ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಅತಿ ಹೆಚ್ಚು ಬೇಡಿಕೆ ಹೊಂದಿರುವ ಹ್ಯುಂಡೈ ಐ20 ಆವೃತ್ತಿಯು ಸದ್ಯದಲ್ಲೇ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆ ಹೊಸ ಕಾರಿನ ತಾಂತ್ರಿಕ ಅಂಶಗಳ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

By Praveen

ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಹ್ಯುಂಡೈ ಐ20 ಆವೃತ್ತಿಯು ಸದ್ಯದಲ್ಲೇ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆ ಹೊಸ ಕಾರಿನ ತಾಂತ್ರಿಕ ಅಂಶಗಳ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ದೇಶದ 2ನೇ ಅತಿ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ಸದ್ಯದಲ್ಲೇ ತನ್ನ ಜನಪ್ರಿಯ ಐ20 ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಮುಂಬರುವ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಕಾರು ಮಾದರಿಯನ್ನು ಪ್ರದರ್ಶನ ಮಾಡಿ ಬಿಡುಗಡೆಗೊಳಿಸಿದೆ.

ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಇದಕ್ಕಾಗಿಯೇ ಹೊಸ ಕಾರಿನ ಬಿಡುಗಡೆ ತವಕದಲ್ಲಿರುವ ಹ್ಯುಂಡೈ ಸಂಸ್ಥೆಯು ಐ20 ಫೇಸ್‌ಲಿಫ್ಟ್ ಆವೃತ್ತಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಪುಣೆ ಬಳಿ ಕಾಣಿಸಿಕೊಂಡ ಹೊಸ ಕಾರು ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬದಲಾವಣೆ ಹೊಂದಿರುವುದು ಖಚಿತವಾಗಿದೆ.

Recommended Video

Upcoming Cars India 2018 - DriveSpark
ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಸೆರೆಸಿಕ್ಕ ಚಿತ್ರಗಳ ಪ್ರಕಾರ ಸಿಲ್ವರ್ ಪೇಂಟ್ ಜೊತೆ ಡಾರ್ಕ್ ಟೆನ್-ಸ್ಪೋಕ್ ಅಲಾಯ್ ಚಕ್ರಗಳು, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಬಂಪರ್ ಮೇಲ್ಭಾಗದ ಟೈಲ್ ಲ್ಯಾಂಪ್ ಮತ್ತು ಅತ್ಯುತ್ತಮ ಗ್ರಾಫಿಕ್ ಡಿಸೈನ್ ಹೊಂದಿರುವುದು ಖಚಿತವಾಗಿದೆ.

ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಇನ್ನು ಸುಧಾರಿತ ಕಾರು ಮಾದರಿಗಳ ವೈಶಿಷ್ಟ್ಯತೆಗಳಾದ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದೆ.

ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ವೆರಿಯಂಟ್ ಮತ್ತು 1.4-ಲೀಟರ್ ವೆರಿಯಂಟ್ ಖರೀದಿಗೆ ಲಭ್ಯವಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರುವ ಮಾದರಿಯನ್ನು ಆಯ್ಕೆ ಮಾಡಬಹುದು.

ತಪ್ಪದೇ ಓದಿ- ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಅಂತೆಯೇ ಡಿಸೇಲ್ ಆವೃತ್ತಿಯಲ್ಲಿ 1.4-ಲೀಟರ್ ವೆರಿಯಂಟ್ ಖರೀದಿಗೆ ಲಭ್ಯವಿರಲಿದ್ದು, 6-ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ. ಹೀಗಾಗಿ ಹೊಸ ಕಾರಿನ ಬೆಲೆಗಳು ಪ್ರಸ್ತುತ ಮಾದರಿಗಿಂತ ತುಸು ಹೆಚ್ಚಳವಾಗಲಿವೆ.

ಪುಣೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಹ್ಯುಂಡೈ ಐ20 ಫೇಸ್‌ಲಿಫ್ಟ್

ಬೆಲೆ (ಅಂದಾಜು)

ಮೂಲಗಳ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕ ಆವೃತ್ತಿಗೆ ರೂ. 5.50 ಲಕ್ಷ ಮತ್ತು ಉನ್ನತ ಆವೃತ್ತಿಗೆ 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ತಪ್ಪದೇ ಓದಿ-ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ..!

Most Read Articles

Kannada
Read more on hyundai spy image
English summary
Read in Kannda about Hyundai i20 Facelift Spotted At ARAI In Pune.
Story first published: Friday, December 29, 2017, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X