ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಭಾರತದ ದೇಶದ ವಿಮೆ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆ ಕಳೆದ ಸೋಮವಾರ ವಾಹನಗಳ ಮೇಲಿನ ‘ಥರ್ಡ್‌ ಪಾರ್ಟಿ’ ವಿಮೆ ದರಗಳನ್ನು ಪರಿಷ್ಕರಿಸಿದೆ.

By Girish

ಸರಕು ಸಾಗಣೆ ವಾಹನ, ದ್ವಿಚಕ್ರ ವಾಹನ ಮತ್ತು ಕಾರುಗಳ ಮೇಲಿನ 'ಥರ್ಡ್‌ ಪಾರ್ಟಿ ವಿಮೆಯನ್ನು 'ಐಆರ್‌ಡಿಎಐ' ಇಳಿಕೆ ಮಾಡಿದ್ದು, ಮಾರ್ಚ್‌ 28ರಂದು ಪ್ರಕಟಿಸಿದ್ದ ದರಗಳಲ್ಲಿ ಈಗ ಕಡಿತ ಮಾಡಲಾಗಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಪ್ರತಿ ವರ್ಷವೂ ಸಹ ವಾಹನಗಳ ಮೇಲಿನ ‘ಥರ್ಡ್‌ ಪಾರ್ಟಿ' ವಿಮೆಯನ್ನು ‘ಐಆರ್‌ಡಿಎಐ' ಪರಿಷ್ಕರಿಸುತ್ತದೆ, ಅದೇ ರೀತಿ ಈ ವರ್ಷವೂ ಸಹ ಭಾರತದ ದೇಶದ ವಿಮೆ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ವಿಮೆಯ ದರಗಳನ್ನು ಪರಿಷ್ಕರಿಸಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಸಾರ್ವಜನಿಕ ಸಾರಿಗೆ ವಾಹನಗಳು (ಮೂರು ಚಕ್ರದ ವಾಹನ ಹೊರತುಪಡಿಸಿ) ಮತ್ತು ಸರಕು ಸಾಗಾಣಿಕೆ ವಾಹನಗಳ ಮೇಲಿನ ವಿಮೆ ದರಗಳನ್ನು ಹೆಚ್ಚಿನ ಮಟ್ಟದಲ್ಲಿ ಇಳಿಕೆ ಮಾಡಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ.

Image source : prajavani

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

"ಹೊಸದಾಗಿ ಬಿಡುಗಡೆಗೊಳಿಸರುವ ಈ ಪ್ರೀಮಿಯಂ ವೇಳಾಪಟ್ಟಿ ಅಧಿಕೃತವಾಗಿ ಏಪ್ರಿಲ್ 1, 2017 ರಿಂದ ಜಾರಿಗೆ ಬರಲಿದೆ'' ಎಂದು ಐಆರ್‌ಡಿಎಐ ನ ಮುಖ್ಯ ಜನರಲ್ ಮ್ಯಾನೇಜರ್ ಯಜ್ಞಪ್ರಿಯ ತಿಳಿಸಿದರು.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

