ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಹ್ಯುಂಡೈ ಕ್ರೆಟಾ ಕಾರನ್ನು ಇತ್ತೀಚೆಗೆ ಭಾರತದಲ್ಲಿ ಪರೀಕ್ಷೆ ನೆಡೆಸಲಾಗುತ್ತಿದ್ದು, ಈ ಎಸ್‌ಯುವಿ ಕಾರಿನ ರಹಸ್ಯ ಚಿತ್ರಗಳು ಅನಾವರಣಗೊಂಡಿವೆ. ಹೀಗಿದ್ದರೂ ಸಹ ಈ ಕಾರಿನ ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಲಿಲ್ಲ.

By Girish

ಸದ್ಯ ಬಿಡುಗಡೆಗೊಂಡಿರುವ ಚಿತ್ರಗಳು ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಮುಂಭಾಗದ ಪ್ರೊಫೈಲ್ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತವೆ. ಸವೋ ಪಾಲೊ ಆಟೋ ಪ್ರದರ್ಶನದಲ್ಲಿ ಮೊದಲ ಬಾರಿಗೆ ಕ್ರೆಟಾ ಕಾರನ್ನು ಅನಾವರಣಗೊಳಿಸಲಾಯಿತು. ಭಾರತ ಮಾದರಿಯು ಸಹ ಇದೇ ರೀತಿಯ ನವೀಕರಣಗಳನ್ನು ಹೊಂದಿದೆ.

ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಹೊಸ ಹ್ಯುಂಡೈ ಕ್ರೆಟಾ ಕಾರು ಮೂರು ಸ್ಲಾಟ್‌ಗಳೊಂದಿಗೆ ಎಕ್ಸ್‌ಆಗನಲ್ ಮುಂಭಾಗದ ಗ್ರಿಲ್ ಹೊಂದಿದೆ ಮತ್ತು ಬ್ರೆಜಿಲ್ ಕೌಂಟರ್‌‌ನಂತೆ ಸುತ್ತುವರಿದ ಹೆಡ್ ಲೈಟ್‌ಗಳನ್ನು ಪಡೆದುಕೊಳ್ಳಲಿದೆ.

ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಪರಿಷ್ಕರಿಸಿದ ಫಾಗ್ ದೀಪಗಳನ್ನು ಈ ಹೊಸ ಫೇಸ್‌ಲಿಫ್ಟ್ ಕಾರಿನಲ್ಲಿ ನೋಡಬಹುದಾಗಿದೆ. ರಹಸ್ಯ ಚಿತ್ರಗಳನ್ನು ಗಮನಿಸಿದಂತೆ, ಮಿಶ್ರಲೋಹದ ಬದಲಾಗಿ ಸ್ಪೋರ್ಟ್ಸ್ ವೀಲ್ ಕ್ಯಾಪ್‌ಗಳನ್ನು ಅಳವಡಿಸಲಾಗಿದೆ.

ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಸಾಕಷ್ಟು ಕ್ರೋಮ್ ವಿನ್ಯಾಸಗಳ ಕೊರತೆ ಕಂಡು ಬಂದಿದ್ದು, ಇದನ್ನು ಗಮನಿಸಿದರೆ ರಸ್ತೆಯ ಮೇಲೆ ಕಾಣಿಸಿಕೊಂಡಿರುವ ಈ ಕಾರು ಬೇಸ್ ರೂಪಾಂತರವಾಗಿದೆ ಎಂದು ಊಹಿಸಬಹುದು. ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವೈಶಿಷ್ಟ್ಯಗಳೊಂದಿಗೆ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಈ ಕ್ರೆಟಾ ಫೇಸ್‌ಲಿಫ್ಟ್ ಪಡೆಯಲಿದೆ.

ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಯಾಂತ್ರಿಕವಾಗಿ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರಿನ 1.6 ಲೀಟರ್ ಪೆಟ್ರೋಲ್ ಎಂಜಿನ್, 123 ಬಿಎಚ್‌ಪಿ ಮತ್ತು 151 ಎನ್ಎಂ ಟಾರ್ಕ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ 89 ಬಿಎಚ್‌ಪಿ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ 126 ಬಿಎಚ್‌ಪಿ ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪರೀಕ್ಷೆ ವೇಳೆ ಮತ್ತೆ ಭಾರತದಲ್ಲಿ ಕಾಣಿಸಿಕೊಂಡ ಹ್ಯುಂಡೈ ಫೇಸ್‌ಲಿಫ್ಟ್ ಎಸ್‌ಯುವಿ ಕಾರು

ಇನ್ನು ಈ ಕಾರು 6-ಸ್ಪೀಡ್ ಮ್ಯಾನ್ಯುಯಲ್ ಮತ್ತು 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹ್ಯುಂಡೈ ಕ್ರೆಟಾ ಕಾರು ದೇಶದಲ್ಲಿ ಹಲವರ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದ್ದು, ಈ ಕಾರಿನ ಫೇಸ್ ಲಿಫ್ಟ್ ಆವೃತಿಯು 2018ರ ಆರಂಭದಲ್ಲಿ ಬಿಡುಗಡೆಯಾಗುವ ಸಂಭವವಿದೆ.

Most Read Articles

Kannada
English summary
Hyundai Creta Facelift Spotted Testing Again In India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X