Just In
Don't Miss!
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ
ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಯಶಸ್ವಿ ಸ್ವಿಫ್ಟ್ ಕಾರಿನ ಸ್ಪೋರ್ಟ್ ಆವೃತಿಯನ್ನು ಭಾರತದಲ್ಲಿ ಬಿಡುಗಡೆಗೆ ಯೋಜನೆ ರೂಪಿಸುತ್ತಿದ್ದು, ಈ ಕಾರಿನ ವಿಶೇಷತೆಗಳು ಸೋರಿಕೆಯಾಗಿವೆ.

ಸ್ಪೋರ್ಟ್ ಕಾರು ಬಿಡುಗಡೆಗೊಳಿಸಲು ಮುಂದಾಗಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದು, ಈ ವಿಶೇಷ ರೀತಿಯ ಕಾರಿನ ಅಧಿಕೃತ ಅನಾವರಣಕ್ಕೂ ಮೊದಲೇ ಎಲ್ಲ ವಿಶೇಷತೆಗಳು ಮತ್ತು ಇತರ ವಿವರಗಳು ಸೋರಿಕೆ ಮಾಡಲಾಗಿದೆ.

ಹ್ಯುಂಡೈ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ದೃಷ್ಟಿಯಲ್ಲಿ ಅಭಿವೃದ್ದಿಯಾಗಿರುವ ಈ ಸ್ಪೋರ್ಟ್ ಮಾದರಿಯು ಇತ್ತೀಚೆಗೆ ಟೆಸ್ಟಿಂಗ್ ವೇಳೆ ಭಾರತದಲ್ಲಿ ಕಾಣಿಸಿಕೊಂಡಿದ್ದು, ಸದ್ಯದರಲ್ಲಿಯೇ ಅನಾವರಣಗೊಳ್ಳುವ ಸೂಚನೆ ನೀಡಿದೆ.

ಸುಜುಕಿ ಈಗಾಗಲೇ ಹೊಚ್ಚ ಹೊಸ ಸ್ವಿಫ್ಟ್ ಕಾರು ಅನಾವರಣಗೊಳಿಸಿದ್ದು, ಈ ಕಾರು ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಮುಂದಿನ ವಾರ ನಡೆಯಲಿರುವ ಫ್ರಾಂಕ್ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಈ ಕ್ರೀಡಾ ಆವೃತಿಯ ಸ್ವಿಫ್ಟ್ ಕಾರನ್ನು ಜನಪ್ರಿಯ ಜಪಾನ್ ದೈತ್ಯ ಕಾರು ತಯಾರಕ ಕಂಪನಿಯು ಅನಾವರಣಗೊಳಿಸಲಿದೆ.

ಮೂಲಗಳ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಪೋರ್ಟ್ ಸುಜುಕಿ ಸ್ವಿಫ್ಟ್ ಆವೃತ್ತಿಯ ಕಾರು 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊಚಾರ್ಜ್ಡ್ ಬೂಸ್ಟರ್ ಜೆಟ್ ಆಯ್ಕೆ ಪಡದು ಅನಾವರಣಗೊಳ್ಳಲಿದೆ. ಈ ಎಂಜಿನ್ 230 ಎನ್ಎಂ ತಿರುಗುಬಲದಲ್ಲಿ 138 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಈ ಕಾರಿನ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಮತ್ತು ಮುಂಭಾಗದ ಚಕ್ರಗಳನ್ನು ಶಕ್ತಿಯನ್ನು ಕಳುಹಿಸುವ ಸ್ವಯಂಚಾಲಿತ ಪ್ರಸರಣೆಯ ಸಂಯೋಜನೆಯೊಂದಿಗೆ ಬಿಡುಗಡೆಯಾಗಲಿದೆ.