ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಕಳೆದ ಕೆಲವು ವರ್ಷಗಳಿಂದ ಹಲವಾರು ವಾಹನ ತಯಾರಕ ಜಾಗತಿಕ ತಯಾರಿಕಾ ಕೇಂದ್ರವಾಗಿ ಭಾರತವು ಮಾರ್ಪಟ್ಟಿದೆ. ಸದ್ಯ, ಪ್ರಮುಖ ಕಂಪನಿಗಳು ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತವೆ.

By Girish

ಈ ವರ್ಷದ ಮೊದಲ್ಗೊಂಡು 2017ರ ಹೊತ್ತಿಗೆ ಭಾರತದಲ್ಲಿ ಕಾರುಗಳ ಮಾರಾಟ ನಿಲ್ಲಿಸಿದ್ದ ಷೆವರ್ಲೆ ಜೆನೆರಲ್ ಮೋಟಾರ್ಸ್ (ಜಿಎಂ) ಸಂಸ್ಥೆ, ಭಾರತದಿಂದ ಕೇವಲ ರಫ್ತು ಮಾಡಲು ನಿರ್ಧರಿಸಿತ್ತು. ತನ್ನ ಷೆವರ್ಲೆ ಬೀಟ್ ಆವೃತ್ತಿಯನ್ನು ಭಾರತದಿಂದ ಲ್ಯಾಟಿನ್ ಅಮೇರಿಕಾಗೆ ಸಾಗಾಣಿಕೆಯನ್ನು ಆರಂಭಿಸಿತ್ತು.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಭಾರತದಿಂದ ಯಾವ ಕಾರು ಅತಿ ಹೆಚ್ಚು ರಫ್ತಾಗುತ್ತದೆ ಎಂಬ ಪ್ರೆಶ್ನೆಗೆ ಉತ್ತರ ಸಿಕ್ಕಿದೆ. ಈ ವಿಚಾರವಾಗಿ ಸದ್ಯ ಒಂದು ವರದಿ ಬಂದಿದ್ದು, ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಷೆವರ್ಲೆ ಬೀಟ್ ಹೆಚ್ಚು ರಫ್ತಾಗುವ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಜನರಲ್ ಮೋಟರ್ಸ್ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಎಡ-ಕೈ-ಚಾಲನಾ ಆವೃತಿಯ 45,222 ಬೀಟ್ ಕಾರುಗಳನ್ನು ಚಿಲಿ, ಮಧ್ಯ ಅಮೆರಿಕ, ಪೆರು ಮತ್ತು ಅರ್ಜೆಂಟೀನಾ ದೇಶಗಳ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಹೌದು, ಮಹಾರಾಷ್ಟ್ರದ ತನ್ನ ಟಾಲೆಗಾಂವ್ ಉತ್ಪಾದನಾ ಘಟಕದಲ್ಲಿ ಬೀಟ್ ಕಾರಿನ ಉತ್ಪಾದನೆಯನ್ನು ಜೂನ್ 5, 2017ರಿಂದ ಜೆನೆರಲ್ ಮೋಟಾರ್ಸ್ (ಜಿಎಂ) ಸಂಸ್ಥೆ ಪ್ರಾರಂಭಿಸಿದ್ದು, ಕಡಿಮೆ ಅವಧಿಯಲ್ಲಿ ಈ ಎತ್ತರಕ್ಕೆ ಏರಿರುವುದು ಸಂಸ್ಥೆಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿದೆ.

Recommended Video

[Kannada] BMW 330i Gran Turismo Launched In India - DriveSpark
ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಹೊಸದಾಗಿ ನವೀಕರಿಸಲಾದ ಬೀಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ ನಂತರದ ಬೆಳವಣಿಗೆಗಳಲ್ಲಿ ಜನರಲ್ ಮೋಟಾರ್ಸ್ ವಿಶ್ವದ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲಲಿ ಮಾರಾಟ ಮಾಡದೆ ಇರಲು ನಿರ್ಧರಿಸಿತ್ತು.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಫೋಕ್ಸ್‌ವ್ಯಾಗನ್ ಸಂಸ್ಥೆಯ ವೆಂಟೊ, ಭಾರತದಿಂದ ಎರಡನೇ ಅತಿ ಹೆಚ್ಚು ರಫ್ತು ಮಾಡಲ್ಪಟ್ಟ ಕಾರು ಎಂಬ ಖ್ಯಾತಿ ಪಡೆದುಕೊಂಡಿದೆ. ಈ ವರ್ಷದ ಮೊದಲ ಅರ್ಧ ಭಾಗದಲ್ಲಿ 41,430 ವೆಂಟೊ ಸೆಡಾನ್ ಕಾರುಗಳನ್ನು ಮಾರಾಟ ಮಾಡಿದೆ.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಫೋರ್ಡ್ ಇಕೊಸ್ಪೋರ್ಟ್ ತನ್ನ ಅಗ್ರ ಸ್ಥಾನವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಇಳಿದಿದ್ದು, ಈ ವರ್ಷ ಅಮೆರಿಕಾದ ಈ ವಾಹನ ತಯಾರಕ ಕಂಪನಿಯು 39,935 ಇಕೊಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಮಾರಾಟ ಮಾಡಿದೆ.

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಮೇಕ್ ಇನ್ ಇಂಡಿಯಾ ಪ್ರಭಾವದಿಂದಾಗಿ ಹಲವಾರು ವಾಹನ ತಯಾರಕ ಸಂಸ್ಥೆಗಳು ಭಾರತದಲ್ಲಿ ತಮ್ಮ ವಾಹನಗಳನ್ನು ಉತ್ಪಾದನೆ ಮಾಡಿ ರಫ್ತು ಮಾಡುತ್ತಿದ್ದು, ಜನರಲ್ ಮೋಟರ್ಸ್ ಬೀಟ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ರಫ್ತು ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.

Most Read Articles

Kannada
English summary
The Chevrolet Beat is the most exported car in the first half of the financial year 2018. General Motors recently packed its bags from the Indian market, but it still produces few cars in India for exporting purpose.
Story first published: Saturday, October 28, 2017, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X