ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೇಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಗೊಂಡಿರುವ ಜೀಪ್ ಕಂಪಾಸ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆಗೆಗೊಂಡಿದ್ದು, ಬೆಲೆಗಳ ವಿಚಾರವಾಗಿ ಭಾರೀ ಸದ್ದು ಮಾಡುತ್ತಿದೆ.

By Praveen

ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಗೊಂಡಿರುವ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಭಾರತದಲ್ಲಿ ಬಿಡುಗಡೆಗೆಗೊಂಡಿದ್ದು, ಬೆಲೆಗಳ ವಿಚಾರವಾಗಿ ಭಾರೀ ಸದ್ದು ಮಾಡುತ್ತಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಜೀಪ್ ಸಂಸ್ಥೆಯ ಬಹುನೀರಿಕ್ಷಿತ ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತ ಕಡಿಮೆ ಬೆಲೆಗಳಿಗೆ ಬಿಡುಗಡೆಗೊಂಡಿದ್ದು, ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆ ರೂ.14.19 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.20.65 ಲಕ್ಷಕ್ಕೆ ಲಭ್ಯವಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯಲ್ಲಿ ಮಾತ್ರ 4x4 ಮಾದರಿಯನ್ನು ಪರಿಚಯಿಸಲಾಗಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಜೀಪ್ ಉತ್ಪಾದನೆಯ ಗ್ರ್ಯಾಂಡ್ ಚರೋಕಿ ಎಸ್‌ಯುವಿಯ ವೈಶಿಷ್ಟ್ಯತೆಗಳ ಹೋಲಿಕೆ ಪಡೆದುಕೊಂಡಿರುವ ಜೀಪ್ ಕಂಪಾಸ್ ಹೊಸ ಆವೃತ್ತಿಗಳು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡಿಆರ್‌ಎಲ್‌ಗಳ ಅಳವಡಿಕೆ ಹೊಂದಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಬೆಲೆಗಳ ಪಟ್ಟಿ (ಡಿಸೇಲ್ ಆವೃತ್ತಿ)

ಡಿಸೇಲ್ ಮಾದರಿಗಳು ಬೆಲೆಗಳು ಎಕ್ಸ್‌ಶೋರಂ (ದೆಹಲಿ)
ಸ್ಪೋರ್ಟ್ ರೂ. 15,45,000

ಲ್ಯಾಂಗಿಟ್ಯುಡ್ ರೂ. 16,45,000

ಲ್ಯಾಂಗಿಟ್ಯುಡ್ ಆಪ್ಷನ್ ರೂ. 17,25,000

ಲಿಮಿಟೆಡ್ ರೂ. 18,05,000

ಲಿಮಿಟೆಡ್ ಆಪ್ಷನ್ ರೂ. 18,75,000

ಲಿಮಿಟೆಡ್ 4x4 ರೂ. 19,95,000

ಲಿಮಿಟೆಡ್ ಆಫ್ಷನ್ 4x4 ರೂ. 20,65,000

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಪೆಟ್ರೋಲ್ ಆವೃತ್ತಿಗಳ ಬೆಲೆ

ಪೆಟ್ರೋಲ್ ಮಾದರಿ ಬೆಲೆಗಳು/ಎಕ್ಸ್‌ಶೋರಂ (ದೆಹಲಿ)
ಸ್ಪೋರ್ಟ್ ರೂ. 14,95,000
ಲಿಮಿಟೆಡ್ ರೂ. 18,70,000
ಲಿಮಿಟೆಡ್ ಆಪ್ಷನ್ ರೂ. 19,40,000

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಎಂಜಿನ್

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಹೀಗಾಗಿ ಡಿಸೇಲ್ ಕಾರು ಆವೃತ್ತಿಯು 171-ಬಿಎಚ್‌ಪಿ, 350ಎನ್ಎಂ ಟಾರ್ಕ್ ಉತ್ಪಾದಿಸಿದರೆ ಅದೇ ರೀತಿಯಾಗಿ ಪೆಟ್ರೋಲ್ ಆವೃತ್ತಿಗಳು 160-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್, ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹಿಂದೆಂದಿಗಿಂತಲೂ ಉತ್ತಮ ವಿನ್ಯಾಸಗಳನ್ನು ಹೊಚ್ಚ ಹೊಸ ಜೀಪ್ ಕಂಪಾಸ್ ಪಡೆದುಕೊಂಡಿದ್ದು, ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ದೊಡ್ಡದಾದ ಜೀಪ್ ಬ್ಯಾಡ್ಜ್‌ಗಳನ್ನು ಪಡೆದುಕೊಂಡಿರುವುದು ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಇನ್ನು 16 ಇಂಚಿನ ಮಿಶ್ರಲೋಹದ ಚಕ್ರಗಳು ಕೂಡಾ ಜೀಪ್ ಕಂಪಾಸ್ ಬಲಿಷ್ಠತೆ ಪುಷ್ಠಿ ನೀಡುವಂತಿದ್ದು, ಒಳಭಾಗದಲ್ಲಿನ ಡ್ಯುಯಲ್ ಟೋನ್ ಥೀಮ್ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯದೇ ಇರಲಾರದು.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು ಮತ್ತು ಮೇಲ್ಛಾವಣೆ, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಸೌಲಭ್ಯಗಳನ್ನು ಹೊಂದಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದೆ.

Recommended Video

Tata Nexon: Tata's New SUV (Nexon) For India | First Look - DriveSpark
ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಇದಲ್ಲದೇ ಕೀ ಲೇಸ್ ಡ್ರೈವಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಇತರೆ ಸೌಲಭ್ಯಗಳು

ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ರೂಪಿಸಿರುವ ಜೀಪ್ ಕಂಪಾಸ್, ಮೂರು ವರ್ಷಗಳ ಕಾಲ ಹೊಸ ಕಾರುಗಳ ಮೇಲೆ ರೋಡ್ ಸೈಡ್ ಅಸಿಸ್ಟೇನ್ಸ್ ಸೌಲಭ್ಯ ನೀಡಲಾಗುತ್ತಿದೆ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೆಡ್ ಇನ್ ಇಂಡಿಯಾ' ಜೀಪ್ ಕಂಪಾಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಮಾದರಿಗಳಲ್ಲೇ ಇದೊಂದು ಅತ್ಯುತ್ತಮ ಆವೃತ್ತಿಯಾಗಿದ್ದು, ಕೈಗೆಟುವ ದರಗಳಲ್ಲಿ ಜೀಪ್ ಕಂಪಾಸ್ ಲಭ್ಯವಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜೀಪ್ ಕಂಪಾಸ್ ಮತ್ತಷ್ಟು ಜನಪ್ರಿಯತೆ ಹೊಂದುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಬಹುದು.

Most Read Articles

Kannada
Read more on ಜೀಪ್ jeep
English summary
Read in Kannada about Jeep Compass Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X