ಪತ್ರಕರ್ತೆ ಗೌರಿ ಹತ್ಯೆಗೂ ಹೊಸ ನಂಬರ್ ಪ್ಲೇಟ್ ನಿಯಮಕ್ಕೂ ಏನ್ ಸಂಬಂಧ ?

ವಾಹನಗಳ ಸುರಕ್ಷತೆ ಖಾತ್ರಿ ಮತ್ತು ‘ಐಎನ್​ಡಿ‘ ಫಲಕಗಳ ಹೆಸರಲ್ಲಿ ನೆಡೆಯುತ್ತಿರುವ ನಕಲಿ ನಂಬರ್ ಪ್ಲೇಟ್ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

By Girish

ವಾಹನಗಳ ಸುರಕ್ಷತೆ ಖಾತ್ರಿ ಮತ್ತು 'ಐಎನ್​ಡಿ' ಫಲಕಗಳ ಹೆಸರಲ್ಲಿ ನೆಡೆಯುತ್ತಿರುವ ನಕಲಿ ನಂಬರ್ ಪ್ಲೇಟ್ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

2001ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸೆಂಟ್ರಲ್ ಮೋಟರ್ ವೆಹಿಕಲ್ ಶಾಸನದ ಅಡಿಯಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಇದರಿಂದಾಗಿ ಡಿಸೈನ್ ಡಿಸೈನ್ ಆಗಿ ನಂಬರ್ ಪ್ಲೇಟ್ ಹಾಕಿಸುತ್ತಿದ್ದ ಸ್ಟೈಲ್‍ಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ನಿಯಮ ತರುತ್ತಿರುವ ಮೊದಲ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದ್ದು, ಸಾರಿಗೆ ಸಚಿವ ರೇವಣ್ಣ ಅವರು ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಿರುತ್ತಿರುವುದು ಮತ್ತೊಂದು ವಿಶೇಷ ಎನ್ನಬಹುದು.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನ ಅಪರಾಧಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ರಾಜ್ಯ ಸಾರಿಗೆ ಸಚಿವ ಎಚ್.ಎಂ. ರೇವಣ್ಣನವರು, ಒಂದೇ ಮಾದರಿಯ ಹೊಸ ನಂಬರ್ ಪ್ಲೇಟ್ ಅಳವಡಿಕೆಗೆ ಅಗತ್ಯವಿರುವ ಸೂಕ್ತ ಕ್ರಮಗಳನ್ನೂ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ರಾಜ್ಯದಲ್ಲಿರೋ ಸರಿ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ಗಳನ್ನು ಬದಲಾವಣೆ ಪ್ರಕ್ರಿಯೆ ನೆಡೆಯಲಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ ಎಂಬ ಮಾಹಿತಿ ಬಂದಿದೆ. ಹೊಸ ನಂಬರ್ ಪ್ಲೇಟ್ ದುಬಾರಿಯಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಬಹುದು ಎನ್ನಲಾಗಿದೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ ರೂ.1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆಗೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ ಸರಿಸುಮಾರು ರೂ. 2200 ರೂಪಾಯಿ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

2009ರಲ್ಲೇ ಈ ಕಾಯ್ದೆ ಜಾರಿಗೆ ಬಂದಿದ್ದರೂ ರಾಜ್ಯದಲ್ಲಿ ಈ ನಿಯಮವನ್ನು ಗಂಭೀರವಾಗಿ ಅನುಷ್ಠಾನಗೊಳಿಸಿರಲಿಲ್ಲ. ಇನ್ನು, ಹಳೆಯ ಐಎನ್‍ಡಿ ಪ್ಲೇಟ್ ಬದಲಾಗಿ ಹೊಸ ವಿನ್ಯಾಸ ಪಡೆದ ಪ್ಲೇಟ್ ಇದಾಗಲಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಸಾರಿಗೆ ಸಚಿವರು ಹೇಳಿಕೆ ನೀಡಿದ್ದಾರೆ.

