಚಳ- ಎಸ್‌ಯುವಿ, ಸೆಡಾನ್ ಕಾರುಗಳ ಖರೀದಿ ಇನ್ಮುಂದೆ ದುಬಾರಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜು.1ರಂದು ಜಿಎಸ್‌ಟಿ ಜಾರಿಯಾದ ನಂತರ ಎಸ್‌ಯುವಿ, ಮಧ್ಯಮ ಗಾತ್ರ, ದೊಡ್ಡ ಹಾಗೂ ಐಷಾರಾಮಿ ಕಾರುಗಳ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ ಇದೀಗ ಸೆಸ್‌ ಹೆಚ್ಚಳವಾಗಲಿದ್ದು, ಕಾರುಗಳ ದರವು ಮತ್ತೆ ಏರಿಕೆಯಾಗಲಿವೆ.

Most Read Articles

Kannada
English summary
Read in Kannada about Union Cabinet Approves Hike In GST Cess On Sedans And SUVs.
Story first published: Thursday, August 31, 2017, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X