‘ಥರ್ಡ್‌ ಪಾರ್ಟಿ' ವಿಮೆಯನ್ನು ಇಳಿಕೆ ಮಾಡಿದ್ದರೂ ಸಹ ವಿಮೆ ಕಂತಿನ ದರಗಳು ಹಿಂದಿನ ವರ್ಷದ ದರಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಕಳೆದ ವರ್ಷ ರೂ. 15,365 ಇದ್ದ ವಿಮೆ ದರ ರೂ. 24.708 ವರೆಗೆ ಹೆಚ್ಚಿಗೆಯಾಗಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಆದಾಗ್ಯೂ, ಐಆರ್‌ಡಿಎಐ ನ ನಿರ್ಧಾರದಂತೆ ವಾಹನಗಳ ಮೇಲಿನ ಪರಿಷ್ಕೃತ ದರಗಳ ಪ್ರೀಮಿಯಂ ದರಗಳನ್ನು ರೂ. 21,511 ಇಂದ ರೂ. 36,120 ಮತ್ತು ರೂ. 19,667 ರಿಂದ ರೂ. 33,024 ಇಳಿಕೆ ಮಾಡಲಾಗಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ವಿಮೆ ಪರಿಹಾರ ಪ್ರಕರಣಗಳು ಮತ್ತು ವಿಮೆ ಸಂಸ್ಥೆಗಳ ಮೇಲೆ ಬೀಳುವ ಹಣಕಾಸು ಹೊರೆಯ ಅನುಪಾತ ಆಧರಿಸಿ ದರ ಪರಿಷ್ಕರಣೆ ಮಾಡಲಾಗುತ್ತಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಎಲ್ಲಾ ಬಗೆಯ ವಾಹನಗಳ ‘ಥರ್ಡ್‌ ಪಾರ್ಟಿ' ವಿಮೆಯ ಕಂತನ್ನು ಗರಿಷ್ಠ ಶೇ 50ರವರೆಗೆ ಹೆಚ್ಚಿಸುವಂತೆ ಈ ಬಾರಿ ಶಿಫಾರಸು ಮಾಡಲಾಗಿತ್ತು.ಏಪ್ರಿಲ್‌ 1ರಿಂದಲೇ ಅನ್ವಯವಾಗಲಿರುವ ಪರಿಷ್ಕೃತ ದರಗಳನ್ನು ವಿರೋಧಿಸಿ ವಿರೋಧಿಸಿ ಲಾರಿ ಮಾಲೀಕರು ಮುಷ್ಕರ ನಡೆಸಿದ್ದರು.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಸದ್ಯ ಏಪ್ರಿಲ್ ನಂತರ ಥರ್ಡ್‌ ಪಾರ್ಟಿ ವೇಮೆಗಾಗಿ ಸಂಗ್ರಹಿಸಿರುವ ಹಣವನ್ನು ಸಂಬಂಧಪಟ್ಟ ವಿಮ ಕಂಪನಿಗಳು ಪಾಲಿಸಿದಾರರಿಗೆ ಹಿಂದಿರುಗಿಸಬೇಕು ಎಂದು ಐಆರ್‌ಡಿಎಐ ಆದೇಶಿಸಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಸಾಮಾನ್ಯವಾಗಿ ವಾಹನಕ್ಕೆ ಆಗುವ ನಷ್ಟ ಮತ್ತು ಥರ್ಡ್‌ ಪಾರ್ಟಿ ವಿಮೆಯ ಕಂತಿನ ಗರಿಷ್ಠ ಮೊತ್ತವು (ಶೇಕಡ 90) ಸ್ವಂತ ನಷ್ಟಕ್ಕೆ ಮತ್ತು ಶೇಕಡ 10ರಷ್ಟು ಥರ್ಡ್‌ ಪಾರ್ಟಿಗೆ ಸೇರಿರುತ್ತದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

ಥರ್ಡ್‌ ಪಾರ್ಟಿ ಆದ್ರೆ ಏನು ?

1. ಯಾವುದೇ ವಾಹನದಿಂದ ಹಾನಿಗೆ ಒಳಗಾದ ಸ್ವತ್ತು ಮತ್ತು ವ್ಯಕ್ತಿಗಳಿಗೆ ಪರಿಹಾರ ಒದಗಿಸುವ ವಿಮೆಯು ‘ಥರ್ಡ್‌ ಪಾರ್ಟಿ' ವಿಮೆ ಆಗಿರುತ್ತದೆ. ಎಲ್ಲ ಬಗೆಯ ವಾಹನಗಳಿಗೆ ಥರ್ಡ್‌ಪಾರ್ಟಿ ವಿಮೆ ಕಡ್ಡಾಯವಾಗಿದೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

2. ಸಾಮಾನ್ಯವಾಗಿ ವಾಹನ ಮಾಲೀಕರು ವಾಹನದ ಸಮಗ್ರ ವಿಮೆ ಯೋಜನೆ ಖರೀದಿಸುತ್ತಾರೆ. ಇದರಲ್ಲಿ ಎರಡು ವಿಭಾಗಗಳು ಇರುತ್ತವೆ.

ಥರ್ಡ್‌ ಪಾರ್ಟಿ ವಿಮೆ ಮೇಲಿನ ಶುಲ್ಕ ಹಠಾತ್ ಕಡಿತ: ಪರಿಷ್ಕೃತ ಪಟ್ಟಿ ಇಲ್ಲಿದೆ

3. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಈ ವಿಮೆ ಸೌಲಭ್ಯವು ವಾಹನದ ಮಾಲೀಕನಿಗೆ ಮತ್ತು ವಾಹನಕ್ಕೆ ಅನ್ವಯಿಸುವುದಿಲ್ಲ. ಮೂರನೇ ವ್ಯಕ್ತಿಗೆ ಆದ ಗಾಯ, ಸಾವು ಅಥವಾ ಸ್ವತ್ತು ನಷ್ಟದ ಪರಿಹಾರಕ್ಕೆ ಸಂಬಂಧಿಸಿರುತ್ತದೆ.

Most Read Articles

Kannada
Read more on ವಿಮೆ insurance
English summary
Read in Kannada about IRDAI reduces third party insurance rates. Get more details about third party insurance rates, list and more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X