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ಒಂದು ವಾರದೊಳಗೆ ಎಲ್ಲ ಬಗೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಈ ನಂಬರ್ ಪ್ಲೇಟ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಡ್ರೈವ್ ಸ್ಪಾರ್ಕ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿಗಳು :

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ದೆಹಲಿ ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಆರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಅರ್ಧಕ್ಕೆ ಕೈಕೊಟ್ಟ ಸೌದಿ ರಾಜನ ಚಿನ್ನದ ಎಸ್ಕಲೇಟರ್- ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್..!!

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ಹೊಸ ನಂಬರ್ ಪ್ಲೇಟ್ ಅನುಕೂಲಗಳು :

1. ವಾಹನ ಸಂಖ್ಯೆಯ ಫಾಂಟ್ ಹಾಗೂ ಗಾತ್ರ ನಿಗದಿ

2. ಕತ್ತಲಲ್ಲಿಯೂ ಸುಲಭವಾಗಿ ಕಾಣುವಂತಹ ರೇಡಿಯಂ ಬಣ್ಣ

3. ಕ್ರೋಮಿಯಂ ಹಾಲೋಗ್ರಾಮ್ ಲೇಸರ್ ನಂಬರ್ ಪ್ಲೇಟ್

4. ಸ್ವಂತ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಹಾಗೂ ಬಸ್‍ಗಳಿಗೆ ಪ್ರತ್ಯೇಕ ಇಂಗ್ಲೀಷ್ ಅಕ್ಷರ

5. 45 ಡಿಗ್ರಿ ಕೋನದಲ್ಲಿಯೂ ಓದುವಂತೆ ಅಕ್ಷರ ವಿನ್ಯಾಸ

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ನಿಷೇದ :

1. ಬಿಳಿ ಬಣ್ಣದ ಪ್ಲೇಟ್ ಮೇಲೆ ವಕ್ರ ವಕ್ರ ಆಕಾರದಲ್ಲಿ ಅಕ್ಷರಗಳನ್ನು ಮುದ್ರಿಸಬಾರದು

2. ಕೇವಲ ಕಪ್ಪು ಬಣ್ಣದಿಂದ ಮಾತ್ರ ಅಕ್ಷರಗಳನ್ನು ಮುದ್ರಿಸಬೇಕು

3. ವಿವಿಧ ಆಕಾರದ ಪ್ಲೇಟ್ ಬಳಸಬಾರದು

4. ನಂಬರ್ ಪ್ಲೇಟ್‌ ಮೇಲೆ ಚಿಹ್ನೆ, ಚಿತ್ರಗಳನ್ನು ಮುದ್ರಿಸಬಾರದು

5. ಫಲಕದಲ್ಲಿ ವಾಹನ ಸಂಖ್ಯೆ ಹೊರತಾಗಿ ಮತ್ಯಾವುದೇ ಅಕ್ಷರಗಳು ಇರಕೂಡದು.

6. ಈ ಫಲಕವನ್ನು ಆರ್​ಟಿಒ ಕಚೇರಿ ಆವರಣದ ಹೊರಗೆ ಮಾರುವ ಹಾಗಿಲ್ಲ

ಈ ನಂಬರ್ ಪ್ಲೇಟ್ ನಿಯಮ ಜಾರಿಗೊಳಿಸಿದ 'ಮೊದಲ ರಾಜ್ಯ'ವಾಗಲಿದೆ ಕರ್ನಾಟಕ

ಇತ್ತೀಚಿಗೆ ಹತ್ಯೆಯಾದ ಪತ್ರಕರ್ತೆ ಗೌರಿಯವರನ್ನು ಕೊಂದ ಹಂತಕರು ಬೈಕ್‍ನಲ್ಲಿ ಓಡಾಡಿರುವ ದೃಶ್ಯ ಸಿಕ್ಕಿದ ಮೇಲೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲದೇ ಇರುವುದು ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.

Most Read Articles

Kannada
English summary
Just days after Revanna took charge as Karnataka's new transport minister, he has planned to come up with a new system to introduce number plates to all vehicles across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X