ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಸ್ಥಳೀಯವಾಗಿ ಒಟ್ಟುಗೂಡಿಸಲಾಗಿರುವ ಜಾಗ್ವಾರ್ ಎಫ್-ಪೇಸ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಕಾರು ರೂ.60.02 ಲಕ್ಷ ಎಕ್ಸ್ ಶೋರೂಂ(ಇಂಡಿಯಾ)ದರದಲ್ಲಿ ಲಭ್ಯವಿದೆ.

ಎಫ್-ಪೇಸ್ ಕಾರಿನ 2.0-ಲೀಟರ್ ಪ್ರೆಸ್ಟೀಜ್ ರೂಪಾಂತರವು ಸಂಪೂರ್ಣ ಬಿಲ್ಟ್ ಯುನಿಟ್‌ಗೆ(ಸಿಬಿಯು) ಹೋಲಿಸಿದರೆ ಸುಮಾರು ರೂ.20 ಲಕ್ಷ ಕಡಿಮೆಯಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪುಣೆಯಲ್ಲಿರುವ ತನ್ನ ಘಟಕದಲ್ಲಿ ಎಫ್-ಪೇಸ್ ಕಾರನ್ನು ಜೋಡಿಸುವ ನಿರ್ಧಾರ ಕೈಗೊಂಡಿರುವುದು ಬೆಲೆ ಕಡಿತಕ್ಕೆ ಮುಖ್ಯ ಕಾರಣವಾಗಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಜೆಎಲ್ಆರ್ ಇಂಡಿಯಾ ಸಂಸ್ಥೆಯು ಕೇವಲ 2018ರ ಮಾದರಿಯ 20 DWD ಪ್ರೆಸ್ಟೀಜ್ ರೂಪಾಂತರವನ್ನು ಮಾತ್ರ ಸ್ಥಳೀಯ ಜೋಡಣೆ ಮಾಡಲು ನಿರ್ಧರಿಸಿತ್ತು. ಸದ್ಯ ಲಭ್ಯವಿರುವ ಏಕೈಕ ಮಾದರಿ ಇದಾಗಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಹೆಚ್ಚು ಶಕ್ತಿಶಾಲಿಯಾಗಿರುವ ಜಾಗ್ವಾರ್ ಎಫ್-ಪೇಸ್ 30ಡಿ ಕಾರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಜಾಗ್ವಾರ್ ಎಫ್-ಪೇಸ್ 20ಡಿ ಕಾರು 2.0 ಲೀಟರ್, ಟರ್ಬೊಚಾರ್ಜ್ಡ್, ನಾಲ್ಕು ಸಿಲಿಂಡರ್ ಇಂಜಿನಿಯಂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಈ ಎಂಜಿನ್ 179 ಬಿಎಚ್‌ಪಿ ಮತ್ತು 430 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 8 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಸಹಾಯದೊಂದಿಗೆ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ಕಳುಹಿಸುತ್ತದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಜಗ್ವಾರ್ ಎಫ್-ಪೇಸ್ 20ಡಿ ಪ್ರೆಸ್ಟೀಜ್ ಟ್ರಿಮ್ ಕಾರು, ಜಾಗ್ವಾರ್ ಡ್ರೈವ್ ಕಂಟ್ರೋಲ್, ಎಲ್ಇಡಿ ಹೆಡ್ ಲೈಟ್‌ಗಳು ಟೈಲ್ ದೀಪಗಳು, 380ವಿ ಮೆರಿಡಿಯನ್ ಸೌಂಡ್ ಸಿಸ್ಟಮ್, 12.3 ಇಂಚಿನ ಇನ್ಸ್ಟ್ರು‌ಮೆಂಟ್ ಪರದೆ, ವೈ-ಫೈ ಹಾಟ್ಸ್‌ಪಾಟ್ ಮತ್ತು ಪ್ರೊ ಸೇವೆಗಳು, ಚಟುವಟಿಕೆ ಕೀಲಿ ಮತ್ತು 10.2 ಇಂಚಿನ ಟಚ್‌ಸ್ಕ್ರೀನ್ ಪರದೆ ಒಳಗೊಂಡಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಜಗ್ವಾರ್ ಎಫ್-ಪೇಸ್ ಬ್ರ್ಯಾಂಡ್ ಉತ್ಪನ್ನದ ಪಟ್ಟಿಯ 6ನೇ ಮಾದರಿಯಾಗಿದೆ. ಇದು ಸ್ಥಳೀಯವಾಗಿ ಭಾರತದಲ್ಲಿ ತಯಾರಿಸಲ್ಪಡುತ್ತದೆ. ಎಫ್-ಪೇಸ್ 20ಡಿ ಪ್ರೆಸ್ಟೀಜ್ 2.0 ಡೀಸೆಲ್ ಮಾದರಿಯು ಆನ್ಲೈನ್ ಬುಕಿಂಗ್ (www.findmeacar.in)ನಲ್ಲಿ ಕೂಡ ಲಭ್ಯವಿದೆ.

ಭಾರತದಲ್ಲೇ ಜೋಡಣೆಗೊಂಡ ಜಾಗ್ವಾರ್ ಎಫ್-ಪೇಸ್ ಕಾರು ಬಿಡುಗಡೆ; ಬೆಲೆ ರೂ.60.02 ಲಕ್ಷ

ಸ್ಥಳೀಯವಾಗಿ ಜಾಗ್ವಾರ್ ಎಫ್-ಪೇಸ್ 20ಡಿ ಕಾರನ್ನು ಜೋಡಿಸುವ ನಿರ್ಧಾರದೊಂದಿಗೆ ಜೆಎಲ್ಆರ್ ಕಂಪನಿಯು ಈ ಎಸ್‌ಯುವಿ ಕಾರಿನ ಬೆಲೆಯನ್ನು ಕಡಿಮೆಗೊಳಿಸುವ ಮೂಲಕ ತನ್ನ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ ಎನ್ನಬಹುದು.

Most Read Articles

Kannada
English summary
Locally assembled Jaguar F-Pace launched in India. The new Jaguar F-Pace is priced at Rs 60.02 lakh ex-showroom (India).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X